ಸಹಭಾಗಿ ಪತ್ರಿಕೋದ್ಯಮ | ಸ್ಥಳೀಯ ಆಡಳಿತದ ವೈಫಲ್ಯ ಎತ್ತಿಹಿಡಿದ ದಿನಪತ್ರಿಕೆಗಳು

ಜನಪರವಾದ ವರದಿಗಳನ್ನು ಯಾವುದೇ ಮಾಧ್ಯಮ ಮಾಡಿದರೂ ಅದನ್ನು ಮತ್ತೊಂದು ಮಾಧ್ಯಮ ಅನುಕರಿಸುವುದು ಉತ್ತಮ ಬೆಳವಣಿಗೆ. ಕೊಡಗಿನ ಈಗಿನ ಸ್ಥಿತಿಗೆ ಮಿತಿಮೀರಿದ ಭೂ ಪರಿವರ್ತನೆ ಕಾರಣ ಎಂದು ‘ದಿ ಸ್ಟೇಟ್’ ಹೇಳಿದ್ದನ್ನು ಕನ್ನಡಪ್ರಭ, ವಿಜಯ ಕರ್ನಾಟಕ ದೈನಿಕಗಳು ಪ್ರಕಟಿಸಿವೆ

‘ಕೊಡಗಿನ ಈಗಿನ ಸ್ಥಿತಿಗೆ ಮಿತಿಮೀರಿದ ಭೂ ಪರಿವರ್ತನೆ ಕಾರಣವಾಯಿತೇ?’ ಎಂಬ ಶೀರ್ಷಿಕೆಯಡಿ ‘ದಿ ಸ್ಟೇಟ್‌’ ಆಗಸ್ಟ್‌ ೮ರಂದು ವರದಿ ಪ್ರಕಟಿಸಿತ್ತು. ವರದಿಯಲ್ಲಿ ಪ್ರಧಾನವಾಗಿ ಭೂ ಪರಿವರ್ತನೆ ಅಂಶವನ್ನೇ ಉಲ್ಲೇಖಿಸಲಾಗಿತ್ತು. ಇದೇ ಅಂಶವನ್ನೇ ಕನ್ನಡಪ್ರಭ, ವಿಜಯ ಕರ್ನಾಟಕ ಸೇರಿದಂತೆ ಉಳಿದ ದಿನಪತ್ರಿಕೆಗಳು ಪ್ರಕಟಿಸಿ, ಸಹಭಾಗಿ ಪತ್ರಿಕೋದ್ಯಮಕ್ಕೆ ಕೈಜೋಡಿಸಿವೆ.

ಕೊಡಗು ಜಿಲ್ಲಾದ್ಯಂತ ಈ ಬಾರಿ ಶೇ.೫೦ಕ್ಕಿಂತಲೂ ಹೆಚ್ಚಿನ ಮಳೆ ಸುರಿದ ಕಾರಣ ಪ್ರವಾಹ ಬಂದೆರಗಿದೆ. ಅಕ್ಷರಶಃ ತತ್ತರಿಸಿರುವ ಈ ಜಿಲ್ಲೆಯಲ್ಲಿ ಅತಿ ಸೂಕ್ಷ್ಮ ಹಾಗೂ ಜಲಮೂಲವನ್ನು ಹಿಡಿದಿಟ್ಟುಕೊಳ್ಳುವ ಕೃಷಿ ಪ್ರದೇಶಗಳನ್ನು ಸಂರಕ್ಷಿಸುವಲ್ಲಿ ಸ್ಥಳೀಯ ಆಡಳಿತವೂ ಸೇರಿದಂತೆ ಕಂದಾಯ ಇಲಾಖೆ ವೈಫಲ್ಯವನ್ನು ‘ದಿ ಸ್ಟೇಟ್‌’ ವರದಿಯಲ್ಲಿ ಪ್ರಸ್ತಾಪಿಸಿತ್ತು.

ಕಳೆದ ಹತ್ತು ವರ್ಷಗಳಲ್ಲಿ ಅಂದಾಜು 2,800 ಎಕರೆಯಷ್ಟು ಕಾಫಿ ತೋಟ ಹಾಗೂ ಭತ್ತದ ಗದ್ದೆಗಳು ವಾಣಿಜ್ಯ ಉದ್ದೇಶಗಳಿಗಾಗಿ ಭೂ ಪರಿವರ್ತನೆಯಾಗಿದೆ ಎಂದು ಅಂಕಿ-ಅಂಶ ಸಮೇತ ವಿವರಿಸಿತ್ತು. ಕೃ‍ಷಿ ಪ್ರದೇಶಗಳನ್ನು ಖರೀದಿಸಿ ಭೂ ಪರಿವರ್ತನೆಗೆ ಒಳಪಡಿಸುತ್ತಿರುವುದಲ್ಲದೆ ಮನಸೋ ಇಚ್ಛೆ ಬಡಾವಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಆಗಿರುವ ಭೂ ಪರಿವರ್ತನೆ ಬೆಳವಣಿಗೆ ದರದ ಮೇಲೂ ಬೆಳಕು ಚೆಲ್ಲಿತ್ತು.

ಇಂತ ವರದಿಗಳನ್ನು ಯಾವುದೇ ಮಾಧ್ಯಮ ಮಾಡಿದರೂ ಅದನ್ನು ಮತ್ತೊಂದು ಮಾಧ್ಯಮ ಅನುಕರಿಸುವುದು ಉತ್ತಮ ಪತ್ರಿಕೋದ್ಯಮ. ಇಲ್ಲಿ ಯಾರು ಮೊದಲು ಎನ್ನುವುದಕ್ಕಿಂತಲೂ, ನಿಸರ್ಗದಲ್ಲಾಗುತ್ತಿರುವ ಪಲ್ಲಟಗಳ ಬಗ್ಗೆ ಅರಿವು ಮೂಡಿಸಲು ನೆರವಾಗಬಹುದು ಮತ್ತು ಅಧಿಕಾರಶಾಹಿಯ ಕಣ್ಣು ತೆರೆಸಲು ಇಂಥ ವರದಿಗಳು ನೆರವಾಗಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More