ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಪ್ರಧಾನಿ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ

“ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ, ಹೆಣ್ಣಮಕ್ಕಳನ್ನು ಯಾರಿಂದ ರಕ್ಷಿಸಬೇಕೆಂದು ಸರ್ಕಾರ ಹೇಳುವುದಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನಿಂದ ಮಹಿಳೆಯ ಅತ್ಯಾಚಾರವಾದರೂ ಪ್ರಧಾನಿಯವರು ಬಾಯಿ ಬಿಟ್ಟಿಲ್ಲ!” ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ ರಾಜಧಾನಿ ಜೈಪುರದಲ್ಲಿ ನಡೆದ ಶನಿವಾರ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ರಾಫೇಲ್‌ ಪ್ರಕರಣ, ಕೈಗಾರಿಕೋದ್ಯಮಿಗಳ ವಂಚನೆ ಪ್ರಕರಣ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ನಡೆದಿರುವ ಲೈಂಗಿಕ ಪ್ರಕರಣಗಳ ವಿಚಾರವಾಗಿ ಪ್ರಧಾನಿ ಮೋದಿಯವರು ಮೌನ ಮುರಿಯದಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನಿ ಸಿಬ್ಬಂದಿಗೆ ಮಿಲಿಟರಿ ತರಬೇತಿ ನಿಲ್ಲಿಸಿದ ಅಮೆರಿಕ

ದಶಕಗಳ ಕಾಲ ನಡೆಸಿಕೊಂಡು ಬಂದಿದ್ದ ಪಾಕಿಸ್ತಾನಿ ಸಿಬ್ಬಂದಿಗಳಿಗೆ ಅಮೆರಿಕ ಸಂಸ್ಥೆಗಳಲ್ಲಿ ಮಿಲಿಟರಿ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಇಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆ ಹಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕಿಸ್ತಾನ ಮತ್ತು ರಷ್ಯಾ ದೇಶಗಳು ರಾವಲ್ಪಿಂಡಿಯಲ್ಲಿ ತಮ್ಮ ಮೊದಲ ಜಂಟಿ ಮಿಲಿಟರಿ ಕನ್ಸಲ್ಟೇಟಿವ್ ಕಮಿಟಿಯ (ಜೆಎಂಸಿಸಿ) ಸಭೆ ನಡೆಸಿದ್ದು, ಪಾಕಿಸ್ತಾನದ ಪಡೆಗಳು ರಷ್ಯಾದ ರಕ್ಷಣಾ ಕೇಂದ್ರಗಳಲ್ಲಿ ತರಬೇತಿ ಪಡೆಯುವ ಒಪ್ಪಂದಕ್ಕೆ ಸಹಿ ಹಾಕಿವೆ.

ಸೆಪ್ಟಂಬರ್ 1ರಿಂದ ಐಆರ್‌ಸಿಟಿಸಿ ಉಚಿತ ರೈಲು ಪ್ರಯಾಣ ವಿಮೆ ರದ್ದು

ಭಾರತೀಯ ರೈಲ್ವೆ ಸೆ.1ರಿಂದ ಉಚಿತ ರೈಲು ಪ್ರಯಾಣ ವಿಮೆ ಸೌಲಭ್ಯವನ್ನು ರದ್ದು ಮಾಡಲಿದೆ. ಇಂಡಿಯನ್ ರೈಲ್ವೇಸ್ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ವಿಮೆ ಸೌಲಭ್ಯವನ್ನು ರದ್ದು ಮಾಡಲು ನಿರ್ಧರಿಸಿದೆ. ಪ್ರಯಾಣ ವಿಮೆಯು ಐಚ್ಛಿಕವಾಗಿದ್ದು, ಶೀಘ್ರದಲ್ಲೇ ವಿಮೆ ಪ್ರೀಮಿಯಂ ಮೊತ್ತ ಪ್ರಕಟಿಸಲಿದೆ. ಡಿಜಿಟಲ್ ವಹಿವಾಟು ಉತ್ತೇಜಿಸಲು 2017ರ ಡಿಸೆಂಬರಿನಲ್ಲಿ ಐಆರ್‌ಸಿಟಿಸಿ ವೆಬ್‌ಸೈಟ್ ಮತ್ತು ಮೊಬೈಲ್ ಆ್ಯಪ್‌ನಲ್ಲಿ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಉಚಿತ ವಿಮೆ ಸೌಲಭ್ಯ ಒದಗಿಸುತ್ತಿತ್ತು. ಪ್ರಯಾಣಿಕರು ಅಪಘಾತದಲ್ಲಿ ಮೃತಪಟ್ಟರೆ 10 ಲಕ್ಷ ರು., ಅಪಘಾತದಿಂದ ಅಂಗವಿಕಲರಾದರೆ 7.5 ಲಕ್ಷ, ಗಾಯಗೊಂಡರೆ 2 ಲಕ್ಷ ಮತ್ತು ಮೃತ ದೇಹ ಸಾಗಿಸಲು 10,000 ರುಪಾಯಿ ಪರಿಹಾರ ನೀಡಲಾಗುತ್ತಿದೆ.

ಸೂರ್ಯನತ್ತ ನಾಸಾ ಪಯಣ; ತಾಂತ್ರಿಕ ಸಮಸ್ಯೆಯಿಂದ ಮತ್ತೆ ದಿನಾಂಕ ಮುಂದೂಡಿಕೆ

ಸೂರ್ಯನ ಸಮೀಪದ ಅಧ್ಯಯನಕ್ಕೆಂದು ಪ್ರಥಮ ಬಾರಿಗೆ ನಾಸಾ ಉಡ್ಡಯನ ಮಾಡಲು ಮುಂದಾಗಿದ್ದ ‘ಪಾರ್ಕರ್ ಸೋಲಾರ್ ಪ್ರೋಬ್’ ಸೌರನೌಕೆ ನಾಳೆಯಿಂದ ತನ್ನ ಸೌರಯಾನ ಆರಂಭಿಸಲಿದೆ. ತಾಂತ್ರಿಕ ಸಮಸ್ಯೆಗಳಿಂದ ಶನಿವಾರ ಉಡಾವಣೆಯಾಗಬೇಕಿದ್ದ ನೌಕೆ ಆ.೧೨ರಂದು ಭಾನುವಾರ ಬೆಳಗ್ಗೆ ಉಡಾವಣೆಯಾಗಲಿದೆ ಎಂದು ನಾಸಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜು.೩೧ರಂದೇ ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್‌ನಿಂದ ನಭೋಮಂಡಲಕ್ಕೆ ಉಡಾವಣೆಯಾಗಬೇಕಿದ್ದ ನೌಕೆಯನ್ನು ಶನಿವಾರಕ್ಕೆ ಮುಂದೂಡಲಾಗಿತ್ತು, ಈವರೆಗೆ ಎರಡು ಬಾರಿ ಉಡಾವಣೆಯನ್ನು ಮುಂದೂಡಲಾಗಿದೆ.

ಹಿಂದಿಯನ್ನು ಆಡಳಿತಾತ್ಮಕ ಭಾಷೆ ಮಾಡುವುದು ಸುಲಭ: ಸುಷ್ಮಾ ಸ್ವರಾಜ್

ಹಿಂದಿ ಭಾಷೆಯನ್ನು ಆಡಳಿತಾತ್ಮಕ ಭಾಷೆಯನ್ನಾಗಿ ಮಾಡಲು ಯುನೈಟೆಡ್ ನೇಷನ್ನಲ್ಲಿ ಅಗತ್ಯವಿರುವ ಮೂರನೇ ಎರಡು ಭಾಗದಷ್ಟು ಬಹುಮತ ಪಡೆಯುವುದು ಸುಲಭದ ಕೆಲಸ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ. ಈ ಕುರಿತು ಶುಕ್ರವಾರ ಮಾತನಾಡಿರುವ ಅವರು, “ವಿಶ್ವ ಯೋಗ ದಿನಾಚರಣೆ ಅನುಷ್ಠಾನಕ್ಕೆ ೧೯೩ ರಾಷ್ಟ್ರಗಳ ಪೈಕಿ ೧೭೭ ರಾಷ್ಟ್ರಗಳು ಬೆಂಬಲ ಸೂಚಿಸಿದಂತೆ ೧೨೯ ರಾಷ್ಟ್ರಗಳ ಬೆಂಬಲ ಪಡೆದರೆ ಹಿಂದಿಯನ್ನು ಆಡಳಿತಾತ್ಮಕ ಭಾಷೆಯನ್ನಾಗಿ ಮಾಡಬಹುದು,” ಎಂದಿದ್ದಾರೆ.

ಮೊದಲ ಕಪ್ಪು ಜೇಮ್ಸ್ ಬಾಂಡ್‌ ವದಂತಿ ಅಲ್ಲಗಳೆದ ನಿರ್ಮಾಪಕಿ ಬಾರ್ಬರಾ

ಇದ್ರಿಸ್ ಎಲ್ಬಾ ನೂತನ ಬಾಂಡ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹರಡುತ್ತಿರುವ ವದಂತಿಗಳನ್ನು ನಿರ್ಮಾಪಕಿ ಬಾರ್ಬರಾ ಬ್ರೊಕೊಲಿ ತಳ್ಳಿ ಹಾಕಿ, “ನಾವು ಅಂತಹ ಯಾವುದೇ ಮಾತುಕತೆಯನ್ನು ನಡೆಸಿಲ್ಲ,” ಎಂದು ಸ್ಷಷ್ಟನೆ ನೀಡಿದ್ದಾರೆ. 995ರ ‘ಗೋಲ್ಡನ್‌ ಐ’ ಚಿತ್ರವೂ ಸೇರಿದಂತೆ ನಂತರದ ಎಲ್ಲ ಬಾಂಡ್ ಸಿನಿಮಾಗಳ ನಿರ್ಮಾಪಕಿ ಬಾರ್ಬರಾ ಬ್ರೊಕೊಲಿ. “ಮುಂದಿನ ಬಾಂಡ್ ಆಗಿ ಇದ್ರಿಸ್‌ ಎಲ್ಬಾ ಇರಲಿದ್ದಾರೆ. ಬಾಂಡ್ ಪಾತ್ರಧಾರಿ ಸದೃಢ ಕಾಯದ ಸುಂದರ ಪುರುಷನಾಗಿರಬೇಕು. ಇದ್ರಿಸ್‌ಗೆ ಈ ಗುಣಗಳಿವೆ,” ಎಂದು ಬಾರ್ಬರಾ ಹೇಳಿರುವುದಾಗಿ ವದಂತಿ ಹಬ್ಬಿಸಲಾಗಿತ್ತು. ಹೀಗೆ ಹಬ್ಬಿಸಿರುವುದು ಇದೇ ಮೊದಲಲ್ಲ. ೨೦೧೪ರಲ್ಲಿಯೂ ಸೋನಿ ಪಿಕ್ಚರ್ಸ್ ಕಚೇರಿಯಿಂದ ಇದ್ರಿಸ್‌ ಎಲ್ಬಾ ಅವರೇ ಮುಂದಿನ ಬಾಂಡ್ ಸಿನಿಮಾ ನಾಯಕ ಎಂಬ ಇಮೇಲ್ ಹರಿದಾಡಿತ್ತು ಎಂದು ಅವರು ವದಂತಿಗಳನ್ನು ಅಲ್ಲಗಳೆದಿದ್ದಾರೆ.

ಜಮ್ಮು ಕಾಶ್ಮೀರದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಗೀತಾ ಮಿತ್ತಲ್ ನೇಮಕ

ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಗೀತಾ ಮಿತ್ತಲ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಎನ್ ಎನ್ ವೋಹ್ರಾ ಅವರಿಂದ ಪ್ರಮಾಣವಚನ ಸ್ವೀಕರಿಸಿದ ಗೀತಾ, ಈ ಮೂಲಕ ಹುದ್ದೆಗೇರಿದ ಪ್ರಥಮ ಮಹಿಳೆಯೂ ಆಗಿದ್ದಾರೆ. ದೆಹಲಿ ಹೈಕೋರ್ಟ್‌ನಲ್ಲಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದ ಗೀತಾ ಮಿತ್ತಲ್ ಅವರನ್ನು ಕಣಿವೆ ರಾಜ್ಯದ ಮುಖ್ಯ ನ್ಯಾಯಮೂರ್ತಿಯಾಗಿ ಆಗಸ್ಟ್ 4ರಂದು ನೇಮಕ ಮಾಡಲಾಗಿತ್ತು.

ಪಶ್ಚಿಮ ಬಂಗಾಳದಲ್ಲಿ ವೀಸಾ ಅರ್ಜಿ ಕಚೇರಿ ಆರಂಭಿಸಿದ ಇಸ್ರೇಲ್

ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಇಸ್ರೇಲ್ ಮಹತ್ವದ ಹೆಜ್ಜೆ ಇಟ್ಟಿದ್ದು, ಇದೀಗ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ವೀಸಾ ಅರ್ಜಿ ಕಚೇರಿಯನ್ನು ಆರಂಭಿಸಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಇಸ್ರೇಲ್ ದೂತವಾಸ ಅಧಿಕಾರಿಗಳು, ದೆಹಲಿಯ ಕೇಂದ್ರ ವ್ಯಾಪ್ತಿಯಡಿಯ ವೀಸಾ ಅರ್ಜಿಗಳನ್ನು ಕೂಡ ಕೋಲ್ಕತ್ತಾದ ಹೊಸ ವೀಸಾ ಕೇಂದ್ರಗಳಲ್ಲಿ ಸ್ವೀಕರಿಸಲಾಗುವುದು ಎಂದು ತಿಳಿಸಿದ್ದಾರೆ. ಉದ್ಯೋಗ, ಪ್ರವಾಸ, ಸಭೆ-ಸಮಾರಂಭ, ಉದ್ಯಮ ಮತ್ತು ವಿದ್ಯಾರ್ಥಿಗಳ ವೀಸಾ ಅರ್ಜಿಗಳನ್ನು ಕೂಡ ಇದೇ ಕೇಂದ್ರದಲ್ಲಿ ಸ್ವೀಕರಿಸಲಾಗುವುದು ಎಂದು ಇಸ್ರೇಲ್ ಪ್ರವಾಸೋದ್ಯಮ ಸಚಿವಾಲಯದ ನಿರ್ದೇಶಕ ಹಸನ್ ಮದಾ ತಿಳಿಸಿದ್ದಾರೆ.

ಜಾನಿ, ವೋಕ್ಸ್ ಅರ್ಧಶತಕದಲ್ಲಿ ಇನ್ನಿಂಗ್ಸ್ ಮುನ್ನಡೆ ಕಂಡ ಇಂಗ್ಲೆಂಡ್

ಜಗತ್ತಿನ ಐತಿಹಾಸಿಕ ಕ್ರಿಕೆಟ್ ತಾಣ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಇನ್ನಿಂಗ್ಸ್ ಮುನ್ನಡೆ ಕಂಡಿದೆ. ಪಂದ್ಯದ ಮೂರನೇ ದಿನವಾದ ಇಂದು ಮೇಲಿನ ಕ್ರಮಾಂಕಿತ ಆಟಗಾರರ ವೈಫಲ್ಯದ ಮಧ್ಯೆ ವಿಕೆಟ್‌ಕೀಪರ್ ಜಾನಿ ಬೇರ್‌ಸ್ಟೋ ಮತ್ತು ಕ್ರಿಸ್ ವೋಕೆಸ್ ದಾಖಲಿಸಿದ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಭಾರತದ ವಿರುದ್ಧ ನಿರೀಕ್ಷಿತ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ದಿನದಾಟದ ಚಹಾ ವಿರಾಮದ ಹೊತ್ತಿಗೆ ಇಂಗ್ಲೆಂಡ್, ೫೫ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೨೩೦ ರನ್ ದಾಖಲಿಸಿ ಆ ಮೂಲಕ ೧೨೩ ರನ್ ಮಹತ್ವದ ಮುನ್ನಡೆ ಕಂಡಿತ್ತು. ಜಾನಿ ಮತ್ತು ಕ್ರಿಸ್ ವೋಕೆಸ್ ಕ್ರಮವಾಗಿ ೨ ಹಾಗೂ ೫೫ ರನ್ ಗಳಿಸಿ ಹೋರಾಟ ಮುಂದುವರೆಸಿದ್ದರು.ಭಾರತದ ಪರ ಮೊಹಮದ್ ಶಮಿ ೩ ವಿಕೆಟ್ ಗಳಿಸಿ ಗಮನ ಸೆಳೆದರು.

ಬೀಜಿಂಗ್ ಹೀರೊ ಅಭಿನವ್ ಬಿಂದ್ರಾ ಸಾಧನೆಗೆ ದಶಕದ ಸಂಭ್ರಮ

ಆಗಸ್ಟ್ ೧೧, ೨೦೦೮ ಭಾರತೀಯ ಕ್ರೀಡಾಲೋಕ ಎಂದೂ ಮರೆಯದ ಸುದಿನ. ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಮೊಟ್ಟಮೊದಲ ಚಿನ್ನದ ಪದಕ ತಂದುಕೊಟ್ಟ ಶೂಟರ್ ಅಭಿನವ್ ಬಿಂದ್ರಾ ಸಾಧನೆಗೆ ಇಂದು ಬರೋಬ್ಬರಿ ಹತ್ತು ವರ್ಷ. ಪುರುಷರ ೧೦ ಮೀಟರ್ ಏರ್ ರೈಫಲ್‌ ಫೈನಲ್‌ನಲ್ಲಿ ಬರೋಬ್ಬರಿ ೧೦.೮ ಪಾಯಿಂಟ್ಸ್ ಗಳಿಸಿ ಬೀಜಿಂಗ್ ಒಲಿಂಪಿಕ್ಸ್ ಕೂಟದಲ್ಲಿ ಐತಿಹಾಸಿಕ ಸಾಧನೆ ಮೆರೆದಾಗಲೂ ಅದೇ ಮುಗ್ಧ ಮೊಗದೊಂದಿಗೆ ನಿರುಮ್ಮಳವಾಗಿದ್ದ ಬಿಂದ್ರಾ, ಭಾರತದ ಶೂಟಿಂಗ್ ಕ್ಷೇತ್ರದ ದಿಕ್ಕು ದೆಸೆ ಬದಲಿಸಿದವರು. "ನಾನು ಚಿನ್ನ ಗೆದ್ದಿದ್ದೇನೆ ಎಂಬ ಸಂಗತಿ ಮೊದಲಿಗೆ ನನಗೆ ಹೊಳೆದಿರಲೇ ಇಲ್ಲ. ನನ್ನ ಕೋಚ್ ಅವರಲ್ಲಿ ಕೇಳಿದಾಗ ನಾನು ಚಿನ್ನದ ಪದಕ ಗೆದ್ದಿದ್ದೇನೆ ಎಂಬುದು ಮನವರಿಕೆಯಾಯಿತು,'' ಎಂದು ಬಿಂದ್ರಾ, ಪ್ರತಿಕ್ರಿಯಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More