ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು  

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಹಿರಿಯ ರಾಜಕಾರಣಿ ಎಂ ಕರುಣಾನಿಧಿ ಅವರ ಅಂತ್ಯಕ್ರಿಯೆ ಇಂದು

ಡಿಎಂಕೆ ವರಿಷ್ಠ, ಮಾಜಿ ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಅಂತ್ಯಕ್ರಿಯೆ ಇಂದು ಚೆನ್ನೈನ ಮರೀನಾ ಬೀಚ್‌ನಲ್ಲಿ ನಡೆಯಲಿದೆ. ಚೆನ್ನೈನ ಮರೀನಾ ಬೀಚ್‌ನಲ್ಲಿರುವ ಅಣ್ಣಾ ದೊರೈ ಸ್ಮಾರಕ ಬಳಿ ಅಂತ್ಯಸಂಸ್ಕಾರ ನಡೆಸಲು ಕುಟುಂಬದವರು ಅವಕಾಶ ಕೋರಿದ್ದರು. ಇದಕ್ಕೆ ತಮಿಳುನಾಡು ಸರ್ಕಾರ ನಿರಾಕರಿಸಿತ್ತು. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಡಿಎಂಕೆ ಪಕ್ಷ ಹೈಕೋರ್ಟ್ ಮೆಟ್ಟಿಲೇರಿತ್ತು. ಮರೀನಾ ಬೀಚ್‌ನಲ್ಲಿ ಅಂತ್ಯಸಂಸ್ಕಾರ ನಡೆಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಲ್ಲಿಸಲಾಗಿರುವ ಐದೂ ಅರ್ಜಿಗಳನ್ನು ಬುಧವಾರ ಬೆಳಿಗ್ಗೆ ಹಿಂಪಡೆಯಲಾಗಿದೆ.

ಕರುಣಾನಿಧಿ ಪಾರ್ಥಿವ ಶರೀರ ಅಂತಿಮ ದರ್ಶನ ಪಡೆಯಲಿರುವ ಎಚ್ಡಿಕೆ, ಪರಮೇಶ್ವರ್

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಜಿ‌ ಪರಮೇಶ್ವರ್ ಅವರು ಬುಧವಾರ ಚೆನ್ನೈಗೆ ಭೇಟಿ ನೀಡಲಿದ್ದು, ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ‌ ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ‌ ಪಡೆಯಲಿದ್ದಾರೆ. ಕರುಣಾನಿಧಿ ವಿಧಿವಶರಾದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಒಂದು ದಿನದ ಶೋಕಾಚರಣೆಗೆ ಕುಮಾರಸ್ವಾಮಿ ಆದೇಶಿಸಿದ್ದಾರೆ. ದೇಶದ ಹಲವು ಗಣ್ಯರು ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ.

ಇಂದು ಮೂರನೇ ಭಾರತ-ನೇಪಾಳ ಸಮನ್ವಯ ಸಭೆ

ಭಾರತ-ನೇಪಾಳ ಮೂರನೇ ಸಮನ್ವಯ ಸಭೆ ಇಂದು ನವದೆಹಲಿಯಲ್ಲಿ ನಡೆಯಲಿದೆ. ನೇಪಾಳದ ಆರ್ಮ್ಡ್ ಪೊಲೀಸ್‌ ಸಭೆ ನಡೆಯಲಿದೆ. ಸಭೆಯಲ್ಲಿ, ಭಾರತ ಮತ್ತು ನೇಪಾಳ ಭದ್ರತಾ ಸಮಸ್ಯೆಗಳ ಕುರಿತಾಗಿ ಮಾತುಕತೆ ಹಾಗೂ ಗಡಿ ಅಪರಾಧಗಳ ಬಗ್ಗೆ ಮಾಹಿತಿ ಹಂಚಿಕೆ ನಡೆಯಲಿದೆ. ಅಲ್ಲದೇ ಮುಂದಿನ ದಿನಗಳಲ್ಲಿ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳ ತರಬೇತಿ ಮತ್ತು ಎರಡು ರಾಷ್ಟ್ರಗಳ ಅಧಿಕಾರಿಗಳ ಪರಸ್ಪರ ಭೇಟಿಗಳ ಕುರಿತು ಚರ್ಚಿಸಲಾಗುವುದು ಎಂದು ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ತಿಳಿಸಿದ್ದಾರೆ.

ಮರಿಯಾ ಶರಪೋವಾ, ಜೊಕೊವಿಚ್ ಇಂದು ಕಣಕ್ಕೆ

ಐದು ಬಾರಿಯ ಗ್ರಾಂಡ್‌ಸ್ಲಾಮ್ ವಿಜೇತೆ ರಷ್ಯನ್ ಆಟಗಾರ್ತಿ ಮರಿಯಾ ಶರಪೋವಾ ರೋಜರ್ಸ್ ಕಪ್ ಟೆನಿಸ್ ಪಂದ್ಯಾವಳಿಯಲ್ಲಿಂದು ತಮ್ಮ ದೇಶದವರೇ ಆದ ಯುವ ಆಟಗಾರ್ತಿ ಡರಿಯಾ ಕಸಾಕಿನಾ ವಿರುದ್ಧ ಸ್ಪರ್ಧಿಸಲಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಬಲ್ಗೇರಿಯಾ ಆಟಗಾರ್ತಿ ಸೆಸಿಲ್ ಕರಟಂಚೇವಾ ವಿರುದ್ಧ ೬-೧, ೬-೨ ನೇರ ಹಾಗೂ ಸುಲಭ ಸೆಟ್‌ಗಳಲ್ಲಿ ಶರಪೋವಾ ಜಯಿಸಿದರು. ಇತ್ತ, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಹದಿಮೂರು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ಜೊಕೊವಿಚ್ ಕೆನಡಾದ ಪೀಟರ್ ಪೊಲಾಂಸ್ಕಿ ವಿರುದ್ಧ ಕಾದಾಡಲಿದ್ದಾರೆ. ಮೊದಲ ಸುತ್ತಿನಲ್ಲಿ ಜೊಕೊವಿಚ್, ಬೋಸ್ನಿಯಾದ ಮಿರ್ಜಾ ಬಾಸಿಕ್ ವಿರುದ್ಧ ಜೊಕೊವಿಚ್ ೬-೩, ೭-೬ (೭/೩) ನೇರ ಸೆಟ್‌ಗಳಲ್ಲಿ ಗೆಲುವು ಪಡೆದರು.

ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
Editor’s Pick More