ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ನಗರ ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ ಇಂದು

ರಾಜ್ಯದ ೧೦೫ ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ. ೩ ಮಹಾನಗರ ಪಾಲಿಕೆ, ೨೩ ನಗರಸಭೆ, ೫೩ ಪುರಸಭೆ ಹಾಗೂ ೨೦ ಪಟ್ಟಣ ಪಂಚಾಯಿತಿ ಸೇರಿದಂತೆ ೧೦೫ ಸ್ಥಳೀಯ ಸಂಸ್ಥೆಗಳ ೨,೬೩೪ ವಾರ್ಡ್‌ಗಳಿಗೆ ಚುನಾವಣೆ ನಡೆದಿದ್ದು, ೯,೧೨೧ ಮಂದಿಯ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ. ಅತಂತ್ರ ಫಲಿತಾಂಶ ಪ್ರಕಟವಾದ ಕಡೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಹೊಂದಾಣಿಕೆ ಮಾಡಿಕೊಳ್ಳಲಿದ್ದಾರೆ ಎಂದು ಉಭಯ ಪಕ್ಷಗಳ ನಾಯಕರು ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಯುರೋಪ್ ಪ್ರವಾಸ ಆರಂಭ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರದಿಂದ ೧೦ ದಿನಗಳವರೆಗೆ ಯುರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ. ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ, ವಿಧಾನ ಪರಿಷತ್ ಸದಸ್ಯ ಕೆ ಗೋವಿಂದರಾಜು, ಅವರ ಪುತ್ರ ಹಾಗೂ ಸಿದ್ದರಾಮಯ್ಯ ಕುಟುಂಬ ಸದಸ್ಯರು ಸ್ಕಾಟ್ಲೆಂಡ್, ಪ್ಯಾರಿಸ್, ರಷ್ಯಾ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಲಿದ್ದಾರೆ.

ಹೆದ್ದಾರಿ ಬಾರ್‌ ಪರವಾನಗಿ ನವೀಕರಣ ಪ್ರಕ್ರಿಯೆ ಆರಂಭ

ರೈತರ ಸಾಲ ಮನ್ನಾಕ್ಕಾಗಿ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವು ಇದೀಗ ಹಿಂದಿನ ವರ್ಷ ಸುಪ್ರೀಂ ಕೋರ್ಟ್‌ ಆದೇಶದಿಂದ ಬಂದ್ ಆಗಿದ್ದ ಹೆದ್ದಾರಿ ಪಕ್ಕದ ಮದ್ಯದಂಗಡಿಗಳ ಮರು ಆರಂಭಕ್ಕೆ ಪರವಾನಗಿ ನವೀಕರಿಸಲು ಮುಂದಾಗಿದೆ. ಸೋಮವಾರದಿಂದಲೇ ನವೀಕರಣ ಪ್ರಕ್ರಿಯೆ ಆರಂಭವಾಗಲಿದ್ದು, ಹಳೆಯ ಆದೇಶದಿಂದ ಬಂದ್ ಆಗಿದ್ದ ಗ್ರಾಮೀಣ ಭಾಗದ ಹೆದ್ದಾರಿ ಬಾರ್‌ಗಳೆಲ್ಲ ಮತ್ತೆ ಬಾಗಿಲು ತೆರೆದುಕೊಳ್ಳಲಿವೆ.

ಕ್ವಾರ್ಟರ್‌ಫೈನಲ್ ಕನವರಿಕೆಯಲ್ಲಿ ಜೊಕೊವಿಚ್

ಪ್ರತಿಷ್ಠಿತ ಅಮೆರಿಕನ್ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ವಿಶ್ವದ ಮಾಜಿ ನಂ ೧ ಆಟಗಾರ ನೊವಾಕ್ ಜೊಕೊವಿಚ್ ಕಣಕ್ಕಿಳಿಯಲಿದ್ದಾರೆ. ಭಾರತೀಯ ಕಾಲಮಾನ ಸುಮಾರು ರಾತ್ರಿ ೧೧.೩೦ಕ್ಕೆ ಆರಂಭವಾಗಲಿರುವ ಪಂದ್ಯದಲ್ಲಿ ಪೋರ್ಚುಗಲ್ ಆಟಗಾರ ಜೊವೊ ಸೌಸಾ ವಿರುದ್ಧ ಜೊಕೊವಿಚ್ ಕಾದಾಡಲಿದ್ದಾರೆ. ಹದಿನಾಲ್ಕನೇ ಗ್ರಾಂಡ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಜೊಕೊವಿಚ್, ಸೌಸಾ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಅಂತೆಯೇ, ವನಿತೆಯರ ಸಿಂಗಲ್ಸ್ ವಿಭಾಗದ ಅಂತಿಮ ಹದಿನಾರರ ಘಟ್ಟದ ಪಂದ್ಯದಲ್ಲಿ ಸ್ಲೊವೇಕಿಯಾದ ಡೊಮಿನಿಕಾ ಸಿಬುಲ್ಕೋವಾ ವಿರುದ್ಧ ಅಮೆರಿಕದ ಮ್ಯಾಡಿಸನ್ ಕೀಸ್ ಕಾದಾಡಲಿದ್ದು, ಪಂದ್ಯ ರಾತ್ರಿ ೯.೩೦ಕ್ಕೆ ಶುರುವಾಗಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More