ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ರಕ್ಷಣಾ ಸಚಿವರ ರಾಜ್ಯ ಭೇಟಿ ಹಿನ್ನೆಲೆ: ಸಿಎಂ ಎಚ್‌ಡಿಕೆ ಪೂರ್ವಭಾವಿ ಸಭೆ

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ‌ ಸೀತಾರಾಮನ್ ಅವರು ರಾಜ್ಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಲಿದೆ. ಮೆಟ್ರೊ ಕಾಮಗಾರಿಗೆ ರಕ್ಷಣಾ ಇಲಾಖೆಯ ಜಮೀನು ಬಿಟ್ಟುಕೊಡುವ ಸಂಬಂಧ ಈಚೆಗೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಕ್ಷಣಾ ಸಚಿವರಿಗೆ ಕುಮಾರಸ್ವಾಮಿ ಅವರು ಮನವಿ ಮಾಡಿದ್ದರು. ನಿರ್ಮಲಾ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.

ಇಂಗ್ಲೆಂಡ್ ಸಹಸ್ರ ಟೆಸ್ಟ್ ಕುತೂಹಲದತ್ತ!

ಪ್ರವಾಸಿ ಭಾರತ ತಂಡದ ವಿರುದ್ಧ ಬರ್ಮಿಂಗ್‌ಹ್ಯಾಮ್‌ನ ಎಜ್‌ಬ್ಯಾಸ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯವು ಮತ್ತಷ್ಟು ಕುತೂಹಲದತ್ತ ಸಾಗಿದೆ. ಮೊದಲ ದಿನವೇ ತಿರುವು ಸಿಕ್ಕಿದ್ದ ಪಂದ್ಯದಲ್ಲಿ ಎರಡನೇ ದಿನದಾಟದಂದು ನಾಯಕ ವಿರಾಟ್ ಕೊಹ್ಲಿ (೧೪೯) ಇಂಗ್ಲೆಂಡ್ ನೆಲದಲ್ಲಿ ದಾಖಲಿಸಿದ ಚೊಚ್ಚಲ ಶತಕದಿಂದ ಭಾರತ ತಂಡ 274 ರನ್‌ಗಳಿಗೆ ಆಲೌಟ್ ಆಗಿದೆ. ಆದರೆ, ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್, ಕೇವಲ ೯ ರನ್‌ಗಳಿಗೆ ಅಲೆಸ್ಟೈರ್ ಕುಕ್ (೦) ವಿಕೆಟ್ ಕಳೆದುಕೊಂಡು ೨೨ ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ. ೧೪ ಎಸೆತಗಳನ್ನು ಎದುರಿಸಿದ ಕುಕ್ ಮತ್ತೊಮ್ಮೆ ಅಶ್ವಿನ್‌ಗೆ ಬೌಲ್ಡ್ ಆದರು. ಒಟ್ಟಾರೆ ಆಂಗ್ಲರ ಸಹಸ್ರ ಟೆಸ್ಟ್ ಪಂದ್ಯದ ಪ್ರತೀ ಕ್ಷಣವೂ ಕುತೂಹಲದ ಆಗರವಾಗಿದೆ.

ವಿಶ್ವ ಬ್ಯಾಡ್ಮಿಂಟನ್: ಸೈನಾ, ಸಿಂಧು, ಸಾಯಿ ಸೆಣಸಾಟ

ಬಿಡಬ್ಲ್ಯೂಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಸ್ಪರ್ಧಾವಳಿಯ ಕ್ವಾರ್ಟರ್‌ಫೈನಲ್ ಹಂತದ ಪಂದ್ಯಗಳಿಂದು ಜರುಗಲಿದೆ. ಮಹಿಳೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್ ಆಟಗಾರ್ತಿ, ರಿಯೊ ಒಲಿಂಪಿಕ್ಸ್ ಚಾಂಪಿಯನ್ ಕೆರೋಲಿನಾ ಮರಿನ್ ವಿರುದ್ಧ ಸೈನಾ ಸೆಣಸಲಿದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಸಾಯಿ ಪ್ರಣೀತ್, ಜಪಾನ್ ಆಟಗಾರ ಕೆಂಟೊ ಮೊಮಾಟ ವಿರುದ್ಧ ಕಾದಾಡಲಿದ್ದಾರೆ. ಇನ್ನು, ವನಿತೆಯರ ಮತ್ತೊಂದು ಸಿಂಗಲ್ಸ್‌ನಲ್ಲಿ ಜಪಾನ್ ಆಟಗಾರ್ತಿ ನೊಜೊಮಿ ಒಕುಹಾರ ವಿರುದ್ಧ ಸಿಂಧು ಸೆಣಸಲಿದ್ದಾರೆ. ಇಂದಿನ ಪಂದ್ಯಗಳು ಬೆಳಗ್ಗೆ ೮.೩೦ರಿಂದಲೇ ಶುರುವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್‌ನಲ್ಲಿ ನೇರಪ್ರಸಾರವಿದೆ.

ಬಹುನಿರೀಕ್ಷಿತ ‘ಕಾರ್ವಾನ್’, ‘ಫನ್ನೇ ಖಾನ್’, ‘ಕಥೆಯೊಂದು ಶುರುವಾಗಿದೆ’ ಚಿತ್ರಗಳು ತೆರೆಗೆ

ಅನಿಲ್ ಕಪೂರ್ ಮತ್ತು ಐಶ್ವರ್ಯಾ ರೈ ಬಚ್ಚನ್ ನಟಿಸಿರುವ ನಟಿಸಿರುವ ‘ಫನ್ನೇ ಖಾನ್’, ರಿಷಿ ಕಪೂರ್ ಮತ್ತು ತಾಪ್ಸಿ ಪನ್ನು ಒಳಗೊಂಡ ‘ಮುಲ್ಕ್’, ಇರ್ಫಾನ್ ಖಾನ್, ದುಲ್ಕರ್ ಸಲ್ಮಾನ್ ಮತ್ತು ಮಿಥಿಲಾ ಪಾಲ್ಕರ್ ಅಭಿನಯದ ‘ಕಾರ್ವಾನ್’ ಚಿತ್ರಗಳು ಇಂದು ಬಿಡುಗಡೆಯಾಗಲಿವೆ. ಸ್ಯಾಂಡಲ್‌ವುಡ್‌ನಲ್ಲಿ ಬಹುನಿರೀಕ್ಷಿತ ಎನಿಸಿದ, ರಕ್ಷಿತ್ ಶೆಟ್ಟಿ ನಿರ್ಮಿಸಿ ಸೆನ್ನಾ ಹೆಗ್ಡೆ ನಿರ್ದೇಶಿಸಿರುವ ‘ಕಥೆಯೊಂದು ಶುರುವಾಗಿದೆ’ ಚಿತ್ರವೂ ಬಿಡುಗಡೆಯಾಗಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More