ನಿಷ್ಕ್ರಿಯ ಸಾಲ ಸಮಸ್ಯೆ; ದೇನಾ, ವಿಜಯ, ಬರೋಡ ಬ್ಯಾಂಕುಗಳ ವಿಲೀನಕ್ಕೆ ನಿರ್ಧಾರ

ಎಸ್‌ಬಿಐ ಜೊತೆಗೆ ಐದು ಸಹವರ್ತಿ ಬ್ಯಾಂಕುಗಳನ್ನು ವಿಲೀನಗೊಳಿಸಿದ ಕೇಂದ್ರ ಸರ್ಕಾರವು ಈಗ ನಿಷ್ಕ್ರಿಯ ಸಾಲದ ಪ್ರಮಾಣ ಅಪಾಯ ಮಟ್ಟದಲ್ಲಿರುವ ಮೂರು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಲು ಮುಂದಾಗಿದೆ. ನೌಕರರ ಹಿತಾಸಕ್ತಿ ಕಾಪಾಡುವುದಾಗಿಯೂ ಹೇಳಿದೆ

ನಿಷ್ಕ್ರಿಯ ಸಾಲದ ತೀವ್ರ ಸಮಸ್ಯೆ ಎದುರಿಸುತ್ತಿರುವ ದೇನಾ ಬ್ಯಂಕ್, ವಿಜಯಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡ- ಈ ಮೂರು ಬ್ಯಾಂಕುಗಳನ್ನು ವಿಲೀನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ವಿಲೀನೊತ್ತರದಲ್ಲಿ ಈ ಬ್ಯಾಂಕು ಮೂರನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಾಗಿ ಹೊರಹೊಮ್ಮಲಿದೆ. ಮೂರು ಬ್ಯಾಂಕುಗಳ ನೌಕರರ ಹಿತಾಸಕ್ತಿ ಕಾಪಾಡಲಾಗುತ್ತದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ.

ನಿಷ್ಕಿಯ ಸಾಲ ಕುರಿತ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಅರುಣ್ ಜೇಟ್ಲಿ ಅವರು ಮೂರು ಬ್ಯಾಂಕುಗಳ ವಿಲೀನ ಪ್ರಸ್ತಾಪ ಕುರಿತಂತೆ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರ ಬಜೆಟ್ ನಲ್ಲೇ ಬ್ಯಾಂಕುಗಳ ಕ್ರೋಢೀಕರಣ ಯೋಜನೆ ತಮ್ಮ ಕಾರ್ಯಸೂಚಿಯಲ್ಲಿದೆ ಎಂದು ಘೋಷಿಸಿತ್ತು. ಬ್ಯಾಂಕುಗಳನ್ನು ವಿಲೀನಗೊಳಿಸುವುದರ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಬ್ಯಾಂಕುಗಳ ವಿಲೀನದಿಂದ ದೇಶದ ಆರ್ಥಿಕತೆಗೆ ಹೆಚ್ಚಿನ ಲಾಭವಾಗಲಿದೆ. ಎಸ್ಬಿಐ ಮತ್ತು ಸಹವರ್ತಿ ಬ್ಯಾಂಕುಗಳ ವಿಲೀನಗೊಳಿಸಿರುವುದನ್ನು ಪ್ರಸ್ತಾಪಿಸಿದ ಸಚಿವ ಅರುಣ್ ಜೇಟ್ಲಿ, ಇದರಿಂದ ಸಣ್ಣ ಬ್ಯಾಂಕುಗಳ ನೌಕರರ ಸ್ಥಿತಿಗತಿ ಸುಧಾರಿಸಲಿದೆ, ಅವರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ವಿಲೀನಗೊಂಡ ನಂತರ ನೂತನ ಬ್ಯಾಂಕ್ ಗೆ ಯಾವ ಹೆರಿಸಡಲಾಗುತ್ತದೆ ಎಂಬುದನ್ನು ಬಹಿರಂಗ ಪಡಿಸದ ಅವರು, ಈ ವಿಲೀನ ಪ್ರಕ್ರಿಯೆಯಿಂದ ದೇನಾ ಬ್ಯಾಂಕ್ ನೌಕರರಿಗೆ ಗರಿಷ್ಠ ಪ್ರಮಾಣದಲ್ಲಿ ಅನುಕೂಲವಾಗಲಿದೆ ಎಂದರು.

ಇದನ್ನೂ ಓದಿ : ನಿಷ್ಕ್ರಿಯ ಸಾಲ ತ್ವರಿತ ಇತ್ಯರ್ಥಕ್ಕೆ ಮಾರ್ಗಸೂಚಿ ರೂಪಿಸಿದ ಆರ್‌ಬಿಐ

ನಿಷ್ಕ್ರಿಯ ಸಾಲದ ಸಮಸ್ಯೆಗೆ ಯುಪಿಎ ಆಡಳಿತವೇ ನೇರ ಕಾರಣ. ಕೆಲವು ವರ್ಷಗಳಿಂದ ಸಾರ್ವಜನಿಕ ವಲಯದ ಬ್ಯಾಂಕುಗಳು ತೀವ್ರ ಸಮಸ್ಯೆ ಎದುರಿಸುತ್ತಿವೆ. 2008- 2014 ರ ನಡುವೆ ತೀವ್ರ ಪ್ರಮಾಣದಲ್ಲಿ ಸಾಲ ವಿತರಿಸಲಾಗಿದೆ. ಸಾಲ ನೀಡಿಕೆ ಹೇಗಿತ್ತೆಂದರೆ ನಾಳೆಯೆಂಬುದು ಇಲ್ಲವೇನೋ ಎಂದುಕೊಂಡು ಭಾರಿ ಪ್ರಮಾಣದಲ್ಲಿ ನೀಡಲಾಗಿದೆ. ಆಗ ನೀಡಿದ ತೀವ್ರ ಪ್ರಮಾಣದ ಸಾಲವು ಈಗ ನಮ್ಮ ಆರ್ಥಿಕೆತಯನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದರು.

ಸಾಲ ಪುನರ್ನವೀಕರಣ ಮತ್ತು ಸತತ ಸಾಲ ನೀಡಿಕೆಯಿಂದಾಗಿಯೇ ನಿಷ್ಕ್ರಿಯ ಸಾಲದ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿ ಏರಿದೆ. 2015ರ ನಂತರ ಸಾಲದ ವಾಸ್ತವಿಕ ಚಿತ್ರಣವನ್ನು ಆರ್ಬಿಐ ಪರಾಮರ್ಶಿಸಿದ ನಂತರ, ಸರ್ಕಾರ ಮತ್ತು ಆರ್ಬಿಐ ಸಮಸ್ಯೆ ನಿವಾರಣೆಗೆ ಸೂಕ್ತ ಕ್ರಮಗಳನ್ನು ಜಾರಿಗೆ ತಂದಿವೆ. ತತ್ಪರಿಣಾಮ ಸಾಲ ನೀಡಿಕೆ ಪ್ರಮಾಣ ಕುಸಿದಿದ್ದು, ಖಾಸಗಿ ವಲಯದ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬಹುತೇಕ ಬ್ಯಾಂಕುಗಳು ದುರ್ಬಲ ಸ್ಥಿತಿಯಲ್ಲಿದ್ದವು ಎಂದು ಜೇಟ್ಲಿ ಹೇಳಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More