ರಿಲಯನ್ಸ್ ಇಂಡಸ್ಟ್ರೀಸ್ ಮುಖೇಶ್ ಅಂಬಾನಿ ದಿನದ ಗಳಿಕೆ 300 ಕೋಟಿ ರುಪಾಯಿ!

ದೇಶದ ಅತಿ ದೊಡ್ಡ ಶ್ರೀಮಂತರಾಗಿರುವ ಮುಖೇಶ್ ಅವರ ದಿನದ ಗಳಿಕೆ 300 ಕೋಟಿ ರುಪಾಯಿಗಳು ಎಂದು ಬರ್ಕ್ಲೇ ಹುರನ್ ಇಂಡಿಯಾ ರಿಚ್ ಲಿಸ್ಟ್ 2018 ವರದಿ ತಿಳಿಸಿದೆ. ಅವರ ಒಟ್ಟು ಸಂಪತ್ತು 3,71,000 ಕೋಟಿ ರುಪಾಯಿ. ಅಂದರೆ, ಕರ್ನಾಟಕದ 2016-17, 2017-18 ಬಜೆಟ್‌ಗೆ ಸರಿಸಮ!

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಭಾರತದ ಅತಿದೊಡ್ಡ ಶ್ರೀಮಂತ ಎಂಬುದು ಹಲವು ವರ್ಷಗಳಿಂದಲೂ ಬರುತ್ತಿರುವ ಸುದ್ದಿ. ಬರ್ಕ್ಲೈ ಹುರನ್ ಇಂಡಿಯಾ ರಿಚ್ ಲಿಸ್ಟ್ 2018ರ ಪ್ರಕಾರ, ಕಳೆದೊಂದು ವರ್ಷದಿಂದ ಅವರ ದಿನನಿತ್ಯದ ಗಳಿಕೆ 300 ಕೋಟಿ ರುಪಾಯಿ ದಾಟಿದೆ. ಅಂದರೆ, ಒಂದು ವರ್ಷದಲ್ಲಿ ಅವರ ಸಂಪತ್ತು 1,09,500 ಕೋಟಿ ರುಪಾಯಿ ಹೆಚ್ಚಳವಾಗಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಶೇ.45ರಷ್ಟು ಷೇರುಗಳನ್ನು ಮುಖೇಶ್ ಅಂಬಾನಿ ಹೊಂದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರು ಕಳೆದ ಒಂದು ವರ್ಷದಲ್ಲಿ ಶೇ.45ರಷ್ಟು ಹೆಚ್ಚಳವಾಗಿದೆ. ಅಂದರೆ, ಒಂದೇ ವರ್ಷದಲ್ಲಿ ಅವರ ಸಂಪತ್ತು ಶೇ.45ರಷ್ಟು ವೃದ್ದಿಸಿದೆ. ಈ ಹೆಚ್ಚಳದ ಲೆಕ್ಕದಲ್ಲಿ ಅವರು ನಿತ್ಯವೂ 300 ಕೋಟಿ ರುಪಾಯಿ ಗಳಿಸಿದ್ದಾರೆ.

ಪ್ರಸ್ತುತ ಅವರ ಸಂಪತ್ತಿನ ಮೊತ್ತ 3,71,000 ಕೋಟಿ ರುಪಾಯಿಗಳು. ಕಳೆದ ಏಳು ವರ್ಷಗಳಿಂದಲೂ ಅವರು ದೇಶದ ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರು ಈ ವರ್ಷದಲ್ಲಿ ಶೇ.45ರಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಅವರ ಸಂಪತ್ತು ಎರಡರಿಂದ ನಾಲ್ಕನೇ ಸ್ಥಾನದಲ್ಲಿರುವ ಎಸ್ ಪಿ ಹಿಂದೂಜಾ ಕುಟುಂಬ (1,59,000 ಕೋಟಿ) ಎಲ್ ಎನ್ ಮಿತ್ತಲ್ ಕುಟುಂಬ (1,14,500 ಕೋಟಿ) ಮತ್ತು ಅಜಿಮ್ ಪ್ರೇಮ್‌ಜಿ (96,000 ಕೋಟಿ) ಈ ಮೂವರ ಸಂಪತ್ತಿಗಿಂತಲೂ ಹೆಚ್ಚಿದೆ.

ಬರ್ಕ್ಲೈ ಹುರನ್ ಇಂಡಿಯಾ ರಿಚ್ ಲಿಸ್ಟ್ ಭಾರತದಲ್ಲಿನ 1,000 ಕೋಟಿ ರುಪಾಯಿ ಮೀರಿದ ಸಂಪತ್ತು ಇರುವವರ ಪಟ್ಟಿ ಮಾಡುತ್ತದೆ. 2017ರಲ್ಲಿ ಭಾರತದಲ್ಲಿ 1,000 ಕೋಟಿ ಸಂಪತ್ತು ಮೀರಿದ್ದ 617 ಮಂದಿ ಇದ್ದರು. ಒಂದೇ ವರ್ಷದಲ್ಲಿ 1,000 ಕೋಟಿ ಸಂಪತ್ತು ಮೀರಿದ ವ್ಯಕ್ತಿಗಳ ಸಂಖ್ಯೆ 94ರಷ್ಟು ಹೆಚ್ಚಿದ್ದು 2018ರಲ್ಲಿ 813ಕ್ಕೆ ಏರಿದೆ.

ಇದನ್ನೂ ಓದಿ : ಕಳೆದ ಹತ್ತು ವರ್ಷಗಳಲ್ಲಿ ಏರಿಕೆಯೇ ಆಗಿಲ್ಲ ಮುಖೇಶ್ ಅಂಬಾನಿ ಸಂಬಳ!

ಸನ್ ಫಾರ್ಮಾ ಮುಖ್ಯಸ್ಥ ದಿಲೀಪ್ ಸಿಂಗ್ವಿ ಐದನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ; ಆದರೆ, ಅವರು ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದರು. ಈಗ ಮೂರು ಸ್ಥಾನ ಕೆಳಕ್ಕೆ ಇಳಿದಿದ್ದಾರೆ. ಬರ್ಕ್ಲೈ ಹುರನ್ ಇಂಡಿಯಾ ರಿಚ್ ಲಿಸ್ಟ್ ವರದಿ ಪ್ರಕಾರ, ದಿಲೀಪ್ ಸಿಂಗ್ವಿ ಸುಜ್ಲಾನ್ ಕಂಪನಿಯಲ್ಲಿನ ಹೂಡಿಕೆಯಲ್ಲಿ ನಷ್ಟವಾಗಿದೆ. ಕಳೆದೊಂದು ವರ್ಷದಲ್ಲಿ ಸುಜ್ಲಾನ್ ಷೇರು ಶೇ.50ರಷ್ಟು ಕುಸಿದಿದೆ. ಸಿಂಗ್ವಿ ಅವರ ಸಂಪತ್ತು 89,700 ಕೋಟಿ ರುಪಾಯಿಗಳು.

ಆರನೇ ಸ್ಥಾನದಲ್ಲಿ ಕೋಟಕ್ ಮಹಿಂದ್ರ ಬ್ಯಾಂಕ್ ನ ಉದಯ್ ಕೋಟಕ್ (78,600 ಕೋಟಿ), 7ನೇ ಸ್ಥಾನ ಸೈರಸ್ ಪೂನಾವಾಲ (73,000 ಕೋಟಿ), 8ನೇ ಸ್ಥಾನ ಗೌತಮ್ ಅಂದಾನಿ (71,200 ಕೋಟಿ), 9ನೇ ಸ್ಥಾನದಲ್ಲಿ ಸೈರಸ್ ಮತ್ತು ಷಾಪೂರ್ ಪಲ್ಲೊನ್ಜಿ ಮಿಸ್ತ್ರಿ (ತಲಾ 69,400 ಕೋಟಿ) ಇದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More