ನೊಬೆಲ್‌ ಪುರಸ್ಕೃತ ಲೇಖಕ ವಿ ಎಸ್‌ ನೈಪಾಲ್‌ ನಿಧನ; ಲೇಖಕರ ನುಡಿನಮನ

ವಿವಾದಾತ್ಮಕ ಮಾತು ಮತ್ತು ಬರಹಗಳಿಂದ ಜಗತ್ತನ್ನು ಸೆಳೆದಿದ್ದ ಸರ್‌ ವಿದ್ಯಾಧರ ಸೂರಜ್‌ ಪ್ರಸಾದ್‌ ನೈಪಾಲ್‌ ಭಾನುವಾರ ಬೆಳಗ್ಗೆ ನಿಧನರಾದರು. ‘ಹೌಸ್‌ ಆಫ್‌ ಮಿಸ್ಟರ್‌ ಬಿಸ್ವಾಸ್‌’ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ನೀಡಿದ ನೈಪಾಲ್‌ ಅವರಿಗೆ ಸಮಕಾಲೀನ ಲೇಖಕರು ನುಡಿ ನಮನ ಸಲ್ಲಿಸಿದ್ದಾರೆ

'ದ್ವೇಷ ಹುಟ್ಟಿಸಿದವನು ಲೇಖಕನೇ ಅಲ್ಲ' ಎಂದು ಹೇಳಿಕೆ ನೀಡಿ ಬೆಚ್ಚಿ ಬೀಳಿಸಿದವರು ನೈಪಾಲ್‌. ತಾನೊಬ್ಬ ಬರಹಗಾರನಾಗಬೇಕೆಂಬ ಮಹತ್ವಕಾಂಕ್ಷೆ ಹೊಂದಿದ್ದ ತಂದೆಯ ಮಗನಾಗಿ ಬೆಳೆದ ನೈಪಾಲ್‌, ತಂದೆಯಂತೆ ಸೋಲದೇ ಜಗತ್ತಿನ ಶ್ರೇಷ್ಠ ಕಾದಂಬರಿಕಾರರಲ್ಲಿ ಒಬ್ಬರಾಗಿ ಹೆಸರಾದರು.

ಇನ್ನು ಐದು ಕಳೆದಿದ್ದಾರೆ ೮೬ ವರ್ಷಗಳನ್ನು ಪೂರೈಸುತ್ತಿದ್ದ ನೈಪಾಲ್‌ ನಿಷ್ಠುರವಾದಿಯೇ ಎಂದೇ ಚಿರಪರಿಚಿತರು. ಜನಾಂಗಿದ್ವೇಷ, ಸೆಕ್ಸಿಸಮ್‌, ಪುರುಷ ಪ್ರಧಾನ ನಿಲುವು, ಮುಸ್ಲಿಮ್‌ ವಿರೋಧಿ ಧೋರಣೆಗಳಿಗೂ ಅವರು ಟೀಕೆಗೂ ಗುರಿಯಾಗಿದ್ದರು.

ಈ ಎಲ್ಲ ಟೀಕೆಗಳ ನಡುವೆಯೂ ಅವರ ಸಾಹಿತ್ಯ ಕೃಷಿಗೆ ಸಿಗಬೇಕಾದ ಮನ್ನಣೆಯೇನೂ ಕಡಿಮೆಯಾಗಲಿಲ್ಲ. ಹಾಗಾಗಿ ಅವರ ಸಮಕಾಲೀನ ಲೇಖಕರು ಭಿನ್ನಾಭಿಪ್ರಾಯಗಳ ನಡುವೆಯೂ ಅವರನ್ನು ಗೌರವಿಸಿದರು, ಅಭಿಮಾನದಿಂದ ಕಂಡರು.

ನೈಪಾಲ್‌ ನಿಧನಕ್ಕೆ ಸ್ಪಂದಿಸಿರುವ ಅನೇಕ ಸಮಕಾಲೀನ ಲೇಖಕರು ತಮ್ಮ ಟ್ವೀಟ್‌ಗಳ ಮೂಲಕ ತಮ್ಮ ನೆನಪು, ಗೌರವಗಳನ್ನು ಹಂಚಿಕೊಂಡಿದ್ದರು.

ಪ್ರಸಿದ್ಧ ಕಾದಂಬರಿಕಾರ ಸಲ್ಮಾನ್‌ ರಶ್ದಿ ಟ್ವೀಟ್‌ ಮಾಡಿ, 'ನಮ್ಮರಾಜಕೀಯ, ಮತ್ತು ಸಾಹಿತ್ಯ ವಿಚಾರದಲ್ಲಿ ಬದುಕಿನುದ್ದಕ್ಕೂ ತಕರಾರು ಇಟ್ಟುಕೊಂಡಿದ್ದೆವು. ಆದರೆ ಈಗ ನನ್ನ ಹಿರಿಯ ಅಣ್ಣನನ್ನು ಕಳೆದುಕೊಂಡಂತೆ ದುಃಖವಾಗುತ್ತಿದೆ'' ಎಂದು ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ.

ಮತ್ತೊಬ್ಬ ಲೇಖಕ ಹರಿ ಕುಂಝ್ರು ಬಿಬಿಸಿಗಾಗಿ ನೈಪಾಲ್‌ ಅವರನ್ನು ಸಂದರ್ಶನ ಮಾಡುವ ಅವಕಾಶ ಪಡೆದಾಗ, ಸಂದರ್ಶನ ಆರಂಭಕ್ಕೂ ಮುನ್ನ ನೈಪಾಲ್‌, "ಏನನ್ನೂ ಓದಿದ್ದೀಯಾ ಹೇಳು, ಸುಳ್ಳು ಹೇಳಬೇಡ'' ಎಂದು ಕೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.

ಇನ್ನೊಂದು ಟ್ವೀಟ್‌ನಲ್ಲಿ ನೈಪಾಲ್‌ ಕಣ್ಣೀರು ಹಾಕುವುದಕ್ಕೆ ಕಾರಣವಾದ ಕ್ಷಣವನ್ನು ಹಂಚಿಕೊಂಡಿದ್ದಾರೆ. ನೈಪಾಲ್‌ ಪುಸ್ತಕಗಳಿಗೆ ಹಸ್ತಾಕ್ಷರ ಹಾಕುವುದು ಅಪರೂಪ. ಮಿಸ್ಟರ್‌ ಬಿಸ್ವಾಸ್‌ನ ಮೊದಲ ಪ್ರತಿಯನ್ನು ಸಹಿ ಹಾಕಿಸಿಕೊಳ್ಳಲು ಒಯ್ದಿದ್ದೆ. ಅದನ್ನು ಕಂಡು ಭಾವುಕರಾಗಿ ಬಿಟ್ಟರು. 'ಬಹಳ ಕಾಲವಾಯಿತು, ಈ ಆವೃತ್ತಿಯನ್ನೇ ಕಂಡೇ ಇರಲಿಲ್ಲ' ಎಂದು ಆಗ ಹೇಳಿದ್ದರು'' ಎಂದು ಕುಂಝ್ರು ಟ್ವೀಟ್‌ ಮಾಡಿದ್ದಾರೆ. ನಾಲ್ಕು ಟ್ವೀಟ್‌ಗಳಲ್ಲಿ ನೈಪಾಲ್‌ ಜೊತೆಗೆ ಕಳೆದ ಕ್ಷಣಗಳನ್ನು ಸ್ಮರಿಸಿದ್ದಾರೆ.

ಭಾರತೀಯ ಲೇಖಕ ಅಸೀಮ್‌ ಛಾಬ್ರಾ ತಮ್ಮ ಟ್ವೀಟ್‌ನಲ್ಲಿ ನಾಲ್ಕು ಪುಸ್ತಕಗಳಿಗೆ ಹಸ್ತಾಕ್ಷರ ಪಡೆದ ಸ್ವಾರಸ್ಯಕರ ಘಟನೆಯನ್ನು ಹಂಚಿಕೊಂಡಿದ್ದಾರೆ.

ಲೇಖಕ ಸಯಾಂತನ್‌ ಘೋಷ್‌ ತಮ್ಮಲ್ಲಿದ್ದ ನೈಪಾಲ್‌ ಅವರ ಹಳೆಯ ಕೃತಿಯ ಮೇಲೆ ಸಹಿ ಹಾಕಿಸಿಕೊಂಡ ಅನುಭವವನ್ನು ಬರೆದುಕೊಮಡಿದ್ದಾರೆ.

ಲೇಖಕ, ಅರ್ಥಶಾಸ್ತ್ರ ಸಂಜೀವ್‌ ಸನ್ಯಾಲ್, ನೈಪಾಲರನ್ನು ಕಾದಂಬರಿಕಾರ ಎನ್ನುವುದಕ್ಕೆ ಕಥನೇತರ ಬರಹಗಾರ ಎಂದು ಕರೆಯುವುದು ಸೂಕ್ತ. ಅಂಥ ಶಕ್ತಿಯುತ ಬರವಣಿಗೆ ಅವರದ್ದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮಿತ್ರ ಕಲೀತಾ ಅವರು ತಮ್ಮ ತಂದೆ ಮತ್ತು ನೈಪಾಲ ಅವರ ಸಂಬಂಧವನ್ನು ನೆನಪಿಸಿಕೊಂಡು ಟ್ವೀಟಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More