ಸಹಭಾಗಿ ಪತ್ರಿಕೋದ್ಯಮ | ನಾವು ಬರೆದಿದ್ದನ್ನು ಮುಂದುವರೆಸಿದ ದೈನಿಕಗಳು

ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯೊಂದರ ದುಂಡಾವರ್ತನೆಯಿಂದಾಗಿ ಮಹಿಳಾ ಐಎಎಸ್ ಅಧಿಕಾರಿ ಅನುಭವಿಸಿದ್ದ ಯಾತನೆ ಕುರಿತು ‘ದಿ ಸ್ಟೇಟ್’ ಪ್ರಕಟಿಸಿದ್ದ ವಿಶೇಷ ವರದಿ ಸಂಚಲನ ಮೂಡಿಸಿದೆ. ಕನ್ನಡ ಮತ್ತು ಇಂಗ್ಲೀಷ್ ದೈನಿಕಗಳೂ ದಿ ಸ್ಟೇಟ್ ನ ವರದಿಯನ್ನು ಮುಂದುವರೆಸಿವೆ

ನವಜಾತ ಶಿಶುವಿಗೆ ಚಿಕಿತ್ಸೆ ಮತ್ತು ಆರೈಕೆ ವಿಚಾರದಲ್ಲಿ ಬೆಂಗಳೂರು ನಗರದ ಖಾಸಗಿ ಆಸ್ಪತ್ರೆ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಯ ಗಂಭೀರ ಲೋಪದಿಂದ ಐಎಎಸ್‌ ಮಹಿಳಾ ಅಧಿಕಾರಿ ಪಲ್ಲವಿ ಅಕುರಾತಿ ಅವರು ಅನುಭವಿಸಿದ್ದ ಯಾತನೆ ಕುರಿತು ‘ದಿ ಸ್ಟೇಟ್’ ಪ್ರಕಟಿಸಿದ್ದ ವಿಶೇಷ ವರದಿಯನ್ನು ಪ್ರಜಾವಾಣಿ, ಟೈಮ್ಸ್ ಆಫ್ ಇಂಡಿಯಾ ಸೇರಿದಂತೆ ಹಲವು ದೈನಿಕಗಳೂ ಮುಂದುವರೆಸಿವೆ.

ಆಸ್ಪತ್ರೆಯಲ್ಲಿನ ಕಹಿ ಅನುಭವ ಮತ್ತು ನೋವಿನ ಕುರಿತು ಪಲ್ಲವಿ ಅಕುರಾತಿ ಅವರು ಬೆಂಗಳೂರು ನಗರ

ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ಸಲ್ಲಿಸಿದ್ದರು. ದೂರಿನ ಜಾಡು ಹಿಡಿದು ‘ದಿ ಸ್ಟೇಟ್‌’ ಮೊಟ್ಟ ಮೊದಲಿಗೆ ವಿಶೇಷ ವರದಿ ಪ್ರಕಟಿಸುತ್ತಿದ್ದಂತೆ ಸಾರ್ವಜನಿಕ ಮತ್ತು ಮಾಧ್ಯಮ ವಲಯದಲ್ಲಿ ಹೆಚ್ಚು ಚರ್ಚೆಗೆ ಕಾರಣವಾಯಿತು.

ಕನ್ನಡ ಪ್ರಭ ಪ್ರಕಟಿಸಿರುವ ವರದಿ

ಪ್ರಜಾವಾಣಿ, ಕನ್ನಡ ಪ್ರಭ, ಉದಯವಾಣಿ, ವಿಜಯವಾಣಿ ಮತ್ತು ಟೈಮ್ಸ್‌ ಆಫ್‌ ಇಂಡಿಯಾ ಸೇರಿದಂತೆ ಪ್ರಮುಖ ದೈನಿಕಗಳೂ ವರದಿ ಪ್ರಕಟಿಸುವ ಮೂಲಕ ಖಾಸಗಿ ಆಸ್ಪತ್ರೆಗಳ ಮುಖವಾಡವನ್ನು ಕಳಚುವ ನಿಟ್ಟಿನಲ್ಲಿ ‘ದಿ ಸ್ಟೇಟ್‌’ ಗೆ ಕೈ ಜೋಡಿಸಿವೆ. ಇದು ಸಹಭಾಗಿ ಪತ್ರಿಕೋದ್ಯಮವನ್ನು ವಿಸ್ತರಿಸಿದಂತಾಗಿದೆ.

ಉದಯವಾಣಿಯಲ್ಲಿ ಪ್ರಕಟಗೊಂಡಿರುವ ವರದಿ

ಪಲ್ಲವಿ ಅವರು ಜನ್ಮ ನೀಡಿದ ನವಜಾತ ಶಿಶುವಿಗೆ ಬೆಂಗಳೂರು ಇಂದಿರಾನಗರದಲ್ಲಿರುವ ‘ಲೈಫ್ ಫ್ಲಸ್‌’ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಅನಗತ್ಯ ಚಿಕಿತ್ಸೆ ನೀಡಿದ್ದರು. ವೈದ್ಯರು ಮತ್ತು ನರ್ಸ್ ಸೇರಿದಂತೆ ಇತರೆ ಸಿಬ್ಬಂದಿಯ ಕರ್ತವ್ಯ ಲೋಪ ಹಾಗೂ ಅವರ ಅನುಚಿತ ವರ್ತನೆಯಿಂದಾಗಿ ಆಸ್ಪತ್ರೆಯಲ್ಲಿ ಅನುಭವಿಸಿದ್ದ ಯಾತನೆ ಕುರಿತು ಐಎಎಸ್‌ ಮಹಿಳಾ ಅಧಿಕಾರಿ ಪಲ್ಲವಿ ಅಕುರಾತಿ ಅವರು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ಈ-ಮೈಲ್ ಮೂಲಕ ತೋಡಿಕೊಂಡಿದ್ದ ನೋವನ್ನು ‘ದಿ ಸ್ಟೇಟ್‌’ ವರದಿಯಲ್ಲಿ ವಿವರಿಸಿತ್ತು.

ಇದನ್ನೂ ಓದಿ : ಐಎಎಸ್‌ ಅಧಿಕಾರಿಯ ನವಜಾತ ಶಿಶುವಿಗೆ ಚಿತ್ರಹಿಂಸೆ; ಖಾಸಗಿ ನರ್ಸಿಂಗ್‌ ಹೋಂ ವಿರುದ್ಧ ದೂರು

“ಐಎಎಸ್‌ ಅಧಿಕಾರಿಗೆ ಇಂತಹ ಅನುಭವ ಅಗಿದೆ ಎಂದರೆ ಅನಕ್ಷರಸ್ಥ ಮಂದಿಗೆ ಇಂತಹ ಆಸ್ಪತ್ರೆಗಳಲ್ಲಿ ಎಷ್ಟರಮಟ್ಟಿಗೆ ಚಿಕಿತ್ಸೆ ದೊರೆಯಲಿದೆ?, ಹೀಗಾಗಿ ಆಸ್ಪತ್ರೆ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು,” ಎಂದು ದೂರಿನಲ್ಲಿ ಕೋರಿದ್ದರು.

ಟೈಮ್ಸ್ ಆಫ್‌ ಇಂಡಿಯಾ ಪ್ರಕಟಿಸಿರುವ ವರದಿ

ಲೈಫ್‌ ಫ್ಲಸ್‌ ಆಸ್ಪತ್ರೆಗೆ ದಾಖಲಾಗಿದ್ದ ಪಲ್ಲವಿ ಅಕುರಾತಿ ಅವರು ೨೦೧೮ ಜುಲೈ ೧೮ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅದಕ್ಕೂ ಮುನ್ನ ಅಂದರೆ ೩೯ ವಾರ ೬ ದಿನಗಳ ಗರ್ಭಾವಸ್ಥೆಯಲ್ಲಿ ತಪಾಸಣೆ ನಡೆಸಿದ್ದ ಡಾ ಭಾರ್ಗವಿ ಅವರು ಮಗುವಿನ ತಲೆ ಇನ್ನೂ ಸೂಕ್ತವಾದ ಜಾಗದಲ್ಲಿ ಇಲ್ಲವೆಂದು ಹೇಳಿದರಲ್ಲದೆ, ಭ್ರೂಣದ ಹೃದಯದ ಬಡಿತ ಮೇಲ್ವಿಚಾರಣೆ ಪರೀಕ್ಷೆ ಕೂಡ ನಡೆಸಿದ್ದರು. ಈ ಆಧಾರದ ಮೇಲೆ ಭ್ರೂಣದ ಹೃದಯ ಬಡಿತವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಅಲ್ಲದೆ, ಇದೇ ವೇಳೆಯಲ್ಲಿ ಪ್ರಸವ ವೇದನೆಯೂ ಆರಂಭಗೊಂಡಿರುತ್ತದೆ. ಈ ರೀತಿಯ ನೋವು ಅರಿವಿಗೆ ಬರುತ್ತಿಲ್ಲ ಎಂದು ಡಾ ಭಾರ್ಗವಿ ಅವರು ತಮಗೆ ತಿಳಿಸಿದ್ದರು ಎಂದು ಪಲ್ಲವಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ವಿಜಯವಾಣಿ ಪ್ರಕಟಿಸಿರುವ ವರದಿ

ಹೀಗಾಗಿ ಸಾಮಾನ್ಯ ಹೆರಿಗೆ ನಡೆಸುವುದು ಅಸಾಧ್ಯವೆಂದು ತಿಳಿಸಿದ್ದ ವೈದ್ಯರು, ಸಿಜೇರಿಯನ್ ಮಾಡುವುದೇ ಸುರಕ್ಷಿತವೆಂದು ಸೂಚಿಸಿದ್ದರು. “ವೈದ್ಯರ ಸಲಹೆ ಸೂಚನೆ ಮೇರೆಗೆ ಸಿಜೇರಿಯನ್ ಗೆ ಒಳಗಾಗಿದ್ದೆ. ಆದರೆ ಈ ಸಲಹೆ ನೀಡುವ ಮುನ್ನ ಆಸ್ಪತ್ರೆ ವೈದ್ಯರು ತಮ್ಮನ್ನು ಸ್ಕ್ಯಾನಿಂಗ್‌ ಗೆ ಮಾಡಲಿಲ್ಲವೇಕೆ?,” ಎಂದು ದೂರಿನಲ್ಲಿ ಅಚ್ಚರಿ ವ್ಯಕ್ತಪಡಿಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More