ಸಹಭಾಗಿ ಪತ್ರಿಕೋದ್ಯಮ| ‘ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ‘ದಿ ಸ್ಟೇಟ್‌’ ಸುದ್ದಿ

ಸಿಎಂ ತಾಂತ್ರಿಕ ಸಲಹೆಗಾರರ ಸರಳತೆ ಕುರಿತು ‘ದಿ ಸ್ಟೇಟ್‌’ ಪ್ರಕಟಿಸಿದ ವರದಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಡೆದಿದೆ. ವರದಿಯನ್ನು ‘ದಿ ಇಂಡಿಯನ್ ಎಕ್ಸ್ ಪ್ರೆಸ್ ದೈನಿಕವೂ ಪ್ರಕಟಿಸುವ ಮೂಲಕ ಚರ್ಚೆಯನ್ನು ವಿಸ್ತರಿಸಿದೆ. ಧನಾತ್ಮಕ ಸುದ್ದಿಗಳತ್ತ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಯಾವುದೇ ಮಾಧ್ಯಮ ಮಾಡಿದರೂ ಅದನ್ನು ಮತ್ತೊಂದು ಮಾಧ್ಯಮ ಅನುಕರಿಸುವುದು ಉತ್ತಮ ಬೆಳವಣಿಗೆ

ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರ ತಾಂತ್ರಿಕ ಸಲಹೆಗಾರ ಎಂ ಕೆ ವೆಂಕಟರಾಮು ಅವರು ರಾಜ್ಯ ಸಚಿವರು ಪಡೆಯುತ್ತಿರುವ ವೇತನ, ಇತರೆ ಆರ್ಥಿಕ ಸೌಲಭ್ಯಗಳನ್ನು ವಿನಯವಾಗಿ ನಿರಾಕರಿಸಿದ್ದ ಸಂಗತಿ ಕುರಿತು ‘ದಿ ಸ್ಟೇಟ್’ ಪ್ರಕಟಿಸಿದ್ದ ವಿಶೇಷ ವರದಿ ಈಗ ಸಾರ್ವಜನಿಕ ವಲಯ ಮತ್ತು ಅಧಿಕಾರಿಗಳ ವಲಯದಲ್ಲಿ ಅಪಾರ ಮೆಚ್ಚುಗೆಗೆ ಕಾರಣವಾಗಿದೆ. ಸೆ.೩ರಂದು ‘ಕೇವಲ ೧೦೧ ರೂಪಾಯಿ ವೇತನ ಸಾಕೆಂದ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರು’ ಶೀರ್ಷಿಕೆಯಡಿಯಲ್ಲಿ ದಿ ಸ್ಟೇಟ್ ವರದಿ ಪ್ರಕಟಿಸಿತ್ತು.

ವೆಂಕಟರಾಮು ಅವರು ತಮಗೆ ಕೊಡಲ್ಪಡುವ ವೇತನ, ಇತರೆ ಭತ್ಯೆಗಳ ಮೊತ್ತವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮಾ ಮಾಡಲು ತಿಳಿಸಿದ್ದನ್ನು ಪತ್ರ ಸಮೇತ ಮೊದಲ ಬಾರಿಗೆ ‘ದಿ ಸ್ಟೇಟ್’ ಬಹಿರಂಗಗೊಳಿಸಿತ್ತಲ್ಲದೆ, ಇದೊಂದು ಉತ್ತಮ ಬೆಳವಣಿಗೆ ಎಂದೂ ವರದಿಯಲ್ಲಿ ಹೇಳಲಾಗಿತ್ತು.

ಇಂತದ್ದೊಂದು ಧನಾತ್ಮಕ ಸಂಗತಿ ಕುರಿತು ಆಂಗ್ಲ ದೈನಿಕ ‘ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ‘ ಕೂಡ ವಿಶೇಷ ವರದಿ ಪ್ರಕಟಿಸಿದೆ. ಈ ಮೂಲಕ ಸಹಭಾಗಿ ಪತ್ರಿಕೋದ್ಯಮವನ್ನು ಮುಂದುವರೆಸಿದಂತಾಗಿದೆ.

ತಾಂತ್ರಿಕ ಸಲಹೆಗಾರರಿಗೆ ರಾಜ್ಯ ಸಚಿವರ ಸ್ಥಾನಮಾನವನ್ನು ಒದಗಿಸಲಾಗಿದೆ. ವೇತನವೂ ಸೇರಿದಂತೆ ಇತರೆ ಭತ್ಯೆಗಳ ಮೊತ್ತವೇ ತಿಂಗಳಿಗೆ ೩ ಲಕ್ಷಕ್ಕೂ ಹೆಚ್ಚಿನದು. ಆದರೆ ಎಂ ಕೆ ವೆಂಕಟರಾಮು ಅವರು ತಮಗೆ ಲಭ್ಯವಾಗಿರುವ ರಾಜ್ಯ ಸಚಿವರಿಗೆ ಸಿಗುವ ವೇತನವೂ ಸೇರಿದಂತೆ ಇತರೆ ಎಲ್ಲಾ ಆರ್ಥಿಕ ಸೌಲಭ್ಯವನ್ನು ಪಡೆಯಲು ಗೌರವದಿಂದಲೇ ನಿರಾಕರಿಸಿದ್ದಾರೆ.

ಇದನ್ನೂ ಓದಿ : ಕೇವಲ ೧೦೧ ರುಪಾಯಿ ವೇತನ ಸಾಕೆಂದ ಮುಖ್ಯಮಂತ್ರಿ ತಾಂತ್ರಿಕ ಸಲಹೆಗಾರ!

“ನಾನು ಈ ಹಿಂದೆಯೇ ತಿಳಿಸಿರುವಂತೆ ನನಗೆ ಸಾಂಕೇತಿಕವಾಗಿ ರೂ.೧೦೧/-ಗಳನ್ನು ವೇತನ ರೂಪದಲ್ಲಿ ನೀಡಿ, ರಾಜ್ಯ ಸಚಿವರ ಸ್ಥಾನಮಾನದಿಂದ ಒದಗುವ ಮಿಕ್ಕ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಅಂದರೆ ವೇತನ, ಇಂಧನ ಭತ್ಯೆ, ಅತಿಥೇಯ ಭತ್ಯೆ, ಮನೆ ಬಾಡಿಗೆ ಭತ್ಯೆ ಇತ್ಯಾದಿಗಳನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಜಮೆ ಮಾಡುವಂತೆ ಮತ್ತೊಮ್ಮೆ ಕೋರುತ್ತೇನೆ. ಕಾರ್ಯಸ್ಥಾನದಿಂದ ಪ್ರವಾಸ ಮಾಡಿದ ಸಂದರ್ಭಗಳಲ್ಲಿ ಪ್ರವಾಸ ಭತ್ಯೆ ಮತ್ತು ದಿನಭತ್ಯೆಗಳನ್ನು ಮಾತ್ರ ಸ್ವೀಕರಿಸಲು ಸಮ್ಮತಿಸಿರುತ್ತೇನೆ,” ಎಂದು ವೆಂಕಟರಾಮು ಅವರು ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.

ಅಷ್ಟೇ ಅಲ್ಲ, ರಾಜ್ಯ ಸಚಿವರ ಸ್ಥಾನಮಾನಕ್ಕೆ ಲಭ್ಯವಾಗುವ ಎಲ್ಲಾ ಸವಲತ್ತುಗಳ ವಿವರಗಳನ್ನು ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆ(ಲೆಕ್ಕಪತ್ರ)ಶಾಖೆಗೆ ಒದಗಿಸಿ ಬಿಲ್‌ ನ್ನು ತಯಾರಿಸಿ ಪಾವತಿಸಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡಿದ ಮೊತ್ತದ ವಿವರಗಳನ್ನು ಹಿಂಬರಹದ ಮೂಲಕ ಕಾಲಕಾಲಕ್ಕೆ ಒದಗಿಸಬೇಕು ಎಂದು ಪತ್ರದಲ್ಲಿ ಕೋರಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More