ಗೌರಿ ನೆನಪು| ದಿ ಸ್ಟೇಟ್‌ ಪ್ರಕಟಿಸಿದ ಗೌರಿ ಲಂಕೇಶ್‌ ಕುರಿತ ಟಾಪ್‌ ೨೫ ಸುದ್ದಿಗಳ ಗುಚ್ಛ

ಸಾಮಾಜಿಕ ಕಾರ್ಯಕರ್ತೆ, ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಇಂದಿಗೆ ಒಂದು ವರ್ಷ. ದೇಶವನ್ನೇ ಬೆಚ್ಚಿ ಬೀಳಿಸಿದ ಈ ಹತ್ಯೆ, ಅಭಿವ್ಯಕ್ತಿ ಸ್ವಾತಂತ್ರ್ಯ, ವಿಚಾರಬೇಧ, ಸಾಮರಸ್ಯಗಳ ಮೇಲೆ ದಾಳಿ ಕೂಡ. ಈ ಒಂದು ವರ್ಷದ ಅವಧಿಯಲ್ಲಿ ‘ದಿ ಸ್ಟೇಟ್‌’ ಚರ್ಚೆಗಳು ಮತ್ತು ತನಿಖೆಗೆ ಕುರಿತ ವಿಶೇಷ ವರದಿಗಳನ್ನು ಇಲ್ಲಿ ನೀಡಿದ್ದೇವೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯಾಗಿ ಇಂದಿಗೆ 81 ದಿನ ಉರುಳಿವೆ. ತನಿಖಾ ತಂಡ ನೆಪಮಾತ್ರಕ್ಕೆ ತನಿಖೆ ನಡೆಸಿದ್ದು, ಎಸ್‌ಐಟಿಗೆ ನೇಮಕಗೊಂಡಿದ್ದ ಅಧಿಕಾರಿಗಳು ಈಗಾಗಲೇ ಠಾಣೆಗಳಿಗೆ ಮರಳಿದ್ದಾರೆ. ತನಿಖೆಯ ಹಾದಿಯಲ್ಲಿ ಪೊಲೀಸ್ ಇಲಾಖೆಯ ಮೂಲಗಳೇ ಬಿತ್ತಿದ ಮಿಥ್ಯೆಗಳ ಪಟ್ಟಿ ಇಲ್ಲಿದೆ

“ಹಾರಿಕೆಯ ಉತ್ತರ ಸಾಕು, ಹಂತಕರ ಬಂಧನವಾಗಬೇಕು” ಎಂದು ಒತ್ತಾಯಿಸಿ, ನಗರದ ಆನಂದರಾವ್‌ ಸರ್ಕಲ್‌ ಬಳಿ ಇರುವ ಗಾಂಧಿ ಪ್ರತಿಮೆಯಿಂದ ಬೆಳಗ್ಗೆ ೧೧ ಗಂಟೆಗೆ ಮೆರವಣಿಗೆ ಆರಂಭವಾಗಿ ಮುಖ್ಯಮಂತ್ರಿ ಮನೆಯವರೆಗೆ ಸಾಗಲಿದೆ. ಪ್ರತಿಭಟನೆಯಲ್ಲಿ ಹಲವು ಪತ್ರಕರ್ತರು, ಕಲಾವಿದರು, ಪ್ರಗತಿಪರ ಚಿಂತಕರು ಭಾಗಿಯಾಗಲಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ್ ವಾಗ್ಮೊರೆ ಪರ ವಿಜಯಪುರ ಜಿಲ್ಲೆಯ ಶ್ರೀರಾಮ ಸೇನೆ ಘಟಕ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಸದ್ಯ, ವಾಗ್ಮೊರೆ ಕುಟುಂಬಕ್ಕೆ ಆರ್ಥಿಕ ನೆರವು ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧವಾಗಿ ಎಸ್ಐಟಿ ಪರಶುರಾಮ ವಾಘ್ಮೋರೆ ಎಂಬಾತನನ್ನು ಬಂಧಿಸಿದೆ. ಈ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಗೌರಿ ಹಂತಕ ಸೆರೆ ಎಂದೇ ಬಿಂಬಿತವಾಗುತ್ತಿದೆ. ಆದರೆ, ವಾಸ್ತವದಲ್ಲಿ ವಿಶೇಷ ತನಿಖಾ ತಂಡದ ಮುಖ್ಯಸ್ಥ ಬಿ ಕೆ ಸಿಂಗ್ ಹೇಳುತ್ತಿರುವುದೇ ಬೇರೆ.

ಗೌರಿ ಲಂಕೇಶ್‌ ಹತ್ಯೆಯಾಗಿ ಮೂರು ತಿಂಗಳಾದರೂ ತನಿಖೆಯಲ್ಲಿ ಪ್ರಗತಿ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿಭಟಿಸಿದ ದಿನವೇ ಪ್ರಕರಣದಲ್ಲಿ ‘ಮೇಜರ್‌ ಬ್ರೇಕ್‌ಥ್ರೂ’ ಎಂಬ ಸುದ್ದಿ ಹಬ್ಬಿದ್ದು ನಿಜಕ್ಕೂ ಕಾಕತಾಳೀಯವಾ? ಈ ಬಗ್ಗೆ ಅನುಮಾನ ಹುಟ್ಟಲು ಸಾಕಷ್ಟು ಕಾರಣಗಳಿವೆ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಕುರಿತು ಎಸ್‌ಐಟಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಪ್ರಮುಖ ಆರೋಪಿ ನವೀನ್‌ ಕುಮಾರ್‌ ಪತ್ನಿ ರೂಪ, ತನ್ನ ಪತಿಯ ನಡವಳಿಕೆ ಕುರಿತು ವಿವರಿಸಿದ್ದಾರೆ. ಮುಖ್ಯವಾಗಿ, ಆರೋಪಿಯ ಸನಾತನ ಸಂಸ್ಥೆಯೊಂದಿಗಿನ ಒಡನಾಟ ಕೂಡ ಹೇಳಿಕೆಯಲ್ಲಿ ಬಹಿರಂಗವಾಗಿದೆ

ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ ಅನುಮಾನದ ಮೇಲೆ ಬಲಪಂಥೀಯ ಸಂಘಟನೆಗಳ ಮೂವರು ಕಾರ್ಯಕರ್ತರನ್ನು ಎಟಿಎಸ್ ಬಂಧಿಸಿದೆ. ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರೆ, ಕಲಬುರ್ಗಿ ಅವರ ಹತ್ಯೆಯಲ್ಲಿ ಈ ಮೂವರ ಪಾತ್ರ ಇರುವ ಅನುಮಾನ ವ್ಯಕ್ತವಾಗಿದೆ.

ಹನ್ನೊಂದು ಜನರ ಬಂಧನದ ಮೂಲಕ ಗೌರಿ ಹತ್ಯೆ ಪ್ರಕರಣದ ತನಿಖೆ ನಿರ್ಣಾಯಕ ಘಟ್ಟಕ್ಕೆ ಬಂದಿದೆ. ಜನಸಾಮಾನ್ಯರೇ ಆಗಿದ್ದವರ ತಲೆಗೆ ದ್ವೇಷದ ಮದ್ದು ತುಂಬಿ, ಕೈಗೆ ಬಂದೂಕು ಕೊಟ್ಟು, ಧರ್ಮ ರಕ್ಷಣೆ ವೇಷ ತೊಡಿಸಿ, ಕೊಲೆಗಡುಕರನ್ನಾಗಿಸಿದ ಕಾಣದ ಕೈಗಳು ಬಯಲಿಗೆ ಬರುವುದಷ್ಟೇ ಬಾಕಿ ಇದೆ.

ಮತೋನ್ಮಾದಕ್ಕೆ ಒಳಗಾಗಿ ಬದುಕನ್ನು ನಾಶ ಮಾಡಿಕೊಂಡ ಟೈಗರ್‌ ಗ್ಯಾಂಗ್‌ ಸದಸ್ಯರ ಹಿನ್ನೆಲೆ, ಉದ್ದೇಶ, ಅಂತ್ಯದ ಹಿಂದಿನ ಸವಿಸ್ತಾರ ವಿವರವನ್ನು ವಿಶ್ವಾಸಾರ್ಹ ಮೂಲಗಳಿಂದ ಸಂಗ್ರಹಿಸಲಾಗಿದೆ. ಗೌರಿ ಹತ್ಯೆ ಹಿಂದೆಯೂ ಇದೇ ಮಾದರಿ ಕಾರ್ಯಾಚರಣೆ ಬೆಳಕಿಗೆ ಬಂದಿರುವುದರಿಂದ ಇದು ಕುತೂಹಲಕಾರಿ.

ಉತ್ತರ ಕರ್ನಾಟಕದಲ್ಲಿ ಈವರೆಗೂ ನಡೆದ ನಿರ್ದಯ ಅಪರಾಧಗಳಿಗೆ ಬಡತನ, ನಿರುದ್ಯೋಗ ಹಾಗೂ ರಾಜಕೀಯ ದ್ವೇಷದ ಹಿನ್ನೆಲೆ ಇರುತ್ತಿತ್ತು. ಆದರೆ, ಟೈಗರ್‌ ಗ್ಯಾಂಗ್‌ ಎಸಗಿದ ಅಪರಾಧಗಳ ಹಿಂದೆ ಕೆಲಸ ಮಾಡಿದ್ದು ತೀವ್ರಗಾಮಿ ಮತೀಯವಾದ. ಇದು ಪೋಲಿಸರನ್ನು ಬೆಚ್ಚಿಬೀಳುವಂತೆ ಮಾಡಿತ್ತು.

ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಅವರಿಗೆ ಪತ್ರಕರ್ತರು ಗೌರಿ ಲಂಕೇಶ್‌ ಹತ್ಯೆ ವಿಚಾರವಾಗಿ ಪ್ರಶ್ನೆ ಮಾಡಲು ಮುಂದಾದಾಗ ಯಾವುದೇ ಪ್ರತಿಕ್ರಿಯೆ ನೀಡದೆ, ಸ್ಥಳದಿಂದ ನಿರ್ಗಮಿಸಿದ್ದಾರೆ. ‘ದಿ ಕ್ಟಿಂಟ್‌’ ಆನ್‌ಲೈನ್‌ ಸುದ್ದಿಸಂಸ್ಥೆ ಪ್ರಕಟಿಸಿರುವ ವಿಡಿಯೋ ಸ್ಟೋರಿಯಲ್ಲಿ ಈ ಪ್ರಸಂಗ ಬೆಳಕಿಗೆ ಬಂದಿದೆ.

ಗೌರಿ ಲಂಕೇಶ್ ಹತ್ಯೆ ವಿಷಯದಲ್ಲಿ ಬಿತ್ತರವಾಗುತ್ತಿರುವ ಸುದ್ದಿಗಳಲ್ಲಿ ಖಚಿತತೆ ಇದೆ ಎನಿಸಿದರೂ, ಅಧಿಕೃತತೆ ಇನ್ನೂ ಸಿಕ್ಕಿಲ್ಲ. ಈ ಕಾರಣಕ್ಕೆ ಇದು ಎಚ್ಚರ ವಹಿಸಬೇಕಾದ ಸಂಗತಿಯೂ ಹೌದು. ಈ ಕುರಿತು ‘ದಿ ಸ್ಟೇಟ್’ ಸಂಪಾದಕೀಯ ನಿರ್ದೇಶಕರಾದ ಸುಗತ ಶ್ರೀನಿವಾಸರಾಜು ಅವರ ‘ಸ್ಟೇಟ್‌ಮೆಂಟ್‌’.

ಗೌರಿ ಲಂಕೇಶ್‌ ಹತ್ಯೆಯಾದಾಗ ವಿವಿಧ ತಾತ್ವಿಕ ಹಿನ್ನೆಲೆಯವರು ಆಘಾತಗೊಂಡರು ಮತ್ತು #ನಾನೂಗೌರಿ ಎಂದು ಜೊತೆಯಾದರು. ಆದರೆ ಇದಾಗಿ ಒಂದು ವರ್ಷದಲ್ಲಿ ಆಕೆಯನ್ನು ಸೀಮಿತ ಸೈದ್ಧಾಂತಿಕ ಆಲೊಚನಾ ಕ್ರಮದ ಚೌಕಟ್ಟಿಗೆ ಎಳೆದು ತರಲಾಗುತ್ತಿದೆ. ಗೌರಿ ನೆನಪಿನ ಕಾರ್ಯಕ್ರಮ ಕೇವಲ ಪ್ರತಿರೋಧದ ಆಚರಣೆಯಷ್ಟೇ ಆಗದೆ, ಎಲ್ಲರನ್ನೂ ಒಳಗೊಳ್ಳುವ ಆಲೋಚನಾ ಕ್ರಮವಾಗಬೇಕು ಎಂದು ಸುಗತ ಶ್ರೀನಿವಾಸರಾಜು ವಿಶ್ಲೇಷಿಸಿದ್ದಾರೆ.

ಗೌರಿ ದಿನದಲ್ಲಿ ಭಾಗವಹಿಸಿದ್ದ ಯುವ ನಾಯಕರಾದ ಕನ್ಹಯ್ಯ ಕುಮಾರ್ ಮತ್ತು ಉಮರ್‌ ಖಾಲಿದ್, ಗೌರಿ ಲಂಕೇಶ್‌, ಸಮಕಾಲೀನ ರಾಜಕಾರಣ, ಉದ್ಯೋಗ ಸಮಸ್ಯೆ, ಧರ್ಮಾಧಾರಿತ ಹಿಂಸಾಚಾರ ಕುರಿತು ಮಾತನಾಡಿದ್ದಾರೆ

ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್‌ ಹಾಲ್‌ನಲ್ಲಿ ಈಚೆಗೆ ಆಯೋಜಿಸಲಾಗಿದ್ದ ಗೌರಿ ಚಾರಿಟಬಲ್‌ ಟ್ರಸ್ಟ್‌ ಉದ್ಘಾಟನೆ ಮತ್ತು ವಿಚಾರ ಸಂಕಿರಣದಲ್ಲಿ ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ತಮ್ಮ ಭಾಷಣದಲ್ಲಿ ಸಮಾನತೆಯೆ ಆಶಯವನ್ನು, ಮಾನವೀಯ ಅಂತಕರಣವನ್ನು ಸಾರಿ ಹೇಳಿದ್ದಾರೆ.

ಸಾಹಿತಿ, ಪತ್ರಕರ್ತ ಪಿ ಲಂಕೇಶರ ಸ್ನೇಹಿತ ಚಂದ್ರಶೇಖರ ಪಾಟೀಲರು ಲಂಕೇಶ್ ಪುತ್ರಿ ಗೌರಿ ಲಂಕೇಶರ ವ್ಯಕ್ತಿತ್ವವನ್ನು ‘ಸಂಕ್ರಮಣ’ದ ಚಂಪಾ ಕಾಲಂನಲ್ಲಿ ಚುರುಕು ಭಾಷೆಯಲ್ಲಿ, ಘಟನಾವಳಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯ ಸಮ್ಮೇಳನ ಹೊಸ್ತಿಲಲ್ಲಿರುವುದರಿಂದ ಈ ಬರಹ ಪ್ರಸ್ತುತ

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಗೆ ಇತಿಹಾಸದಲ್ಲೇ ಅತಿ ದೊಡ್ಡ ವಿಶೇಷ ತನಿಖಾ ತಂಡವನ್ನು ರಾಜ್ಯ ಸರ್ಕಾರ ನೇಮಕ ಮಾಡಿತ್ತು. ಮೂಲಗಳ ಪ್ರಕಾರ ತನಿಖೆಯಲ್ಲಿ ಯಾವುದೇ ಪ್ರಗತಿ ಇಲ್ಲದ ಹಿನ್ನೆಲೆ ಎಸ್‌ಐಟಿಯಲ್ಲಿದ್ದ ಸಿಬ್ಬಂದಿ ಅವರವರ ಠಾಣೆಯ ಕೆಲಸಕ್ಕೆ ಹಿಂತಿರುಗುತ್ತಿದ್ದಾರೆ.

ತಮಿಳುನಾಡಿನ ಪ್ರಸಿದ್ಧ ಕವಿ ಮತ್ತು ಲೇಖಕ ದಿವಂಗತ ಶಾಹುಲ್‌ ಹಮೀದ್‌ ಅವರ ಕುಟುಂಬ ಈ ವರ್ಷ ಪ್ರಕಟವಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಿರಸ್ಕರಿಸಿದೆ. ಗೌರಿ ಲಂಕೇಶ್‌ ಹತ್ಯೆ, ಪ್ರಶ್ನಿಸುವವರ ದನಿ ಹತ್ತಿಕ್ಕುವ ಪ್ರಯತ್ನ ನಡೆಯುವಾಗ ಪ್ರಶಸ್ತಿ ಒಪ್ಪಿಕೊಳ್ಳಲಾಗದು ಎಂದಿದ್ದಾರೆ.

ಪೆಡಿಸ್ಟ್ರಿಯನ್ ಪಿಕ್ಚರ್ ನಿರ್ಮಾಣದಲ್ಲಿ ಸಿದ್ಧವಾದ ಈ ಸಾಕ್ಷ್ಯಚಿತ್ರ ಇತ್ತೀಚೆಗೆ ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಅವರದ್ದು. ಸಾಮಾಜಿಕ ಸಮಸ್ಯೆಗಳು, ಕೋಮುವಾದ ವಿರುದ್ಧ ಹೋರಾಡಿದ ಗೌರಿಯವರು ಗುಂಡಿಗೆ ಬಲಿಯಾದ ಹಿನ್ನೆಲೆಯಲ್ಲಿ ದೀಪು ಅವರ ನಿರ್ದೇಶನದಲ್ಲಿ ಈ ಸಾಕ್ಷ್ಯಚಿತ್ರ ಸಿದ್ಧವಾಯಿತು. ರಾಜ್ಯ ಮತ್ತು ರಾಷ್ಟ್ರಮಟ್ಟದ ಹೋರಾಟಗಾರರು, ಚಿಂತಕರು ತಮ್ಮ ಅಭಿಪ್ರಾಯ, ಗೌರಿ ಅವರೊಂದಿಗಿನ ನೆನಪುಗಳನ್ನು ಈ ಸಾಕ್ಷ್ಯಚಿತ್ರದಲ್ಲಿ ಹಂಚಿಕೊಂಡಿದ್ದಾರೆ.

ಗೌರಿ ಲಂಕೇಶ್‌ ಅವರನ್ನು ಕೊಂದ ಕೃತ್ಯವನ್ನು ಜೀವಪರ ಮನಸ್ಸುಗಳು ಖಂಡಿಸಿದ್ದವು. ರಾಜ್ಯ, ದೇಶವಲ್ಲದೆ ಇಡೀ ವಿಶ್ವಾದ್ಯಂತ ಸಾತ್ವಿಕ ಪ್ರತಿಭಟನೆಗಳು ನಡೆದವು. ಆಗ ಮೊಳಗಿದ ‘ನಾನೂ ಗೌರಿ’ ಹಾಡು ಎಲ್ಲರ ಗಮನ ಸೆಳೆದಿತ್ತು. ಆದರೀಗ, ಆರತಿ ರಾವ್ ಅವರ ‘ಸಾಂಗ್‌ ಫಾರ್‌ ಗೌರಿ’ ಎಲ್ಲರ ಮನ ಗೆಲ್ಲುತ್ತಿದೆ.

ಸೈದ್ಧಾಂತಿಕ ಪರಿಶುದ್ಧತೆಯ ಬೆನ್ನುಹತ್ತಿ ವಾಸ್ತವದ ರಾಜಕಾರಣದ ಗಂಭೀರ ಸಮಸ್ಯೆಗಳಿಗೆ ವಿಮುಖವಾಗದಂತೆ ‘ಗೌರಿ ದಿನ’ದಂದು ನಡೆದ ಸಮಾವೇಶದಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತವಾಗಿದೆ. ಬರಲಿರುವ ಚುನಾವಣೆಯಲ್ಲಿ ಪ್ರಗತಿಪರ ಶಕ್ತಿಗಳು ಮಾಡಿಕೊಳ್ಳಬೇಕಾದ ಆಯ್ಕೆಯನ್ನು ಸಮಾವೇಶ ನಿಚ್ಚಳಗೊಳಿಸಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್‌ ಹಾಲ್‌ನಲ್ಲಿ ಈಚೆಗೆ ಆಯೋಜಿಸಲಾಗಿದ್ದ ಗೌರಿ ಚಾರಿಟಬಲ್‌ ಟ್ರಸ್ಟ್‌ ಉದ್ಘಾಟನೆ ಮತ್ತು ವಿಚಾರ ಸಂಕಿರಣದಲ್ಲಿ ಯುವ ಬರಹಗಾರ್ತಿ ನಜ್ಮಾ ಅವರು ಕವಿತಾ ಲಂಕೇಶ್ ಅವರ ಕವಿತೆ ಓದುವ ಮೂಲಕವೇ ಗೌರಿ ಹಂತಕರ ಹೇಡಿತನವನ್ನು ಖಂಡಿಸಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆ ಸಂದರ್ಭದಲ್ಲಿ ಬಿಬಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯ ರೇಡಿಯೋ ಕಾರ್ಯಕ್ರಮ ನ್ಯೂಸ್‌ಅವರ್‌ನಲ್ಲಿ ಸುಗತ ಶ್ರೀನಿವಾಸರಾಜು ಅವರು ಆಡಿದ ಮಾತುಗಳು.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಭಾರತೀಯ ಮಾಧ್ಯಮಗಳಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿ ಬಿತ್ತರವಾದವು. ಅಂತಾರಾಷ್ಟ್ರೀಯ ಸುದ್ದಿವಾಹಿನಿ ಬಿಬಿಸಿ ನ್ಯೂಸ್‌ನಲ್ಲಿ ಈ ಸಂದರ್ಭದಲ್ಲಿ ಸುಗತ ಶ್ರೀನಿವಾಸರಾಜು ಗೌರಿ ಲಂಕೇಶ್‌ ಹೋರಾಟ, ಪತ್ರಿಕೋದ್ಯಮ ಕುರಿತು ಮಾತನಾಡಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More