ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಎತ್ತಿನಹೊಳೆ ಯೋಜನೆ ಕುರಿತು ಇಂದು ಚರ್ಚೆ

ಎತ್ತಿನಹೊಳೆ ಯೋಜನೆಯಿಂದ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರಿಗೆ ನೀರು ಪೂರೈಸುವ ಕುರಿತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಲಿದೆ. ವಿಧಾನಸಭೆ ಸ್ಪೀಕರ್ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಶಾಸಕ ಕೆ ಆರ್ ರಮೇಶ್ ಕುಮಾರ್ ಸೇರಿದಂತೆ ಈಗ ಭಾಗದ ಜನಪ್ರತಿನಿಧಿಗಳು‌ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಜಮ್ಮು ಮತ್ತು ಕಾಶ್ಮೀರ ನಾಗರಿಕರಿಗೆ ವಿಶೇಷ ಅಧಿಕಾರ: ಸುಪ್ರೀಂನಲ್ಲಿ ವಿಚಾರಣೆ

ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಸಂವಿಧಾನದ ಕಲಂ ೩೫-ಎ ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ವಿಶೇಷ ಅಧಿಕಾರ ಕಲ್ಪಿಸುವಂತೆ ಸ್ವಯಂ ಸೇವಾ ಸಂಘಟನೆಯೊಂದು ಅರ್ಜಿ ಸಲ್ಲಿಸಿತ್ತು. ಕಲಂ ೩೫-ಎ ಪ್ರಕಾರ ರಾಜ್ಯದ ಕಾಯಂ ನಿವಾಸಿಗಳನ್ನು ಹೊರತುಪಡಿಸಿ ಹೊರಗಿನವರು ಯಾರೂ ರಾಜ್ಯದಲ್ಲಿ ಸ್ಥಿರ ಆಸ್ತಿಯನ್ನು ಹೊಂದುವಂತಿಲ್ಲ. ಅಲ್ಲದೆ ಶಿಕ್ಷಣ, ವಿದ್ಯಾರ್ಥಿ ವೇತನ ಹಾಗೂ ಉದ್ಯೋಗಕ್ಕೆ ಸ್ಥಳೀಯರಷ್ಟೇ ಅರ್ಹರಾಗಿರುತ್ತಾರೆ. ಅಲ್ಲಿನ ಮಹಿಳೆಯರು ಹೊರ ರಾಜ್ಯದವರನ್ನು ಮದುವೆಯಾದರೂ ಈ ಮೇಲಿನ ಎಲ್ಲ ಸೌಲಭ್ಯದಿಂದ ವಂಚಿತರಾಗುತ್ತಾರೆ. ಈ ಮಿತಿಗಳನ್ನು ಪ್ರಶ್ನಿಸಿ ವಿಶೇಷ ಅಧಿಕಾರ ನೀಡುವಂತೆ ಅಲ್ಲಿನ ಜನರು ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ.

ಪ್ರಧಾನಿ ಅಭ್ಯರ್ಥಿಯಾಗಿ ಇಮ್ರಾನ್ ಖಾನ್; ಇಂದು ಪಿಟಿಐ ಅಧಿಕೃತ ಘೋಷಣೆ

ತೆಹ್ರಿಕ್- ಇ- ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್‌ರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪಕ್ಷವು ಸೋಮವಾರ ಅಧಿಕೃತ ಘೋಷಣೆ ಮಾಡಲಿದೆ. ಇಸ್ಲಾಮಾಬಾದ್‌ನಲ್ಲಿ ಇಂದು ನಡೆಯಲಿರುವ ಪಕ್ಷದ ಸಂಸದೀಯ ಸಭೆಯಲ್ಲಿ ಈ ಅಧಿಕೃತವಾಗಿ ಮಾಹಿತಿ ಹೊರಬೀಳಲಿದೆ ಎಂದು ಪಕ್ಷದ ವಕ್ತಾರ ಫವಾದ್ ಚೌದರಿ ಹೇಳಿದ್ದಾರೆ. ಪ್ರಮಾಣವಚನ ನಡೆಯುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆದರೆ ಪಾಕಿಸ್ತಾನದ ಸ್ವಾತಂತ್ರ್ಯ ದಿನವಾದ ಆ.೧೪ರಂದೇ ಪ್ರಮಾಣವಚನ ಸ್ವೀಕರಿಸುತ್ತಾರೆ ಎನ್ನಲಾಗಿದೆ.

ನೊವಾಕ್ ಜೊಕೊವಿಚ್, ಕೆವಿನ್ ಆಂಡರ್ಸನ್ ಮತ್ತೆ ಮುಖಾಮುಖಿ

ಕಳೆದ ತಿಂಗಳಷ್ಟೇ ಮುಗಿದ ಪ್ರತಿಷ್ಠಿತ ವಿಂಬಲ್ಡನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್‌ನಲ್ಲಿ ಸೆಣಸಿದ್ದ ನೊವಾಕ್ ಜೊಕೊವಿಚ್ ಮತ್ತು ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸನ್ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. ಇಂದಿನಿಂದ ಶುರುವಾಗುತ್ತಿರುವ ರೋಜರ್ಸ್ ಕಪ್ (ಕೆನಡಾ ಓಪನ್) ಪಂದ್ಯಾವಳಿಯಲ್ಲಿ ಸರ್ಬಿಯಾದ ನೊವಾಕ್, ಆಂಡರ್ಸನ್ ಜತೆಯಾಗಿರುವುದು ವಿಶೇಷ. ಇಂದು ರಾತ್ರಿ ೧೧.೫೦ಕ್ಕೆ ಆರಂಭವಾಗಲಿರುವ ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸ್ಥಳೀಯ ಆಟಗಾರರಾದ ಡೆನಿಸ್ ಶಪಲೊವ್ ಹಾಗೂ ಫೆಲಿಕ್ಸ್ ಆಗುರ್ ಅಲಿಯಾಸಿಮ್ ವಿರುದ್ಧ ಜೊಕೊವಿಚ್-ಆಂಡರ್ಸನ್ ಜೋಡಿ ಕಾದಾಡಲಿದೆ. ಅಂದಹಾಗೆ, ವೈಯಕ್ತಿಕ ಕಾರಣಗಳಿಂದ ಸೆರೆನಾ ವಿಲಿಯಮ್ಸ್ ಈ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More