ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ೫ ಪ್ರಮುಖ ಸುದ್ದಿಗಳು  

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು   

ಕೇಂದ್ರ ತಂಡದಿಂದ ಅತಿವೃಷ್ಟಿಯ ಹಾನಿ ಪರಿಶೀಲನೆ ಇಂದಿನಿಂದ

ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಕೊಡಗು, ಹಾಸನ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ಉನ್ನತಾಧಿಕಾರಿಗಳ ತಂಡ ಭೇಟಿ ನೀಡಿ ನಷ್ಟ ಅಂದಾಜಿಸಲಿದೆ. ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್ ಮಲಿಕ್ ಮತ್ತು ಕೇಂದ್ರ ಹಣಕಾಸು ಇಲಾಖೆಯ ಉಪಕಾರ್ಯದರ್ಶಿ ಭತೇಂದ್ರ ಸಿಂಗ್ ನೇತೃತ್ವದ ಆರು ಸದಸ್ಯರ ತಂಡ ಇಂದಿನಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ- ಇಂದು ರೈಲು ತಡೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ವಿವಿಧ ರೈತ ಸಂಘಟನೆಗಳು ಇಂದು ರೈಲು ತಡೆ ಹಾಗೂ ಜಲಂಧರ್- ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲು ನಿರ್ಧರಿಸಿವೆ.  ಹಲವು ಬಾರಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಖಾಸಗಿ ಹಾಗೂ ಸಹಕಾರಿ ಸಕ್ಕರೆ ಕಾರ್ಖಾನೆಗಳು ಇದುವರೆಗೂ 600 ಕೋಟಿ ರುಪಾಯಿ ಪಾವತಿ ಮಾಡಲು ಬಾಕಿ ಉಳಿಸಿಕೊಂಡಿವೆ. ಹೀಗಾಗಿ ಮುಖೆರಿಯನ್ ಬಳಿ , ರೈಲು ತಡೆ ಮತ್ತು ಹೆದ್ದಾರಿ ತಡೆಯಲು ನಿರ್ಧರಿಸಿದ್ದು, ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ನಡೆಸುತ್ತೇವೆ ಎಂದು ದೊಬಾ ಸಂಘರ್ಷ ಸಮಿತಿಯ ಸದಸ್ಯರು ತಿಳಿಸಿದ್ದಾರೆ.

ಸ್ಯಾಫ್ ಫುಟ್ಬಾಲ್; ಇಂದು ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳ ಸೆಣಸಾಟ

ಪ್ರತಿಷ್ಠಿತ ಸ್ಯಾಫ್ ಫುಟ್ಬಾಲ್ ಪಂದ್ಯಾವಳಿಯ ಸೆಮಿಫೈನಲ್ ಸೆಣಸಾಟವು ಇಂದು ನಡೆಯಲಿದ್ದು, ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ಸೆಣಸಲಿವೆ. ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಮಾಲ್ಡೀವ್ಸ್ ಮತ್ತು ನೇಪಾಳ ಕಾದಾಡಲಿವೆ. ಢಾಕಾದ ಬಂಗಬಂಧು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯ ಇಂದು ಸಂಜೆ ೪.೦೦ರಿಂದ ಶುರುವಾಗಲಿದ್ದರೆ, ಭಾರತ ಮತ್ತು ಪಾಕ್ ನಡುವಣದ ಮಹತ್ವಪೂರ್ಣ ಪಂದ್ಯ ರಾತ್ರಿ ೭.೦೦ರಿಂದ ಆರಂಭವಾಗಲಿದೆ. ಡಿ ಡಿ ಸ್ಪೋರ್ಟ್ಸ್‌ನಲ್ಲಿ ನೇರಪ್ರಸಾರವಿದೆ. ೧೯೯೩ರಲ್ಲಿ ಮೊದಲ ಬಾರಿಗೆ ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಗೆಲುವು ಪಡೆದ ಭಾರತ, ೧೯೯೭, ೧೯೯೯, ೨೦೦೫, ೨೦೦೯, ೨೦೧೧ ಹಾಗೂ ೨೦೧೫ರಲ್ಲಿ ಒಟ್ಟು ಏಳು ಬಾರಿ ಚಾಂಪಿಯನ್ ಆಗಿದೆ.

ಭಾರತಕ್ಕೆ ಮಲ್ಯ ಹಸ್ತಾಂತರ ವಿಚಾರವಾಗಿ ಇಂದು ಲಂಡನ್‌ ಕೋರ್ಟ್‌ಗೆ

ವಿವಿಧ ರಾಷ್ಟ್ರೀಯ ಬ್ಯಾಂಕ್‌ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್‌ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ವಿಚಾರವಾಗಿ ಬುಧವಾರ ಲಂಡನ್‌ ಹೈಕೋರ್ಟ್‌ಗೆ ವಿಜಯ್ ಮಲ್ಯ ಹಾಜರಾಗುತ್ತಿದ್ದಾರೆ. ಮಲ್ಯ ಅವರನ್ನು ಇರಿಸಲಾಗುವ ಮುಂಬೈ ಕಾರಾಗೃಹದ ಕೋಣೆಯ ವಿಡಿಯೋವನ್ನು ನ್ಯಾಯಾಧೀಶೆ ಎಮ್ಮಾ ಅಬರ್ಟ್‌ನಾಡ್ ಅವರು ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಜೈಲಿನ ಸಂಪೂರ್ಣ ವಿಡಿಯೋ ಸಲ್ಲಿಸುವಂತೆ ವೆಸ್ಟ್ ಮಿನಿಸ್ಟರ್ ಕೋರ್ಟ್ ಕಳೆದ ಜುಲೈ ತಿಂಗಳಲ್ಲಿ ಭಾರತಕ್ಕೆ ಸೂಚಿಸಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More