ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 3 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು   

ವರದಕ್ಷಿಣೆ ಕಿರುಕುಳ ಅರ್ಜಿ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ‌ ವಿಚಾರಣೆ

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ - ವರದಕ್ಷಿಣೆ ಕಿರುಕುಳ ವಿರೋಧಿ ಕಾನೂನನ್ನು ದುರ್ಬಲಗೊಳಿಸುವ 2017ರ ಸುಪ್ರೀಂ ಕೋರ್ಟ್ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ಕುರಿತು ಸುಪ್ರೀಂ ಇಂದು ವಿಚಾರಣೆ ನಡೆಸಲಿದೆ. ಕಳೆದ ಏಪ್ರಿಲ್ ನಲ್ಲಿ ತೀರ್ಪು ಕಾಯ್ದಿರಿಸಲಾಗಿತ್ತು. ಕಳೆದ ವರ್ಷ ನ್ಯಾಯಮೂರ್ತಿಗಳಾದ ಎ ಕೆ ಗೋಯೆಲ್ ಮತ್ತು ಯು ಯು ಲಲಿತ್ ಅವರನ್ನೊಳಗೊಂಡ ನ್ಯಾಯಪೀಠ, ಆರೋಪಿಗಳನ್ನು ತಕ್ಷಣಕ್ಕೆ ಬಂಧಿಸುವುದನ್ನು ನಿಷೇಧಿಸಿ ಅದೇ ದಿನ ಅವರಿಗೆ ಜಾಮೀನು ನೀಡಬಹುದೆಂದು ತೀರ್ಪು ನೀಡಿತ್ತು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ರಚಿಸಿರುವ ಕೌಟುಂಬಿಕ ಕಲ್ಯಾಣ ಸಮಿತಿ ಹೇಳುವವರೆಗೆ ಯಾವುದೇ ಬಂಧನವಾಗಬಾರದು ಎಂದು ಇದೇ ನ್ಯಾಯಪೀಠ ಕಳೆದ ಬಾರಿ ತೀರ್ಪಿನಲ್ಲಿ ಹೇಳಿತ್ತು.

ಪಾಂಪೆಯೋ ಮತ್ತು ಅಜಿತ್ ದೊವಲ್ ಮಾತುಕತೆ

ಭಾರತ ಹಾಗೂ ಅಮೆರಿಕ ನಡುವೆ ನಡೆದ 2+2 ಉಭಯ ದೇಶಗಳ ಮಾತುಕತೆ ಯಶಸ್ಷಿಯಾದ ಬಳಿಕ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಲ್ ವಾಷಿಂಗ್ಟನ್‌ನಲ್ಲಿ ಶುಕ್ರವಾರ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕಲ್ ಪಾಂಪೆಯೋ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ. ದೆಹಲಿಯಲ್ಲಿ ನಡೆದ ಮಾತುಕತೆಯಲ್ಲಿ ಅಮೆರಿಕ ಹಾಗೂ ಭಾರತದ ನಡುವೆ ರಕ್ಷಣಾ ವ್ಯವಹಾರಗಳಿಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಡೇವಿಸ್ ಕಪ್ ಟೆನಿಸ್‌: ರಾಮ್‌ಕುಮಾರ್‌ಗೆ ಶುಭಾರಂಭದ ಗುರಿ

ಇಂದಿನಿಂದ ಶುರುವಾಗುತ್ತಿರುವ ಸರ್ಬಿಯಾ ವಿರುದ್ಧದ ಪ್ರತಿಷ್ಠಿತ ಡೇವಿಸ್ ಕಪ್ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಭಾರತದ ಆರಂಭಿಕ ಹೋರಾಟವನ್ನು ರಾಮ್‌ಕುಮಾರ್ ರಮಾನಾಥನ್ ಆರಂಭಿಸಲಿದ್ದಾರೆ. ಯೂಕಿ ಭಾಂಬ್ರಿ ಅಲಭ್ಯತೆಯ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಲಾಸ್ಲೊ ಜೆರೆ ವಿರುದ್ಧ ರಾಮ್‌ಕುಮಾರ್ ಕಾದಾಡಲಿದ್ದಾರೆ. ರಾಮ್‌ಕುಮಾರ್‌ಗಿಂತ (೧೩೫) ವಿಶ್ವ ಶ್ರೇಯಾಂಕದಲ್ಲಿ ಲಾಸ್ಲೊ (೮೬) ಮೇಲಿದ್ದರೂ, ಈಗಷ್ಟೇ ಅವರು ಡೇವಿಸ್ ಕಪ್ ಪಂದ್ಯವನ್ನು ಗೆಲ್ಲಬೇಕಿದೆ. ಆದರೆ, ರಾಮ್‌ಕುಮಾರ್ ಡೇವಿಸ್ ಕಪ್‌ ಪಂದ್ಯಾವಳಿಯಲ್ಲಿ ಹಲವಾರು ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಇನ್ನು, ದಿನದ ಮತ್ತೊಂದು ಸಿಂಗಲ್ಸ್‌ನಲ್ಲಿ ಎಡಗೈ ಆಟಗಾರ ಪ್ರಗ್ನೇಶ್ ಗುಣೇಶ್ವರನ್ ವಿಶ್ವದ ೫೬ನೇ ಶ್ರೇಯಾಂಕಿತ ಡುಸಾನ್ ಲಜೊವಿಕ್ ವಿರುದ್ಧ ಕಾದಾಡಲಿದ್ದು, ದಿನದ ಈ ಎರಡೂ ಸಿಂಗಲ್ಸ್ ಪಂದ್ಯಗಳು ಕುತೂಹಲ ಕೆರಳಿಸಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More