‘ಸ್ವಚ್ಚತಾ ಹೀ ಸೇವಾ’ ಅಭಿಯಾನದಿಂದ ಹಸುಗಳ ಸಾವು; ಗೋ ಪ್ರೀತಿ ಮರೆತರೇ ಮೋದಿ!

ರಾಜ್‌ಘರ್ ಜಿಲ್ಲೆಯ ಪಿಪ್ಲಿಯಾ ಕುಲ್ಮಿ ಗ್ರಾಮಕ್ಕೆ ಸ್ವಚ್ಚತಾ ಹೀ ಸೇವಾ ಅಭಿಯಾನ ಕಾರ್ಯಕ್ರಮಕ್ಕೆಂದೇ ಅಲ್ಲಿದ್ದ ಗೋಶಾಲೆಯ ೪೫೦ ದನ ಕರುಗಳನ್ನು ಹೀನಾಯವಾಗಿ ಸ್ಥಳಾಂತರಿಸಲಾಗಿದ್ದು ಎಂಟು ದನಗಳ ಸಾವಿಗೆ ಕಾರಣವಾಗಿದೆ

ಪ್ರಧಾನಿ ಮೋದಿಯವರು ಜಾರಿಗೊಳಿಸುತ್ತಿರುವ ಸ್ವಚ್ಛತಾ ಹೀ ಸೇವಾ ಯೋಜನೆಯ ಇನ್ನೊಂದು ಮುಖ ಬಯಲಾಗಿದೆ. ಸೆ. ೧೫ ರಂದು ರಾಜ್‌ಘರ್ ಜಿಲ್ಲೆಯ ಪಿಪ್ಲಿಯಾ ಕುಲ್ಮಿ ಗ್ರಾಮಕ್ಕೆ ಸ್ವಚ್ಚತಾ ಹೀ ಸೇವಾ ಅಭಿಯಾನ ಕಾರ್ಯಕ್ರಮಕ್ಕೆಂದೇ ಅಲ್ಲಿದ್ದ ಗೋಶಾಲೆಯ ೪೫೦ ದನ ಕರುಗಳನ್ನು ಹೀನಾಯವಾಗಿ ಸ್ಥಳಾಂತರಿಸಲಾಗಿದ್ದು ಎಂಟು ದನಗಳ ಸಾವಿಗೆ ಕಾರಣವಾಗಿದೆ.

ನವೀನ್ ಗಾಯತ್ರಿ ಗೋಶಾಲೆಯ ಅನಾರೋಗ್ಯದಿಂದ ಬಳಲುತ್ತಿದ್ದ ದನಗಳನ್ನು ಸೇರಿಸಿ ಎಲ್ಲ ದನಗಳನ್ನು ಮೋದಿ ಕಾರ್ಯಕ್ರಮದ ನೇರ ಪ್ರಸಾರದ ಟಿವಿ ಪರದೆಗಳನ್ನು ಹಾಕಲು ತೆರವು ಮಾಡಲಾಗಿತ್ತು ಆದರೆ ಇಂಟರ್ನೆಟ್ ಸಮಸ್ಯೆಯಿಂದ ಕೇವಲ ಎರಡು ಮೂರು ನಿಮಿಷದ ವರೆಗೆ ಮಾತ್ರ ಪ್ರಸಾರ ಮಾಡಲು ಸಾಧ್ಯವಾಯಿತು ಎಂದು ಜಿಲ್ಲಾಡಳಿತ ವಿಷಯವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದೆ.

ಜೈವಿಕ ವಿದ್ಯುತ್ ಹಾಗೂ ಜೈವಿಕ ಇಂಧನ ಬಳಕೆಯ ಮಹತ್ವವನ್ನು ಜನರಿಗೆ ತಿಳಿ ಹೇಳುವುದು ಸ್ವಚ್ಛತಾ ಹೀ ಸೇವಾ ಯೋಜನೆಯ ಉದ್ದೇಶವಾಗಿತ್ತು. ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ಉದ್ದೇಶಿತ ೧೭ ಗ್ರಾಮಗಳನ್ನು ಮಾತ್ರ ಆಯ್ದುಕೊಳ್ಳಲಾಗಿದ್ದು ಗೋಶಾಲೆಯಲ್ಲಿ ಐದರಿಂದ ಆರು ದನಗಳನ್ನು ಮಾತ್ರ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದ ಭಾಗವಾಗಿ ಪ್ರದರ್ಶನಕ್ಕಿಡಲು ಅನುಮತಿ ನೀಡಲಾಗಿತ್ತು.

ಇದನ್ನೂ ಓದಿ : ಗೋ ಹಿಂಸಾಚಾರ ಹೆಚ್ಚಿದಂತೆಲ್ಲ ದೇಶದ ಚರ್ಮ ರಫ್ತು ಉದ್ಯಮದಲ್ಲಿ ಕುಸಿತ

ಮೋದಿಯವರ ಗೋಬರ್ಧನ್ ಯೋಜನೆಯಂತೆ ಅತೀ ಹೆಚ್ಚು ಸಗಣಿಯನ್ನು ಪಡೆದು ಜೈವಿಕ ಅನಿಲವನ್ನು ಉತ್ಪಾದಿಸಲು ಮಧ್ಯಪ್ರದೇಶದಿಂದ ಇರುವ ಒಂದೇ ಒಂದು ಗೋಶಾಲೆ ಇದಾಗಿದೆ. ಹಾಗಾಗಿ ಮೋದಿಯವರು ಕಾರ್ಯಕ್ರಮ್ಕಕೆ ಬರುವ ಒಂದು ವಾರ ಮುಂಚೆಯೇ ದನಗಳನ್ನು ಬೇರೆಡೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರಿಸಿದ ನಂತರ ಅಲ್ಲಿನ ದನಗಳಿಗೆ ಸರಿಯಾದ ಆಹಾರ ಹಾಗೂ ನೀರು ನೀಡದೇ ಹಸಿವಿನಿಂದ ಕೂಡಿಡಲಾಗಿತ್ತು ಎಂದು ಆರೋಪಿಸಲಾಗಿದೆ.

"ಒಂದು ವಾರದಿಂದ, ಹಸುಗಳನ್ನು ರೈತಮಂಡಿಯೊಳಗೆ ಲಾಕ್ ಮಾಡಲಾಗಿದೆ, ಅಲ್ಲಿ ಅವುಗಳಿಗೆ ಸರಿಯಾದ ಆಹಾರ, ನೀರನ್ನು ನೀಡಲಾಗದೇ ಎಂಟು ಹಸುಗಳ ಮರಣಕ್ಕೆ ಕಾರಣವಾಯಿತು ಎಂದು ಅಲ್ಲಿನ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ಯಾಮ್ ತೇಜರಿ ಹೇಳಿದ್ದಾರೆ. "ಹಸುವಿನ ಶೆಡ್ ಮಾಲೀಕರು ಮತ್ತು ಜಿಲ್ಲಾಡಳಿತ ಪ್ರಧಾನಿಯವರ ಕಾರ್ಯಕ್ರಮ ತಯಾರಿಯಲ್ಲಿ ಮಗ್ನರಾಗಿದ್ದರೇ ವಿನಃ ಹಸುಗಳನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದಿದ್ದಾರೆ.

“ಮಹಾತ್ಮ ಗಾಂಧಿಜೀಯವರ ಸ್ವಚ್ಛ ಭಾರತ ಕನಸನ್ನು ನನಸು ಮಾಡಲು ದೇಶದ ಜನರು ತಮ್ಮನ್ನು ತಾವು ಸ್ವಚ್ಛತೆಗೆ ಸಮರ್ಪಿಸಿಕೊಳ್ಳಬೇಕು, ಎಂದು ಪ್ರಧಾನಿ ಮೋದಿಯವರ ಸ್ವಚ್ಛತಾ ಹಿ ಸೇವಾ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಸ್ವಚ್ಛತಾ ಅಭಿಯಾನವು ಅಕ್ಟೋಬರ್ 2ರ ಗಾಂಧಿ ಜಯಂತಿವರೆಗೂ ನಡೆಯಲಿದೆ. ಪ್ರಧಾನಿ ಮೋದಿ ಕಳೆದ ಶನಿವಾರ (ಸೆ ೧೫) ದೆಹಲಿಯಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ಕಸ ಗುಡಿಸುವ ಮೂಲಕ ಚಾಲನೆ ನೀಡಿದ್ದಾರೆ. ಈ ಬೆಳವಣಿಗೆಯನ್ನು ಕಂಡು ಕಾಂಗ್ರೆಸ್ ಹಿರಿಯ ನಾಯಕ ಕಮಲ್‌ನಾಥ್ ಇದೇನಾ ಬಿಜೆಪಿ ಪಕ್ಷದ ಗೋ ಪ್ರೀತಿ? ಎಂದು ಪ್ರಶ್ನಿಸಿ ತಮ್ಮ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More