ಮೇಲ್ಜಾತಿಯವರ ದಾಳಿಗೆ ಹೆದರಿ ಶಾಲೆಯನ್ನೇ ಮರೆತ ಮಿರ್ಚಾಪುರ ದಲಿತ ಮಕ್ಕಳು

ಯಾವಾಗ ದಾಳಿಯಾಗಬಹುದೆಂದು ಹೆದರಿ ಕಾಲೇಜಿಗೆ ಹೋಗುವುದನ್ನು ಮರೆತ ಯುವಕರು ಸುಮ್ಮನೆ ಕುಳಿತಿದ್ದಾರೆ. ಅಷ್ಟೇ ಅಲ್ಲ ತಮ್ಮ ಮನೆಯಲ್ಲಿ ತಾವು ವಾಸಿಸಲು ನೂರು ಬಾರಿ ಯೋಚಿಸುವಂತೆ ಮಾಡಿದೆ. ಇದಕ್ಕೆಲ್ಲ ಕಾರಣ ೨೦೧೦ ರಲ್ಲಿ ಜಾಟ್ ಸಮುದಾಯ ದಲಿತ ಮನೆಯೊಂದರ ಮೇಲೆ ನಡೆಸಿದ ದಾಳಿ

ಮೇಲ್ಜಾತಿಯವರ ಹಲ್ಲೆಗೆ ಹೆದರಿದ ದಲಿತ ಮ್ಕಕಳು ಶಾಲೆಯತ್ತ ಮುಖಹಾಕುವುದಕ್ಕೂ ಹಿಂಜರಿಯುವಂತಾಗಿದೆ. ಹರಿಯಾಣದ ಹಿಸ್ಸಾರ್ ನಗರದ ಮಿರ್ಚಾಪುರ ಹಳ್ಳಿಯಲ್ಲಿ ಜಾಟ್ ಸಮುದಾಯದವರಿಂದ ಹಲ್ಲೆಗೊಳಗಾದ ದಲಿತ ಸಮುದಾಯದವರು ಮಿರ್ಚಾಪುರ ಹಳ್ಳಿಯಲ್ಲೇ ವಾಸಿಸಲು ಹೆದರುತ್ತಿದ್ದಾರೆ. ನಾಲ್ಕು ಗೋಡೆಯ ನಡುವೆ ಬದುಕುತ್ತಿದ್ದಾರೆ. ಇದಕ್ಕೆಲ್ಲ ಕಾರಣ ೨೦೧೦ ರಲ್ಲಿ ಜಾಟ್ ಸಮುದಾಯ ದಲಿತ ಮನೆಯೊಂದರ ಮೇಲೆ ನಡೆಸಿದ ದಾಳಿ.

ಈ ಭೀಕರ ನಡೆಯಿಂದ ತಳಸಮುದಾಯದವರ ಮನಸ್ಸು ನಲುಗಿದೆ. ಯಾವಾಗಲಾದರೂ ದಾಳಿಯಾಗಬಹುದೆಂದು ಹೆದರಿ ಕಾಲೇಜಿಗೆ ಹೋಗುವುದನ್ನು ಮರೆತ ಯುವಕರು ಸುಮ್ಮನೆ ಕುಳಿತಿದ್ದಾರೆ. ಕೇವಲ ಶಾಲೆ, ಕಾಲೇಜಿಗೆ ಹೋಗುವುದೊಂದೇ ಸಮಸ್ಯೆಯಾಗಿ ಉಳಿದಿಲ್ಲ, ತಮ್ಮ ಮನೆಯಲ್ಲಿ ತಾವು ವಾಸಿಸಲು ನೂರು ಬಾರಿ ಯೋಚಿಸುವಂತೆ ಮಾಡಿದೆ. ಈಗ ಈ ಘಟನೆ ಮುನ್ನೆಲೆಗೆ ಬರಲು ಕಾರಣ ಸಂಬಂಧಿಸಿದ ಆರೋಪಿತರನ್ನು ಬುಧವಾರ ಸೆ. ೫ರ ಒಳಗಾಗಿ ಬಂಧಿಸುವಂತೆ ದೆಹಲಿ ಪೊಲೀಸರಿಗೆ ಆದೇಶ ನೀಡಿರುವುದು.

ಈ ಅಮಾನುಷ ಘಟನೆಯ ಬಳಿಕ ಅಲ್ಲಿನ ಕೆಲ ದಲಿತ ಕುಟುಂಬದವರು ದೆಹಲಿಗೆ ವಲಸೆ ಹೋಗಿದ್ದರು. ತಮ್ಮ ಮನೆಗೆ ಬರಲು ಹೆದರುತ್ತಿರುವ ಅವರು ತಮ್ಮ ಮೂಲ ಊರಿಗೆ ಮರಳುವುದು ಕನಸಾಗಿ ಉಳಿಯುವುದೇ ಎಂಬ ಪ್ರಶ್ನೆಯನ್ನು ಎದುರು ನೋಡುತ್ತಿದ್ದಾರೆ. ಈ ಹೆದರಿಕೆಗೆ ಮುಖ್ಯ ಕಾರಣ ಎಂದರೆ ೨೧ ಜನ ಆರೋಪಿತರು ಇನ್ನು ಜಾಮೀನಿನ ಮೇಲೆ ಹೊರಗಿರುವುದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೧ರ ಅ.೨೪ ರಂದು ಹರಿಯಾಣದ ದೆಹಲಿ ನ್ಯಾಯಾಲಯ ೧೨ ಜನರಿಗೆ ಮಾತ್ರ ಶಿಕ್ಷೆ ವಿಧಿಸಿತ್ತು.

ದೆಹಲಿ ಹೈಕೋರ್ಟ್ ಉಳಿದ ಆರೋಪಿತರಿಗೆ ಸೆ. ೧ ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮಯಾವಕಾಶ ವಿಧಿಸಿತ್ತು, ಆದರೆ ಆರೋಪಿತರು ಹಾಜರಾಗದ ಕಾರಣ ಸೆ. ೫ರ ಒಳಗಾಗಿ ಅರೆಸ್ಟ್ ಮಾಡಲು ಆದೇಶಿಸಿದೆ. ಸಂತ್ರಸ್ಥರ ಪರ ವಕೀಲ ರಜತ್ ಕಲ್ಸನ್ ಅವರು ಹೇಳುವಂತೆ ಇಲ್ಲಿಯವರೆಗೂ ಒಬ್ಬ ಆರೋಪಿಯೂ ನ್ಯಾಯಾಲಯಕ್ಕೆ ಶರಣಾಗಿಲ್ಲ ಎಂದಿದ್ದಾರೆ. ಸ್ಥಳೀಯ ದಲಿತ ನಿವಾಸಿಯೊಬ್ಬರು ಹೇಳುವಂತೆ ಈವರೆಗೆ ಅವರು ಊರಿನಲ್ಲೇ ಓಡಾಡಿಕೊಂಡಿದ್ದರು, ಕಣ್ಣಿಗೆ ಕಾಣುತ್ತಿದ್ದರು, ಯಾವಾಗ ದೆಹಲಿ ನ್ಯಾಯಾಲಯ ಆದೇಶ ಹೊರಬಂತೋ ಅವತ್ತಿನಿಂದ ಆರೋಪಿತರು ಕಣ್ಣಿಗೆ ಕಾಣುತ್ತಿಲ್ಲ ಎಂದಿದ್ದಾರೆ

ಇದನ್ನೂ ಓದಿ : ದಲಿತ ಪದ ಬಳಕೆ ತಡೆಯುವ ಹುನ್ನಾರಕ್ಕೆ ಹೋರಾಟಗಾರ, ಚಿಂತಕರ ಪ್ರತಿಕ್ರಿಯೆ ಏನು?

ಘಟನೆಯ ಹಿನ್ನೆಲೆ

ಜಾಟ್ ಸಮುದಾಯದ ನೂರು ಮಂದಿ ಅಲ್ಲಿನ ಹತ್ತಾರು ದಲಿತ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದರು. ಒಂದು ಮನೆಯ ಅಂಗವಿಕಲ ಹುಡುಗಿ (೧೭) ಹಾಗೂ ಆಕೆಯ ತಂದೆ (೭೦)ಯನ್ನು ಸೇರಿಸಿ ಜೀವಂತ ದಹನ ಮಾಡಲಾಗಿತ್ತು. ಹಿಸಾರ್ ನಗರದ ೧೨೦ ದಲಿತ ಕುಟುಂಬಗಳು ಅಲ್ಲಿನ ದಲಿತ ನಾಯಕ ವೇದಪಾಲ್ ತನ್ವಾರ್ ಅವರ ಜಾಗದಲ್ಲೇ ವಾಸಿಸಲು ಸಹಾಯ ಮಾಡಿದ್ದರು.

ಅಗಸ್ಟ್ ೨೦೧೦; ಆರೋಪಿತರನ್ನು ಹರಿಯಾಣ ಪೊಲೀಸರು ಬಂಧಿಸಿದ್ದರು.

ಡಿಸೆಂಬರ್ ೮, ೨೦೧೦; ಪ್ರಕರಣವನ್ನು ಸುಪ್ರೀಂಕೋರ್ಟ್ ಹಿಸಾರ ಸ್ಥಳೀಯ ನ್ಯಾಯಾಲಯದಿಂದ ದೆಹಲಿ ಹೈಕೋರ್ಟ್‌ಗೆ ವರ್ಗಾವಣೆ.

ಜನವರಿ.೯ ೨೦೧೧; ಆರೋಪಿತ ೯೮ ಜನರನ್ನು ತಿಹಾರ್ ಜೈಜಿನಿಂದ ಹಿಸಾರ್ ಜೈಲಿಗೆ ವರ್ಗಾಯಿಸುವಂತೆ ಕೋರ್ಟ್ ಆದೇಶ. ಒಟ್ಟು ೧೦೩ ಆರೋಪಿತರಲ್ಲಿ ಮೂವರು ಅಪ್ರಾಪ್ತರು ಹಾಗೂ ಒಬ್ಬ ವ್ಯಕ್ತಿ ಜಾಮೀನಿನ ಮೇಲೆ ಹೊರಗಿದ್ದಾರೆ.

ಸೆಪ್ಟೆಂಬರ್ ೨೪, ೨೦೧೧; ನ್ಯಾಯಾಲಯ ೮೨ ಜನರನ್ನು ಖುಲಾಸೆಗೊಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More