ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೫ ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು  

ಇಂದು ಒಡಿಸ್ಸಾ ಮಹಿಳಾ ಮೋರ್ಚಾ ಸಭೆಯಲ್ಲಿ ಶಾ

ಮುಂಬರುವ ಒಡಿಸ್ಸಾ ವಿಧಾನಸಭೆ ಚುನಾವಣೆ ಪ್ರಯುಕ್ತ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇಂದು ಭುವನೇಶ್ವರದ ಪುರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಸಭೆ ನಡೆಸಲಿದ್ದಾರೆ. "ಶಾ ಅವರು ಔಪಚಾರಿಕವಾಗಿ ಕಾರ್ಯಕ್ರಮ ಉದ್ಘಾಟಿಸಿ, ಮಹಿಳಾ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ" ಎಂದು ಒಡಿಸ್ಸಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪಾರ್ವತಿ ಫರಿದಾ ತಿಳಿಸಿದ್ದಾರೆ.

ಪರಿಷತ್ ಉಪಚುನಾವಣೆ; ಅಖೈರಾಗದ ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ವಿಧಾನಸಭೆಯಿಂದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಅಕ್ಡೋಬರ್ ೪ರಂದು ಉಪಚುನಾವಣೆ ನಿಗದಿಯಾಗಿದ್ದು, ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದೆ. ಕಾಂಗ್ರೆಸ್ ನಜೀರ್ ಅಹ್ಮದ್ ಹಾಗೂ ಎಂ ಸಿ ವೇಣುಗೋಪಾಲ್ ಹೆಸರು ಘೋಷಿಸಿದೆ. ಜೆಡಿಎಸ್ಗೆ ದೊರೆತಿರುವ ಒಂದು ಸ್ಥಾನಕ್ಕೆ ಕೊನೆಯ ಕ್ಷಣದಲ್ಲಿ ಅಭ್ಯರ್ಥಿ ಘೋಷಿಸುವ ಸಾಧ್ಯತೆ ಇದೆ. ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಬಿಜೆಪಿಯು ಅಂತಿಮ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆ ಇದೆ. ಸಂಖ್ಯಾಬಲ ಸಮ್ಮಿಶ್ರ ಸರ್ಕಾರದ ಪರವಾಗಿದೆ. ಬಿಜೆಪಿ ಮೈತ್ರಿಕೂಟದ ಒಡಕಿನ ಲಾಭವನ್ನು ಗೆಲುವಿಗೆ ಆಶ್ರಯಿಸಿದೆ

ಸರಣಿ ಗೆಲುವಿನ ಮೇಲೆ ಭಾರತ ವನಿತಾ ತಂಡದ ಕಣ್ಣು

ಒಂದರ ಹಿಂದೊಂದರಂತೆ ಎರಡು ಪಂದ್ಯಗಳನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ಭಾರತ ಮಹಿಳಾ ತಂಡ ಆತಿಥೇಯ ಶ್ರೀಲಂಕಾ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿ ಜಯಿಸುವ ಕಾತರದಲ್ಲಿದೆ. ಐದು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 13 ರನ್‌ಗಳಿಂದ ಗೆದ್ದಿತ್ತು. ಎರಡನೇ ಪಂದ್ಯ ಮಳೆಯಿಂದಾಗಿ ನಡೆಯಲಿಲ್ಲ. ಶನಿವಾರ ನಡೆದಿದ್ದ ಮೂರನೇ ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್ ಅವರ ಸ್ಫೋಟಕ ಅರ್ಧಶತಕದ ಬಲದಿಂದ ಭಾರತ ಐದು ವಿಕೆಟ್‌ಗಳಿಂದ ಗೆದ್ದಿತ್ತು.ಸರಣಿಯಾದ್ಯಂತ ಆಕರ್ಷಕ ಪ್ರದರ್ಶನ ನೀಡುತ್ತಿರುವ ಭಾರತ ವನಿತಾ ತಂಡವನ್ನು ಕಟ್ಟಿಹಾಕಿ ಸರಣಿ ಜೀವಂತವಾಗಿಡಲು ಶ್ರೀಲಂಕಾ ತಂಡ ಪಣ ತೊಟ್ಟಿದೆ.

ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುವ ಛಲದಲ್ಲಿ ಕರ್ನಾಟಕ

ತವರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಆರಂಭದಲ್ಲಿಯೇ ಆಘಾತ ಅನುಭವಿಸಿರುವ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುವ ಛಲ ತೊಟ್ಟಿದೆ. ಆರ್. ವಿನಯ್ ಕುಮಾರ್ ಬಳಗ ಇಂದು ರಾಜಾನುಕುಂಟೆಯ ಜಸ್ಟ್‌ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಗೋವಾ ಎದುರಿನ ಪಂದ್ಯದಲ್ಲಿ ಜಯಗಳಿಸುವ ಮೂಲಕ ಜಯದ ಹಳಿಗೆ ಮರಳುವ ಯೋಜನೆ ಹಾಕಿಕೊಂಡಿದೆ. ಅಮೋಘ ದೇಸಾಯಿ ನಾಯಕತ್ವದ ಗೋವಾ ತಂಡವು ಎಲೀಟ್ 'ಎ’ ಗುಂಪಿನಲ್ಲಿ ಮೂರು ಪಂದ್ಯಗಳನ್ನು ಆಡಿದ್ದು, ರೈಲ್ವೆ ತಂಡದ ಎದುರು ಮಾತ್ರ ಜಯ ಸಾಧಿಸಿತ್ತು.

ಸಿಕ್ಕಿಂನ ಮೊದಲ ವಿಮಾನ ನಿಲ್ದಾಣಕ್ಕೆ ಇಂದು ಮೋದಿ ಚಾಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಸಿಕ್ಕಿಂನ ಮೊದಲ ವಿಮಾನ ನಿಲ್ದಾಣಕ್ಕೆ ಇಂದು (ಸೆ.24) ಚಾಲನೆ ನೀಡಲಿದ್ದಾರೆ. "ಇದು ಈಶಾನ್ಯ ಭಾರತಕ್ಕೆ ಅತ್ಯಂತ ಅವಿಸ್ಮರಣೀಯ ಹಾಗೂ ಐತಿಹಾಸಿಕ ಕ್ಷಣ. ಈ ಕ್ಷಣವನ್ನು ಇಡೀ ದೇಶವೇ ಸಂಭ್ರಮಿಸಲಿದೆ ಎಂದು ಈಶಾನ್ಯ ಭಾರತ ಅಭಿವೃದ್ಧಿ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ತಿಳಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More