ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು  

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ದಿನೇಶ್ ಗುಂಡೂ ರಾವ್ ಹುಬ್ಬಳ್ಳಿ ಪ್ರವಾಸ

ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಭಾನುವಾರ ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಹಾಗೂ ಚುನಾವಣಾ ಸಿದ್ಧತೆಗಳು ಹೇಗಿರಬೇಕು ಎಂಬುದರ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.

ಸನ್ನಡತೆ ಆಧಾರದ ಮೇಲೆ ರಾಜ್ಯದ ೭೯ ಕೈದಿಗಳ ಬಿಡುಗಡೆ

ರಾಜ್ಯದ ವಿವಿಧ ಜೈಲುಗಳಲ್ಲಿರುವ 79 ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಭಾನುವಾರ ಬಿಡುಗಡೆ ಮಾಡಲಾಗುತ್ತಿದೆ. ಬಿಡುಗಡೆ ಕಾರ್ಯಕ್ರಮವನ್ನು ಭಾನುವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಆಯೋಜಿಸಲಾಗಿದ್ದು ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್‌ ಭಾಗವಹಿಸಲಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ 28 ಕೈದಿಗಳು, ವಿಜಯಪುರದ 4, ಮೈಸೂರು 18, ಬಳ್ಳಾರಿ 5, ಬೆಳಗಾವಿ 9, ಕಲಬುರಗಿ 13 ಹಾಗೂ ಧಾರವಾಡ ಕಾರಾಗೃದಲ್ಲಿನ ಇಬ್ಬರು ಕೈದಿಗಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ.

ಗೋವಾದಲ್ಲಿ ಇಂದು ಗಡಿನಾಡು ಕಸಾಪ ಘಟಕಕ್ಕೆ ಚಾಲನೆ

ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಪಣಜಿಯಲ್ಲಿ ಕಸಾಪ ಗಡಿನಾಡು ಘಟಕಕ್ಕೆ ಚಾಲನೆ ನೀಡುತ್ತಿದೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತಿ ಪಾಟೀಲ್ ಪುಟ್ಟಪ್ಪ ವಹಿಸಿಕೊಳ್ಳಲಿದ್ದು ಕಸಾಪ ಅಧ್ಯಕ್ಷ ಮನು ಬಳಿಗಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಗೋವಾ ರಾಜ್ಯ ಗಡಿನಾಡು ಘಟಕದ ನಿಯೋಜಿತ ಅಧ್ಯಕ್ಷ ವಿಜಯ್ ಅನಂತ್ ಶೆಟ್ಟಿ ಭಾಗವಹಿಸಲಿದ್ದಾರೆ.

ಯುಎಸ್ ಓಪನ್‌ಗಾಗಿ ಜೊಕೊವಿಚ್, ಪೊಟ್ರೊ ಕಾದಾಟ

ಪ್ರತಿಷ್ಠಿತ ಅಮೆರಿಕ ಓಪನ್ ಟೆನಿಸ್ ಪ್ರಶಸ್ತಿಗಾಗಿ ಹದಿಮೂರು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ನೊವಾಕ್ ಜೊಕೊವಿಚ್, ಅರ್ಜೆಂಟೀನಾ ಆಟಗಾರ ೨೦೦೯ರ ಯುಎಸ್ ಓಪನ್ ಚಾಂಪಿಯನ್ ಡೆಲ್ ಪೊಟ್ರೊ ವಿರುದ್ಧ ಕಾದಾಡಲಿದ್ದಾರೆ. ನ್ಯೂಯಾರ್ಕ್‌ನ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಪೊಟ್ರೊ ಸಜ್ಜಾಗಿದ್ದಾರೆ. ಅರ್ಜೆಂಟೀನಾ ಅಪಾಯಕಾರಿಯಾಗಿದ್ದು, ಜೊಕೊವಿಚ್ ಈ ಪಂದ್ಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಟ್ರೊ ಮತ್ತೊಂದು ಯುಎಸ್ ಓಪನ್‌ಗಾಗಿ ಸೆಣಸುತ್ತಿದ್ದರೆ, ಜೊಕೊವಿಚ್ ಈ ಪ್ರಶಸ್ತಿಯನ್ನು ಗೆಲ್ಲುವುದರೊಂದಿಗೆ ಅಮೆರಿಕದ ಮಾಜಿ ಆಟಗಾರ ಪೀಟ್ ಸಾಂಪ್ರಾಸ್ (೧೪) ಗ್ರಾಂಡ್‌ಸ್ಲಾಮ್ ಸಾಧನೆಯನ್ನು ಸರಿಗಟ್ಟುವ ಗುರಿ ಹೊತ್ತಿದ್ದಾರೆ.

ಪಂದ್ಯ ಆರಂಭ: ಭಾರತೀಯ ಕಾಲಮಾನ ಇಂದು ಮಧ್ಯರಾತ್ರಿ ೧.೩೦ಕ್ಕೆ | ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್

ಹಿನ್ನಡೆ ಮೆಟ್ಟಿನಿಲ್ಲುವ ತವಕದಲ್ಲಿ ಭಾರತ ಪುಟಿದೆದ್ದೀತೆ?

ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣದ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಹಿನ್ನಡೆ ಭೀತಿಗೆ ಸಿಲುಕಿದ್ದು, ಪಂದ್ಯದ ಮೂರನೇ ದಿನವಾದ ಇಂದು ಪುಟಿದೇಳುವ ಗುರಿ ಹೊತ್ತಿದೆ. ೩೩೨ ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಹೋರಾಟ ಮುಗಿಸಿದ ಆತಿಥೇಯ ಇಂಗ್ಲೆಂಡ್, ಆನಂತರ ಬೌಲಿಂಗ್‌ನಲ್ಲೂ ಭಾರತವನ್ನು ಕಾಡಿದ ಫಲವಾಗಿ ಎರಡನೇ ದಿನಾಂತ್ಯಕ್ಕೆ ಭಾರತ ೫೧ ಓವರ್‌ಗಳಲ್ಲಿ ೧೭೪ ರನ್‌ಗಳಿಗೆ ೬ ವಿಕೆಟ್ ಗಳಿಸಿ ಸಂಕಷ್ಟದಲ್ಲಿದೆ. ಚೊಚ್ಚಲ ಪಂದ್ಯವನ್ನಾಡುತ್ತಿರುವ ಹನುಮ ವಿಹಾರಿ (೨೫) ಮತ್ತು ರವೀಂದ್ರ ಜಡೇಜಾ (೮) ಕ್ರೀಸ್‌ನಲ್ಲಿದ್ದು, ಈ ಇಬ್ಬರ ಮೇಲೆ ಎಲ್ಲರ ಚಿತ್ತ ಹರಿದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More