ಸಂಕಲನ | ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ವರದಿ-ವಿಶ್ಲೇಷಣೆಗಳು

ಯುದ್ಧ ವಿಮಾನ ಖರೀದಿಗಾಗಿ ನಡೆದ ರಫೇಲ್‌ ಒಪ್ಪಂದ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಕುರಿತು ದಿ ಸ್ಟೇಟ್‌ ಪ್ರಕಟಿಸಿದ ವರದಿ ಮತ್ತು ವಿಶ್ಲೇಷಣೆಗಳು ಇಲ್ಲಿವೆ

“ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಆಯ್ದುಕೊಳ್ಳದೆ ಬೇರೆ ದಾರಿ ಇರಲಿಲ್ಲ. ಭಾರತ ಸರ್ಕಾರವು ಅದೇ ಕಂಪನಿಯನ್ನು ಆಯ್ದುಕೊಳ್ಳುವಂತೆ ಸೂಚಿಸಿತ್ತು,” ಎಂದು ಫ್ರಾನ್ಸ್ ಮಾಜಿ ಅಧ್ಯಕ್ಷ ಹೊಲಾಂದ್ ಆಡಿರುವ ಮಾತು ಸಂಚಲನ ಸೃಷ್ಟಿಸಿದೆ. ಪ್ರತಿಪಕ್ಷಗಳು ಮಾಡುತ್ತಿದ್ದ ಆರೋಪಕ್ಕೆ ಇದು ಆನೆಬಲ ತಂದಿದೆ

ಸುಮಾರು ೫೯ ಸಾವಿರ ಕೋಟಿ ರೂ. ಮೊತ್ತದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ವಿಷಯದಲ್ಲಿ ವ್ಯಕ್ತವಾದ ಗಂಭೀರ ಅನುಮಾನಗಳಿಗೆ ಈವರೆಗೆ ಭಾರತ ಸರ್ಕಾರ ಉತ್ತರ ನೀಡಿಲ್ಲ. ಭಾರತೀಯ ಮುಖ್ಯವಾಹಿನಿ ಮಾಧ್ಯಮ ಆ ಬಗ್ಗೆ ಮುಗುಮ್ಮಾಗಿದೆ. ಇಂತಹ ಜಾಣಕುರುಡು ಹೊತ್ತಲ್ಲಿ, ಫ್ರಾನ್ಸ್‌ನ ಮಾಧ್ಯಮಗಳಲ್ಲಿ ವಿವಾದಿತ ಒಪ್ಪಂದ ಕುರಿತ ಸುದ್ದಿಗಳು ಸದ್ದು ಮಾಡತೊಡಗಿವೆ

ರಫೇಲ್‌ ಯುದ್ಧ ವಿಮಾನ ಖರೀದಿ ಹಗರಣದಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂದು ಕೇಂದ್ರದ ಮಾಜಿ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಮತ್ತೆ ಆರೋಪಿಸಿದ್ದಾರೆ

ಬೀದರ್‌ನಲ್ಲಿ ಸೋಮವಾರ ನಡೆದ ಜನಧ್ವನಿ ರ‍್ಯಾಲಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ, ರಫೇಲ್‌ ಹಗರಣ ಕುರಿತು ಸಂಸತ್‌ನಲ್ಲಿ ತುಟಿಬಿಚ್ಚದ ಪ್ರಧಾನಿಯನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುವ ಮೂಲಕ ಈ ವಿಷಯವನ್ನು ಚುನಾವಣಾ ಅಸ್ತ್ರವನ್ನಾಗಿಸಿಕೊಳ್ಳುವ ಸೂಚನೆ ನೀಡಿದರು

ಬೋಫೋರ್ಸ್ ಹಗರಣವನ್ನು ಬಯಲಿಗೆಳೆದ ಪತ್ರಕರ್ತ ಅರುಣ್ ಶೌರಿ ಮತ್ತು ವಾಜಪೇಯಿ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ನಾಯಕ ಯಶವಂತ ಸಿನ್ಹಾ ರಾಫೇಲ್ ಡೀಲ್ ವಿಷಯದಲ್ಲಿ ಸರ್ಕಾರ ಮತ್ತು ಪ್ರಧಾನಿ ವಿರುದ್ಧ ಮಾಡಿದ ಆರೋಪಗಳು ಮಾಧ್ಯಮಗಳಿಗೆ ಆದ್ಯತೆ ಆಗಲಿಲ್ಲವೇಕೆ?

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ. ಇದರ ಸತ್ಯಾಸತ್ಯತೆ ತಿಳಿಯಲು ಸಿಎಜಿ ತನಿಖೆ ನಡೆಸಿ, ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು ಎಂದು ಮಾಜಿ ಸಚಿವರಾದ ಯಶವಂತ್‌ ಸಿನ್ಹಾ, ಅರುಣ್ ಶೌರಿ ಆಗ್ರಹಿಸಿದ್ದಾರೆ

ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಣಕಾಸು ಅವ್ಯವಹಾರ, ಸರ್ಕಾರ ಮತ್ತು ಪ್ರಧಾನಿ ಮೋದಿಯವರ ವರ್ಚಸ್ಸುಗಳಷ್ಟೇ ಅಲ್ಲದೆ, ದೇಶದ ರಕ್ಷಣೆ ಮತ್ತು ಸುರಕ್ಷತೆಯಂತಹ ಸೂಕ್ಷ್ಮ ವಿಷಯ ಕೂಡ ಸಾರ್ವಜನಿಕ ಅಪನಂಬಿಕೆಗೆ ಈಡಾಗಿದೆ. ಹಾಗಾಗಿ, ಇದರ ಪರಿಹಾರಕ್ಕೆ ಉಳಿದಿರುವುದು ಒಂದೇ ಮಾರ್ಗ

60 ಸಾವಿರ ಕೋಟಿ ಮೊತ್ತದ ರಾಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ವಿಷಯದಲ್ಲಿ ನಿಜಕ್ಕೂ ನಡೆದಿರುವುದೇನು? ದರ ಮತ್ತು ಸ್ಥಳೀಯ ಹೂಡಿಕೆ ವಿಷಯದಲ್ಲಿ ಪ್ರತಿಪಕ್ಷಗಳು ಎತ್ತಿರುವ ಪ್ರಶ್ನೆಗಳಿಗೆ ನೇರ ಉತ್ತರ ಕೊಡುವ ಬದಲಿಗೆ ಮೋದಿ ಸರ್ಕಾರ ದೇಶನಿಷ್ಠೆಯ ಗುರಾಣಿ ಹಿಡಿಯುತ್ತಿರುವುದು ಏಕೆ?

ರಾಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಟ್ವಿಟರ್‌ನಲ್ಲಿ ಪರ-ವಿರೋಧ ಚರ್ಚೆಗಳು ತುಂಬಿ ಹೋಗಿವೆ. ಈ ವಿಷಯದಲ್ಲಿ ಪ್ರಧಾನಿಯವರ ಮೌನಕ್ಕೆ ಟ್ವೀಟಿಗರಲ್ಲಿ ಸೋಜಿಗ ವ್ಯಕ್ತವಾಗಿದೆ

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರ ರಾಜಕಾರಣದ ದಿಕ್ಕು-ದಿಸೆ ಬದಲಿಸಬಹುದಾದ ರಫೇಲ್‌ ಹಗರಣದಲ್ಲಿ ಬಿಜೆಪಿಯನ್ನು ಸಿಲುಕಿಸಲು ಕಾಂಗ್ರೆಸ್‌ ತಯಾರಿ ಆರಂಭಿಸಿದೆ. ಇದಕ್ಕಾಗಿ ಜೈಪಾಲ್ ರೆಡ್ಡಿ ನೇತೃತ್ವದಲ್ಲಿ ಆರು ಸದಸ್ಯರ ಸಮಿತಿಯನ್ನು ಕಾಂಗ್ರೆಸ್‌ ರಚಿಸಿದೆ

ಲಾಕ್ ವ್ಯವಸ್ಥೆಯನ್ನು ತಯಾರಿಸಲು ಮಾಡಿಕೊಂಡ ಒಪ್ಪಂದವೊಂದಕ್ಕೆ ರಫೇಲ್ ಒಪ್ಪಂದವನ್ನು ಹೋಲಿಸಿ ವಿವರಿಸಿದ ಪಲ್ಲವಿ ಜೋಶಿ ಈಗ ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ರಫೇಲ್ ಒಪ್ಪಂದವನ್ನು ಸರಳವಾಗಿ ವಿವರಿಸುವ ನೆಪದಲ್ಲಿ ಪಲ್ಲವಿ ಸುಳ್ಳು ಮಾಹಿತಿ ನೀಡಿರುವ ಆರೋಪ ಕೇಳಿಬಂದಿದೆ

ರಫೇಲ್‌ ಒಪ್ಪಂದ ವಿಚಾರದಲ್ಲಿ ಪ್ರಧಾನಿ ಕುಮ್ಮಕ್ಕಿನಿಂದಾಗಿ ಸಚಿವೆ ನಿರ್ಮಲಾ ಸೀತಾರಾಮನ್‌ ಸದನಕ್ಕೆ ಸುಳ್ಳು ಹೇಳಿದ್ದಾರೆ ಎಂದು ರಾಹುಲ್‌ ಸಂಸತ್ತಿನಲ್ಲಿ ಹೇಳಿದ್ದರು. ಆದರೆ, ರಾಹುಲ್‌ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಕ್ಕುಚ್ಯುತಿ ನಿರ್ಣಯ ಮಂಡಿಸಲು ಮುಂದಾಗಿದೆ

ಮುಂಬರುವ ಲೋಕಸಭಾ ಚುನಾವಣೆಗೆ ರಫೇಲ್ ಡೀಲನ್ನೇ ಮೋದಿ ಸರ್ಕಾರದ ವಿರುದ್ಧ ದಾಳಿ ಮಾಡುವುದಕ್ಕೆ ಅಸ್ತ್ರವನ್ನಾಗಿ ಕಾಂಗ್ರೆಸ್‌ ಬಳಸಿಕೊಳ್ಳುವ ಸಿದ್ಧತೆಯಲ್ಲಿ ಇದ್ದಂತೆ ಕಾಣಿಸುತ್ತಿದೆ. ಈ ಕುರಿತು ‘ದಿ ವೈರ್‌’ ಜಾಲತಾಣಕ್ಕೆ ಸ್ವಾತಿ ಚತುರ್ವೇದಿ ಬರೆದ ಲೇಖನದ ಭಾವಾನುವಾದ ಇಲ್ಲಿದೆ

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More