ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ ೧೦ ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಲೇಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳತ್ತ ನೋಟ

ಕೊಡಗಿನ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ

ಕೊಡಗಿನ ಸಂಭವಿಸಿರುವ ಜಲಪ್ರಳಯದ ಹಿನ್ನೆಲೆಯಲ್ಲಿ ಜಿಲ್ಲೆಯ ಕುಶಾಲನಗರ, ಸೋಮವಾರಪೇಟೆ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿಗಳ ಚುನಾವಣೆಯವನ್ನು ಮುಂದಿನ ಆದೇಶದವರೆಗೆ ತಡೆಹಿಡಿದಿರುವುದಾಗಿ ರಾಜ್ಯ ಚುನಾವಣಾ ಆಯೋಗ ಶನಿವಾರ ತಿಳಿಸಿದೆ. ಆಯೋಗವು ೧೦೫ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಆಗಸ್ಟ್‌ ೨ರಂದು ವೇಳಾಪಟ್ಟಿ ಪ್ರಕಟಿಸಿತ್ತು. ಭಾರಿ ಮಳೆ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಕೊಡಗು ಜಿಲ್ಲಾಧಿಕಾರಿ ಆಯೋಗಕ್ಕೆ ಮನವಿ ಮಾಡಿದ್ದರು. ಮುಂದಿನ ಆದೇಶದ ಹೊರಗೆ ಚುನಾವಣೆಗೆ ಚುನಾವಣೆ ತಡೆಹಿಡಿಯಲಾಗಿದೆ ಎಂದು ಆಯೋಗದ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆ.

ಕೇರಳ ಪ್ರವಾಹ: ತಿಂಗಳ ಸಂಬಳ ಬಿಟ್ಟುಕೊಡಲು ನಿರ್ಧರಿಸಿದ ಆಪ್ ಶಾಸಕರು, ಸಂಸದರು

ಮುಂಗಾರು ಮಳೆಯಿಂದಾಗಿ ಕೇರಳ ಅಕ್ಷರಶಃ ನಲುಗಿದ್ದು, ಆಪ್ ಶಾಸಕು, ಸಂಸದರು ಹಾಗೂ ಸಚಿವರು ತಮ್ಮ ಒಂದು ತಿಂಗಳ ಸಂಬಳವನ್ನು ಕೇರಳ ಪ್ರವಾಹಕ್ಕೆ ಪರಿಹಾರ ರೂಪವಾಗಿ ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಈ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಟ್ವೀಟ್ ಮಾಡಿದ್ದಾರೆ. ಹಾಗೆಯೇ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ ಅವರು ಕೂಡ ತಮ್ಮ ಒಂದು ತಿಂಗಳ ಕೊಡಲು ಮುಂದಾಗಿದ್ದು, ತನ್ನ ಸಹೋದ್ಯೋಗಿಗಳಿಗೂ ಮನವಿ ಮಾಡುವೆ ಎಂದಿದ್ದಾರೆ. ಈಗಾಗಲೇ ಒಡಿಶಾ, ಬಿಹಾರ್, ಹರಿಯಾಣ, ಪಂಜಾಬ್, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳು ಕೇರಳಕ್ಕೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿವೆ. ಮಳೆಯ ಪ್ರಕೋಪದಿಂದಾಗಿ ಕೇರಳದಲ್ಲಿ ಈವರೆಗೂ ೩೨೫ಕ್ಕೂ ಜನರು ಹೆಚ್ಚು ಸಾವನ್ನಪ್ಪಿದ್ದು, ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ.

ಕೊಡಗು ಜಿಲ್ಲೆಯ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಕುಮಾರಸ್ವಾಮಿ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರ ಕೊಡಗು ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ರಸ್ತೆ ಮೂಲಕ ಮಡಿಕೇರಿಗೆ ತೆರಳಿ ಅಲ್ಲಿಯ ತಾತ್ಕಾಲಿಕ ವಸತಿ ಕೇಂದ್ರದಲ್ಲಿರುವ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು. ನಂತರ ಮಡಿಕೇರಿ ನಗರದಲ್ಲಿ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿದರು. ಮಡಿಕೇರಿ ಬಳಿ ಭೂಕುಸಿತದಿಂದ ಸಿಲುಕಿಕೊಂಡಿರುವ ಸುಮಾರು 60 ಜನರನ್ನು ರಕ್ಷಿಸಲು ಮುಖ್ಯಮಂತ್ರಿ ಗಳು ಪ್ರಯಾಣಿಸಿದ ಹೆಲಿಕಾಪ್ಟರ್ ಬಳಸುವ ಉದ್ದೇಶದಿಂದ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸುವ ಸಲುವಾಗಿ ಮುಖ್ಯಮಂತ್ರಿಗಳು ಇಂದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿ, ನಾಳೆಯೂ ಕೊಡಗು ಜಿಲ್ಲೆಯಲ್ಲೇ ಪ್ರವಾಸ ಮುಂದುವರಿಸಲಿದ್ದಾರೆ.

ಪಾಕಿಸ್ತಾನದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆರಿಫ್ ಅಲ್ವಿ ಹೆಸರನ್ನು ಅಂತಿಮಗೊಳಿಸಿದ ಪಿಟಿಐ

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶನಿವಾರ ಆಯ್ಕೆಯಾಗಿರುವ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷವು ರಾ‍ಷ್ಟ್ರಪತಿ ಅಭ್ಯರ್ಥಿಯನ್ನಾಗಿ ಹಿರಿಯ ನಾಯಕ ಡಾ ಆರಿಫ್ ಅಲ್ವಿ ಅವರ ಹೆಸರನ್ನು ಶನಿವಾರ ಅಂತಿಮಗೊಳಿಸಿದೆ. ಇಂದು ಪಾಕಿಸ್ತಾನ ಚುನಾವಣಾ ಆಯೋಗವು ಮುಂದಿನ ಸೆ.೪ರಂದು ರಾಷ್ಟ್ರಪತಿ ಚುನಾವಣಾ ದಿನಾಂಕವನ್ನು ಅಂತಿಮಗೊಳಿಸಿದ ಹಿನ್ನೆಲೆಯಲ್ಲಿ ಪಿಟಿಐ ತನ್ನ ಅಂತಿಮ ನಿರ್ಧಾರವನ್ನು ಹೊರಹಾಕಿದೆ. ಈಗಿರುವ ರಾ‍ಷ್ಟ್ರಪತಿ ಮಮ್ನೂನ್ ಹುಸೇನ್ ಅವರ ಅಧಿಕಾರಾವಧಿ ಮುಂದಿನ ತಿಂಗಳು ಮುಗಿಯುತ್ತಿದೆ. ಅಧಿಕಾರಾವಧಿ ಮುಗಿಯುವ ಐದು ದಿನ ಮುಂಚಿತವಾಗಿ ಚುನಾವಣೆ ನಡೆಯಲಿದೆ.

ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನನ್ ಇನ್ನಿಲ್ಲ

ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಕೋಫಿ ಅನ್ನನ್ ಇಹಲೋಕ ತ್ಯಜಿಸಿದ್ದಾರೆ. ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ ಮೊದಲ ಕಪ್ಪುವರ್ಣೀಯ ಎಂಬ ಹೆಗ್ಗಳಿಕೆಗೂ ಕೋಫಿ ಅನ್ನನ್ ಪಾತ್ರರಾಗಿದ್ದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅನ್ನನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಸಿರಿಯಾದ ವಿಶೇಷ ರಾಯಭಾರಿಯಾಗಿ ವಿಶ್ವಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಅನ್ನನ್, ಸಿರಿಯಾ ಘರ್ಷಣೆಯನ್ನು ಶಾಂತಿಯುತವಾಗಿ ಪರಿಹರಿಸಲು ಯತ್ನಿಸಿದ್ದರು.

ಆಧಾರ್ ದುರ್ಬಳಕೆದಾರರಿಗೆ ಕಠಿಣ ಶಿಕ್ಷೆ ಅಗತ್ಯ ಎಂದು ಒತ್ತಾಯಿಸಿದ ಸ್ನೋಡೆನ್

ಸಾರ್ವಜನಿಕರ ಮಾಹಿತಿ ಸೋರಿಕೆ ಹಾಗೂ ಅಸುರಕ್ಷತೆ ಸಂಬಂಧಿಸಿದ ವಿವಾದಗಳಿಗೆ ಸಿಲುಕಿರುವ ಆಧಾರ್ ಮಾಹಿತಿಯನ್ನು ಮೂರನೆಯವರು ಬಳಸಿಕೊಂಡರೆ ಸರ್ಕಾರ ಅಂತಹವರನ್ನು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ದಂಡ ವಿಧಿಸಬೇಕು ಎಂದು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಡ್ವರ್ಡ್ ಸ್ನೋಡೆನ್ ಒತ್ತಾಯಿಸಿದ್ದಾರೆ. ಶನಿವಾರ ಜೈಪುರದಲ್ಲಿ ನಡೆದ ಟಾಕ್ ಜರ್ನಲಿಸಂ ೫ ನೇ ಆವೃತ್ತಿಯ ಕಾರ್ಯಕ್ರಮ ಉದ್ದೇಶಿಸಿ ಮಾತಾಡಿದ್ದಾರೆ.

ಹಾರಾಟ ಭತ್ಯೆ ನೀಡದಿದ್ದರೆ ವಿಮಾನ ಚಾಲನೆ ಮಾಡುವುದಿಲ್ಲ ಎಂದ ಏರ್ ಇಂಡಿಯಾ ಪೈಲಟ್ಸ್

ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ನಗದು ಬಿಕ್ಕಟ್ಟು ಎದುರಿಸುತ್ತಿದ್ದು ಸಿಬ್ಬಂದಿಗೆ ವೇತನ ಪಾವತಿ ವಿಳಂಬ ಮಾಡಿದೆ. ಗುರುವಾರ ವೇತನ ಪಾವತಿ ಮಾಡಿದೆ. ಆದರೆ, ಪೈಲಟ್‌ಗಳಿಗೆ ಹಾರಾಟ ಭತ್ಯೆಯನ್ನು ನೀಡಿಲ್ಲ. ಪೈಲಟ್‌ಗಳ ವೇತನದ ಪೈಕಿ ಹಾರಾಟ ಭತ್ಯೆಯೇ ಶೇ.70ರಷ್ಟಿರುತ್ತದೆ. ಇದರಿಂದ ಅಸಮಾಧಾನಗೊಂಡಿರುವ ಪೈಲಟ್‌ಗಳು ಹಾರಾಟ ಭತ್ಯೆ ನೀಡದೆ ಇದ್ದರೆ ವಿಮಾನ ಹಾರಾಟ ಮಾಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಏರ್ ಇಂಡಿಯಾ ಅಧ್ಯಕ್ಷ ಪ್ರದೀಪ್ ಸಿಂಗ್ ಕರೋಲಾ ಅವರಿಗೆ ಪತ್ರ ಬರೆದಿರುವ ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಷನ್, ತಕ್ಷಣವೇ ಭತ್ಯೆ ಪಾವತಿಸಬೇಕು ಎಂದು ಆಗ್ರಹಿಸಿದೆ.

ಭಾರತದ ಇನ್ನಿಂಗ್ಸ್‌ಗೆ ಚೇತರಿಕೆ ನೀಡಿದ ಕೊಹ್ಲಿ-ರಹಾನೆ ಜೊತೆಯಾಟ

ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಭಾರತ ಚೇತರಿಕೆಯ ಹಾದಿ ಹಿಡಿದಿದೆ. ಕ್ರಿಸ್ ವೋಕ್ಸ್ (೩೬ಕ್ಕೆ ೩) ನಡೆಸಿದ ದಾಳಿಯಲ್ಲಿ ಶಿಖರ್ ಧವನ್ (೩೫), ಕೆ ಎಲ್ ರಾಹುಲ್ (೨೩) ಮತ್ತು ಚೇತೇಶ್ವರ ಪೂಜಾರ (೧೪) ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದ್ದ ವೇಳೆ ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ ತಮ್ಮ ಸೊಗಸಾದ ಜೊತೆಯಾಟದಿಂದ ತಂಡದ ಕುಸಿತವನ್ನು ತಪ್ಪಿಸಿದರು. ಎಚ್ಚರಿಕೆಯಿಂದ ಈ ಜೋಡಿ ಕಟ್ಟಿದ ಇನ್ನಿಂಗ್ಸ್ ಆತಿಥೇಯರ ಕೈ ಮೇಲಾಗದಂತೆ ಮಾಡಿತು. ೧೮ನೇ ಅರ್ಧಶತಕದೊಂದಿಗೆ ಕೊಹ್ಲಿ ಮುನ್ನಡೆದರೆ, ಅವರಿಗೆ ರಹಾನೆ ಕೂಡಾ ಅದ್ಭುತ ಬೆಂಬಲ ನೀಡಿದರು. ದಿನದಾಟದ ೪೦ ಓವರ್‌ಗಳು ಬಾಕಿ ಇರುವಾಗ ಭಾರತ ೫೦ ಓವರ್‌ಗಳಲ್ಲಿ ೩ ವಿಕೆಟ್ ನಷ್ಟಕ್ಕೆ ೧೭೭ ರನ್ ಗಳಿಸಿತ್ತು. ಕೊಹ್ಲಿ ೫೧ ಮತ್ತು ರಹಾನೆ ೪೬ ರನ್‌ಗಳೊಂದಿಗೆ ಕ್ರೀಸ್‌ನಲ್ಲಿದ್ದರು. ಅಂದಹಾಗೆ, ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡೂ ಪಂದ್ಯಗಳನ್ನು ಸೋತಿರುವ ಹಿನ್ನೆಲೆಯಲ್ಲಿ ಭಾರತ ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ರಜನೀಕಾಂತ್‌ ಮುಂದಿನ ಚಿತ್ರದಲ್ಲಿ ತ್ರಿಷಾ ಅಭಿನಯ

ಕಾರ್ತಿಕ್ ಸುಬ್ಬರಾಜು ನಿರ್ದೇಶನದ ರಜನಿಕಾಂತ್‌ ನೂತನ ತಮಿಳು ಸಿನಿಮಾದಲ್ಲಿ ತ್ರಿಷಾ ನಟಿಸಲಿದ್ದಾರೆ. ಕೇರಳ ಮೂಲದ ನಟಿ ಮಾಳವಿಕಾ ಮೋಹನನ್‌ ಕೂಡ ಚಿತ್ರತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ರಜನಿಕಾಂತ್‌ ಅವರೊಂದಿಗೆ ನಟಿ ತ್ರಿಷಾಗೆ ಇದು ಮೊದಲ ಸಿನಿಮಾ. ನಟಿ ಮಾಳವಿಕಾ ಅವರು ಖ್ಯಾತ ಸಿನಿಮಾ ಛಾಯಾಗ್ರಾಹಕ ಕೆ ಯು ಮೋಹನನ್ ಅವರ ಪುತ್ರಿ. ಹಿಂದಿ, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅವರಿಗೆ ಇದು ಮೊದಲ ತಮಿಳು ಸಿನಿಮಾ.

ಕೇರಳ ಸಂತ್ರಸ್ತರ ಸ್ಥಿತಿಗೆ ಮಿಡಿದ ವಿರಾಟ್ ಕೊಹ್ಲಿ, ಸುನೀಲ್ ಛೆಟ್ರಿ

ಶತಮಾನದ ಭೀಕರ ಜಲ ಪ್ರವಾಹಕ್ಕೆ ಸಿಲುಕಿರುವ ಕೇರಳ ನಾಡಿನ ಜನತೆಗೆ ಹೊರಗೆ ಬಾರದೆ ಸಾಧ್ಯವಾದಷ್ಟೂ ಒಳಾಂಗಣಗಳಲ್ಲೇ ಉಳಿಯಬೇಕೆಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. "ಸದ್ಯದಲ್ಲೇ ಪರಿಸ್ಥಿತಿ ತಿಳಿಯಾಗುವ ವಿಶ್ವಾಸವಿದೆ. ಜನತೆ ಸಾಧ್ಯವಾದಷ್ಟೂ ತಮ್ಮ ಮನೆಯೊಳಗಡೆಯೇ ಉಳಿದುಕೊಳ್ಳುವುದು ಒಳ್ಳೆಯದು. ಸಂತ್ರಸ್ತ ಜನರ ನೆರವಿಗಾಗಿ ಶಕ್ತಿಮೀರಿ ಪರಿಶ್ರಮಿಸುತ್ತಿರುವ ದೇಶದ ಸೇನೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ಕಾರ್ಯ ಅಭಿನಂದನಾರ್ಹ,'' ಎಂದು ಕೊಹ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಇನ್ನು, ಭೀಕರ ಪ್ರವಾಹಕ್ಕೆ ಸಿಲುಕಿರುವ ಕೇರಳ ಜತೆಗೆ ನಿಲ್ಲಬೇಕಾದ ಸಮಯ ಇದಾಗಿದ್ದು, ನಾವೆಲ್ಲರೂ ನಮ್ಮಿಂದಾದಷ್ಟು ನೆರವು ನೀಡಬೇಕಿದೆ ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಕೋರಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More