ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆ ಇಂದಿನಿಂದ

ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಜುಲೈ ೩೦ ಮತ್ತು ೩೧ರಂದು ಎಲ್ಲ ಜಿಲ್ಲಾಧಿಕಾರಿಗಳು ಮತ್ತು‌ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಸಭೆ ಆಯೋಜಿಸಲಾಗಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಆಡಳಿತ ಯಂತ್ರಕ್ಕೆ ವೇಗ ನೀಡಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಭೆ ನಡೆಸುತ್ತಿದ್ದಾರೆ.

ಮೂರು ದಶಕದ ಬಳಿಕ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವ ಜಿಂಬಾಬ್ವೆ

ಜಿಂಬಾಬ್ವೆ ದೇಶದಲ್ಲಿ ಮೂರು ದಶಕದ ಬಳಿಕ ಇಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮೂವತ್ತು ವರ್ಷ ಆಡಳಿತ ನಡೆಸಿದ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರು ಕಳೆದ ನವೆಂಬರ್‌ನಲ್ಲಿ ಅಧಿಕಾರದ ಕೆಳಗಿಳಿದಿದ್ದರು. ತರುವಾಯ ಎಮ್ಮರ್ ಸನ್ ನಂಗಾಗ್ವ ಅಧ್ಯಕ್ಷರು ಆಗಿದ್ದರು. ಜಿಂಬಾಬ್ವೆ ಚುನಾವಣಾ‌ ಆಯೋಗ ಮೂರು‌ ದಶಕದ‌ ನಂತರ ಸಾರ್ವತ್ರಿಕ ಚುನಾವಣೆ ನಡೆಸಲು ಮುಂದಾಗಿದೆ. ಈ ಮಧ್ಯೆ, ಸಾವಿರಾರು ಜನರು ಇತ್ತೀಚೆಗೆ ರ್ಯಾಲಿ ನಡೆಸಿ ಪಾರದರ್ಶಕ ಚುನಾವಣೆಗೆ ಒತ್ತಾಯಿಸಿದ್ದಾರೆ.

ಭಾರತಕ್ಕೆ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಪರೀಕ್ಷೆ

ಪಿ ವಿ ಸಿಂಧು, ಸೈನಾ ನೆಹ್ವಾಲ್, ಕಿಡಾಂಬಿ ಶ್ರೀಕಾಂತ್‌, ಎಚ್ ಎಸ್ ಪ್ರಣಯ್‌ರಂಥ ಭಾರತದ ಪ್ರಮುಖ ಶಟ್ಲರ್‌ಗಳಿಗೆ ಇಂದಿನಿಂದ ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಪರೀಕ್ಷೆ ಶುರುವಾಗಿದೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಸಮೀರ್ ವರ್ಮಾ ಇಂದು ಕಣಕ್ಕಿಳಿಯಲಿದ್ದಾರೆ. ಎಚ್ ಎಸ್ ಪ್ರಣಯ್, ಕಿಡಾಂಬಿ ಶ್ರೀಕಾಂತ್ ಮತ್ತು ವನಿತೆಯರ ವಿಭಾಗದ ಮೊದಲ ಸುತ್ತಿನಲ್ಲಿ ಬೈ ಪಡೆದಿರುವ ಸೈನಾ, ನಾಳೆ ಕಣಕ್ಕಿಳಿಯಲಿದ್ದಾರೆ. ಪ್ರಮುಖ ಟೂರ್ನಿಗಳಲ್ಲಿ ಫೈನಲ್‌ನಲ್ಲಿ ಎಡವುತ್ತಿರುವ ಪಿ ವಿ ಸಿಂಧು ಮಾತ್ರವಲ್ಲದೆ, ಭಾರತದ ಎಲ್ಲ ಸ್ಪರ್ಧಿಗಳಿಗೂ ಈ ಬಾರಿಯ ವಿಶ್ವಕಪ್ ಆವೃತ್ತಿ ಭಾರೀ ಸವಾಲೊಡ್ಡುವ ನಿರೀಕ್ಷೆ ಇದೆ. ಕಿಡಾಂಬಿ ಶ್ರೀಕಾಂತ್, ಸಿಂಧು ಮಾತ್ರವಲ್ಲದೆ, ಸೈನಾ ಮೇಲೂ ಪದಕದ ನಿರೀಕ್ಷೆಯ ಭಾರವಿದೆ. ಚೀನಾದ ನ್ಯಾನ್‌ಜಿಂಗ್‌ನಲ್ಲಿ ನಡೆಯಲಿರುವ ಟೂರ್ನಿಯ ನೇರಪ್ರಸಾರದ ಹೊಣೆಯನ್ನು ಸ್ಟಾರ್ ಸ್ಪೋರ್ಟ್ಸ್ ೨ / ಹೆಚ್‌ಡಿ ಹೊತ್ತಿದೆ.

ಅಸ್ಸಾಂನ ರಾಷ್ಟ್ರೀಯ ನಾಗರಿಕರ ನೋಂದಣಿ ಎರಡನೇ ಪಟ್ಟಿ ಬಿಡುಗಡೆ ಇಂದು

ಅಸ್ಸಾಂ ರಾಜ್ಯದ ಒಂದು ಕೋಟಿ ಜನಸಂಖ್ಯೆಯ ಭವಿಷ್ಯವನ್ನು ನಿರ್ಧರಿಸುವ ನಾಗರಿಕರ ರಾಷ್ಟ್ರೀಯ ನೋಂದಣಿಯ (ಎನ್ಆರ್ಸಿ) ಎರಡನೇ ಪಟ್ಟಿ ಇಂದು ಬಿಡುಗಡೆಯಾಗಲಿದೆ. ನವೀಕರಿಸಿದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಅಂತಿಮ ಕರಡು ಪ್ರಕಟವಾಗಲಿದೆ. ಎನ್ಆರ್ಸಿಯ ಮೊದಲ ಕರಡನ್ನು ವರ್ಷದ ಆರಂಂಭದಲ್ಲಿ ಅಲ್ಲಿನ ಸರ್ಕಾರ ಬಿಡುಗಡೆ ಮಾಡಿತ್ತು. ಅಸ್ಸಾಂನ ಒಟ್ಟು 3.29 ಕೋಟಿ ಅರ್ಜಿದಾರರಲ್ಲಿ 1.90 ಕೋಟಿ ಜನರ ಹೆಸರುಗಳನ್ನು ಭಾರತದ ಕಾನೂನುಬದ್ಧ ನಾಗರಿಕರು ಎಂದು ಗುರುತಿಸಲಾಗಿತ್ತು. ಎನ್ಆರ್ಸಿ ರಾಜ್ಯ ಸಂಯೋಜಕರಾಗಿರುವ ಪ್ರತೀಕ್ ಹಜೆಲಾ ಮತ್ತು ಅವರ ಅಧಿಕಾರಿಗಳ ತಂಡ ಈಗ ಎನ್ಆರ್ಸಿ ಎರಡನೇ ಕರಡು ಪ್ರತಿಯನ್ನು ಪ್ರಕಟಿಸಲು ತಯಾರಿ ನಡೆಸುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More