ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಇಂದು ಮಧ್ಯಾಹ್ನದಿಂದ #KarnatakaVonde ಟ್ವಿಟರ್ ಅಭಿಯಾ‌ನ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಪರ ವಿರೋಧ ವ್ಯಕ್ತವಾಗುತ್ತಿರುವ ನಡುವೆಯೇ ಈ ಬೇಡಿಕೆಯ ವಿರುದ್ಧವಾಗಿ ಬನವಾಸಿ ಕನ್ನಡ ಬಳಗವು ಇಂದು ಮಧ್ಯಾಹ್ನ ೨ ಗಂಟೆಯಿಂದ ಟ್ವಿಟರ್ ಅಭಿಯಾನ ಆರಂಭಿಸಲಿದೆ. #KarnatakaVonde ಹ್ಯಾಷ್ ಟ್ಯಾಗ್‌ ಮೂಲಕ ಅಭಿಪ್ರಾಯ ಮೂಡಿಸಲು ನಿರ್ಧರಿಸಲಾಗಿದೆ. ರಾಜ್ಯ ಇಬ್ಭಾಗವಾದರೆ ಆಗುವ ನಷ್ಟ, ಹಿರಿಯ ತ್ಯಾಗ ಬಲಿದಾನಗಳ ಕುರಿತು ಸರಣಿ ಟ್ವೀಟ್‌ಗಳ ಮೂಲಕ ಅಖಂಡ ಕರ್ನಾಟಕದ ಪರ ಅಭಿಪ್ರಾಯ ಮೂಡಿಸಲಾಗುತ್ತದೆ.

ಇಂದು ಆರ್‌ಬಿಐ ದ್ವೈಮಾಸಿಕ ಹಣಕಾಸು ನೀತಿ ಸಮಿತಿಯಿಂದ ಬಡ್ಡಿ ದರ ನಿರ್ಧಾರ

ಭಾರತೀಯ ರಿಸರ್ವ್ ಬ್ಯಾಂಕ್ ದ್ವೈಮಾಸಿಕ ಹಣಕಾಸು ನೀತಿ ಸಮಿತಿ ಬುಧವಾರ ಬಡ್ಡಿ ದರ (ರೆಪೊ ದರ) ಪ್ರಕಟಿಸಲಿದೆ. ಜೂನ್ ತಿಂಗಳಲ್ಲಿ ಶೇ.0.25ರಷ್ಟು ಬಡ್ಡಿ ದರ ಏರಿಸಿದ್ದ ಆರ್‌ಬಿಐ ಈಗಲೂ ಶೇ.0.25 ರಷ್ಟು ಬಡ್ಡಿ ದರ ಹೆಚ್ಚಿಸುವ ನಿರೀಕ್ಷೆ ಮಾರುಕಟ್ಟೆಯಲ್ಲಿ ಇದೆ. ಏರುತ್ತಿರುವ ಕಚ್ಚಾ ತೈಲ, ಡಾಲರ್ ವಿರುದ್ಧ ಕುಸಿಯುತ್ತಿರುವ ರುಪಾಯಿ, ಅದರಿಂದಾಗಿ ಹೆಚ್ಚುತ್ತಿರುವ ಹಣದುಬ್ಬರ ನಿಯತ್ರಿಸಲು ಬಡ್ಡಿ ದರ ಏರಿಕೆ ಅನಿವಾರ್ಯ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಜೂನ್ ತಿಂಗಳಲ್ಲಿ ಚಿಲ್ಲರೆ ದರ ಹಣದುಬ್ಬರ ಶೇ.5ರ ಗಡಿ ದಾಟಿರುವುದು, ಡಾಲರ್ ವಿರುದ್ದ ರುಪಾಯಿ 69ರ ಆಜುಬಾಜಿಗೆ ಕುಸಿದಿರುವುದು ಬಡ್ಡಿ ದರ ಏರಿಕೆಗೆ ಕಾರಣವಾಗಲಿರುವ ಪ್ರಮುಖ ಅಂಶಗಳು.

ಇಂದು ತೆಲಂಗಾಣದಲ್ಲಿ ಹರಿತ ಹರಂ ಯೋಜನೆಗೆ ಚಾಲನೆ

ರಾಜ್ಯವನ್ನು ಹಸಿರಾಗಿಸಲು ಪಣತೊಟ್ಟಿರುವ ತೆಲಂಗಾಣ ಸರ್ಕಾರ, 'ಹರಿತ ಹರಂ' ಎಂಬ ಯೋಜನೆಯಡಿ 1 ಲಕ್ಷ ಗಿಡ ನಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕ್ರಮ ಕೈಗೊಂಡಿದೆ. ಇಂದು ಗಜ್ವೇಲ್ ನಗರದ ಬಳಿ 1 ಲಕ್ಷ ಗಿಡಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಿಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ 20000 ಗಿಡಗಳನ್ನು ಕೂಡ ನೆಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್ ಪಂದ್ಯ ಇಂದು

ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಇಂದಿನ ಪ್ರಮುಖ ಆಕರ್ಷಣೆ. ೨೦೧೩, ೧೪ರಲ್ಲಿ ಸತತ ಎರಡು ಬೆಳ್ಳಿ ಪದಕ ಗೆದ್ದ ಸಿಂಧು, ಕಳೆದ ವರ್ಷ ಬೆಳ್ಳಿ ಪದಕ ಜಯಿಸಿದ್ದರು. ಸದ್ಯ, ಅವರ ಗುರಿ ಈಗ ಚಿನ್ನ ಗೆಲ್ಲುವುದಷ್ಟೆ. ಮೊದಲ ಸುತ್ತಿನಲ್ಲಿ ಫಿಟ್ರಿಯಾನಿ ವಿರುದ್ಧ ಸೆಣಸಲಿದ್ದು, ಪಂದ್ಯ ಮಧ್ಯಾಹ್ನ ೧೨.೩೦ಕ್ಕೆ ಆರಂಭವಾಗುವ ಸಾಧ್ಯತೆ ಇದೆ. ಪುರುಷರ ಸಿಂಗಲ್ಸ್‌ನ ದ್ವಿತೀಯ ಸುತ್ತಿನಲ್ಲಿ ಕಿಡಾಂಬಿ ಶ್ರೀಕಾಂತ್ ಪ್ಯಾಬ್ಲೊ ಏಟಿಯನ್ ವಿರುದ್ಧ ಸೆಣಸಲಿದ್ದರೆ, ಸಮೀರ್ ವರ್ಮಾ ಒಲಿಂಪಿಕ್ಸ್ ಚಾಂಪಿಯನ್ ಲಿನ್ ಡಾನ್ ಎದುರು ಕಾದಾಡಲಿದ್ದಾರೆ. ಇತ್ತ, ಕನ್ನಡತಿ ಅಶ್ವಿನಿ ಪೊನ್ನಪ್ಪ ಮತ್ತು ಎನ್ ಸಿಕಿ ರೆಡ್ಡಿ ಜೋಡಿ ವನಿತೆಯರ ಡಬಲ್ಸ್‌ನಲ್ಲಿ ಜಪಾನ್‌ನ ಯುಕಿ ಫುಕುಶಿಮಾ ಮತ್ತು ಸಯಾಕ ಹಿರೊಟಾ ವಿರುದ್ಧ ಸೆಣಸಲಿದೆ.

ಇಂದಿನಿಂದ ಇಂಡೋ-ಆಂಗ್ಲೋ ಟೆಸ್ಟ್ ಸರಣಿ

ಪ್ರವಾಸಿ ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನಡುವಣ ಐದು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬ್ಯಾಸ್ಟನ್‌ನಲ್ಲಿ ಇಂದು ಮಧ್ಯಾಹ್ನ ಭಾರತೀಯ ಕಾಲಮಾನ ೩.೩೦ಕ್ಕೆ ಆರಂಭವಾಗಲಿರುವ ಪಂದ್ಯ ಆತಿಥೇಯರಿಗೆ ೧ ಸಹಸ್ರ ಪಂದ್ಯವಾಗಿದೆ. ಈ ಚಾರಿತ್ರಿಕ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯಲ್ಲಿ ಶುಭಾರಂಭ ಮಾಡಲು ಆತಿಥೇಯರಂತೆ ಭಾರತ ಕೂಡಾ ಸರ್ವಸನ್ನದ್ಧವಾಗಿದೆ. ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾ, ಮೂರು ಚುಟುಕು ಪಂದ್ಯ ಸರಣಿಯನ್ನು ೨-೧ರಿಂದ ಗೆದ್ದುಕೊಂಡಿತ್ತು. ಆದರೆ, ತದನಂತರದ ಮೂರು ಏಕದಿನ ಪಂದ್ಯ ಸರಣಿಯನ್ನು ಆಂಗ್ಲರು ಜೋ ರೂಟ್ ಬೊಂಬಾಟ್ ಆಟದೊಂದಿಗೆ ೨-೧ರಿಂದ ಜಯಿಸಿ ಭಾರತಕ್ಕೆ ತಿರುಗೇಟು ನೀಡಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More