ಸಂಕಲನ | ಆಧಾರ್‌ ಸಂಬಂಧಿಸಿದ ಬೆಳವಣಿಗೆಗಳ ಕುರಿತ ವರದಿ ಮತ್ತು ವಿಶ್ಲೇಷಣೆಗಳು

ಆಧಾರ್‌ ಕಡ್ಡಾಯ, ಮಾಹಿತಿ ಸೋರಿಕೆ ಹೀಗೆ ಹಲವು ಕಾರಣಗಳಿಗೆ ಕಳೆದ ಎರಡು ಮೂರು ವರ್ಷಗಳಿಂದ ಆಧಾರ್‌ ಸೇವೆ ಚರ್ಚೆಯಲ್ಲಿದೆ. ಒಂದೆಡೆ ಕಡ್ಡಾಯಕ್ಕೆ ಒತ್ತಾಯ, ಇನ್ನೊಂದೆಡೆ ರದ್ದು ಮಾಡುವುದಕ್ಕೆ ಆಗ್ರಹ ಕೇಳಿ ಬರುತ್ತಲೇ ಇದೆ. ಇಂದು ಸುಪ್ರೀಂ ಕೋರ್ಟ್‌ ಈ ಕುರಿತು ಮಹತ್ವದ ತೀರ್ಪು ನೀಡಲಿದೆ

ಕೇಂದ್ರ ಸರ್ಕಾರವು ೧೨ ಅಂಕಿಯ ಆಧಾರ್ ಸಂಖ್ಯೆ ಬದಲಾಗಿ ೧೬ ಅಂಕಿಯ ತಾತ್ಕಾಲಿಕ ವರ್ಚುವಲ್ ಐಡಿ ಬಳಸಲು ಮುಂದಾಗಿದೆ. ಆದರೆ, ಈ ಕ್ರಮವು ಆಧಾರ್ ಲೋಪಗಳ ವಿರುದ್ಧ ಮಾತನಾಡುವವರ ಬಾಯಿ ಕಟ್ಟಲು, ಸುಪ್ರೀಂ ಕೋರ್ಟ್‌ ವಿಚಾರಣೆಯ ದಿಕ್ಕು ತಪ್ಪಿಸಲು ಮಾಡಿದ ತಾತ್ಕಾಲಿಕ ವ್ಯವಸ್ಥೆಯೇ?

ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಿಸುವುದರ ವಿರುದ್ಧ ಸುಪ್ರೀಂ ಕೋರ್ಟು ತಡೆಯಾಜ್ಞೆ ನೀಡಿದೆ. ಆದರೆ, ಈ ಆದೇಶ ಸಂಪೂರ್ಣ ಜಾರಿಯಾಗದಂತೆ ಕೆಲವು ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ. ಈ ಕುರಿತು ಮಾಹಿತಿ ತಂತ್ರಜ್ಞಾನ ತಜ್ಞರಾಗಿರುವ ಡಾ.ಅನುಪಮ್ ಸರಪ್ ಮಾತಾಡಿದ್ದಾರೆ

‘ಆಧಾರ್ ಯೋಜನೆ ಅಘೋಷಿತ ತುರ್ತು ಪರಿಸ್ಥಿತಿಯ ಭಾಗ’ ಎಂದು ಹೇಳುವ ಮೂಲಕ ಬೆಂಗಳೂರು ಮೂಲದ ಸಂತೋಷ್ ಮಿನ್ ಬಿ ಅವರು, ನಿಧನರಾದ ತಮ್ಮ ತಂದೆಯ ಬಯೋಮೆಟ್ರಿಕ್ ವಿವರ ಹಿಂದಿರುಗಿಸಲು ಆಧಾರ್ ಪ್ರಾಧಿಕಾರಕ್ಕೆ ಆದೇಶಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ

ದೇಶದಲ್ಲಿ ಬ್ಯಾಂಕಿಂಗ್, ವಿಮೆ ಸೇರಿ ನೂರಕ್ಕೂ ಹೆಚ್ಚು ಸುಧಾರಣಾ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ. ಆದರೆ ಅವಘಡಗಳ ನಂತರವೂ ಪರಿಣಾಮಕಾರಿ ಸೈಬರ್ ಕಾನೂನುಗಳಿಲ್ಲದೆ ಆಧಾರ್ ದತ್ತಾಂಶ ಸುಲಭವಾಗಿ ಹ್ಯಾಕರ್‌ಗಳ ಕೈಗೆ ದೊರೆಯುವಂತಾಗಿರುವುದು ವಿಪರ್ಯಾಸ

ಆಧಾರ್‌ ಕುರಿತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ, ಮೊಬೈಲ್‌ ಸಿಮ್‌ ಕಾರ್ಡ್‌ಗಳಿಗೆ ಆಧಾರ್‌ ಸಂಖ್ಯೆ ಜೋಡಿಸುವಂತೆ ಆದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾದರೆ ಕೇಂದ್ರ ಸರ್ಕಾರ ಸುಳ್ಳು ಹೇಳಿತೇ?

ಯಾವುದೇ ಏಜೆನ್ಸಿಗೆ ಆಧಾರ್ ಮಾಹಿತಿ ನೀಡಿದಾಗಲೂ ವಂಚಕರು ಅದನ್ನು ದೋಚುವ ಸಾಧ್ಯತೆ ಹೆಚ್ಚುತ್ತಿವೆ. ದತ್ತಾಂಶಗಳನ್ನು ಕೈವಶ ಮಾಡಿಕೊಂಡರೆ, ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ದೋಚಬಹುದು ಮತ್ತು ನಿಮಗೆ ಗೊತ್ತೇ ಇರದ ಅಪರಾಧ ಕೃತ್ಯಗಳಲ್ಲಿ ನಿಮ್ಮನ್ನು ಸುಲಭವಾಗಿ ಸಿಲುಕಿಸಬಹುದು

ಕಳೆದ ಏಳು ವರ್ಷಗಳಿಂದ ಆಧಾರ್ ಕಾರ್ಡ್‌ಗಾಗಿ ಕಚೇರಿ ಅಲೆದೂ ಅಲೆದೂ ಸುಸ್ತಾದ ಯಾದಗಿರಿ ಜಿಲ್ಲೆಯ ಯುವಕನೊಬ್ಬ, ಆಧಾರ್ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಪತ್ರ ಬರೆದಿದ್ದ. ಮತ್ತೊಂದೆಡೆ, ಯಾದಗಿರಿ ನಗರದ ಬಾಲಕನೊಬ್ಬನಿಗೆ ಎರಡೆರಡು ಆಧಾರ್ ಕಾರ್ಡ್‌ ಬಂದಿವೆ. ಏನೀ ಅವ್ಯವಸ್ಥೆ?

ಬ್ಯಾಂಕ್ ಖಾತೆ ತೆರೆಯಲು ಆಧಾರ್ ನಂಬರ್ ಕಡ್ಡಾಯವೇನಲ್ಲ. ಸುಪ್ರೀಂ ಕೋರ್ಟ್ ಶುಕ್ರವಾರ ನೀಡಿರುವ ಆದೇಶದ ಪ್ರಕಾರ ಯಾವುದೇ ಬ್ಯಾಂಕಲ್ಲಿ ಆಧಾರ್ ಇಲ್ಲದೆಯೇ ಖಾತೆ ತೆರೆಯಬಹುದಾಗಿದೆ. ಆದರೆ, ಮಾರ್ಚ್ 31ರೊಳಗೆ ಬ್ಯಾಂಕ್ ಖಾತೆಯನ್ನು ಆಧಾರ್ ಸಂಖ್ಯೆಗೆ ಜೋಡಿಸಲೇಬೇಕು

ಆಧಾರ್ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಿದ ಹಿನ್ನೆಲೆಯಲ್ಲಿ ಯುಐಡಿಎಐ ವರ್ಚುವಲ್ ಐಡಿ ಎಂಬ ಹೊಸ ಸುರಕ್ಷತಾ ಕವಚ ತೊಡಿಸಲು ಮುಂದಾಗಿದೆ. ಒನ್ ಟೈಮ್ ಪಾಸ್ ವರ್ಡ್ ನ ವಿಸ್ತೃತ ರೂಪವಾಗಿರುವ ವರ್ಚುವಲ್ ಐಡಿ ಆಧಾರ್ ಮಾಹಿತಿ ಸೋರಿಕೆ ತಡೆದು ಸುರಕ್ಷತೆ ಒದಗಿಸಲಿದೆ

ಆಧಾರ್ ಹೆಸರಿನಲ್ಲಿ ಮೂರ್ಖತನ, ಭ್ರಮೆ, ದುರಂಹಕಾರಗಳನ್ನು ಈಗಾಗಲೇ ಕಂಡಿದ್ದೇವೆ. ಬಾಕಿ ಇರುವುದು, ‘ಆಧಾರ್ ನೋಂದಣಿಗೆ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ’ ಎಂಬ ಮೂರ್ಖತನದ ಪರಮಾವಧಿ! ಈ ಕುರಿತು ‘ವೈರ್’ ಜಾಲತಾಣ ಪ್ರಕಟಿಸಿದ, ಕೆ ಸಿ ವರ್ಮಾ ಅವರ ಲೇಖನದ ಭಾವಾನುವಾದ ಇಲ್ಲಿದೆ

ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಪದೇಪದೇ ಎಚ್ಚರಿಸುತ್ತಿರುವ ವ್ಯಕ್ತಿ ಎಲಿಯಟ್ ಆಲ್ಡರ್ಸನ್. ಆತ ಟ್ವಿಟರ್ ಮೂಲಕ ಬಹಿರಂಗಪಡಿಸಿದ ಸತ್ಯಗಳನ್ನು ಆಧಾರ್ ಸಂಸ್ಥೆ ನಿರಾಕರಿಸುವ ಬದಲಾಗಿ ಭದ್ರತಾ ಲೋಪ ಸರಿಪಡಿಸುವುದು ಸೂಕ್ತ ಎಂದು ಹೇಳುವ ‘ಸ್ಕ್ರಾಲ್’ ಲೇಖನದ ಭಾವಾನುವಾದ ಇಲ್ಲಿದೆ

ರಾಜ್ಯದಲ್ಲಿ ಸ್ವಂತ ಮಗುವನ್ನು ಕರೆದುಕೊಂಡು ಆಚೆ ಹೋಗಬೇಕಾದರೂ ತಂದೆಯಾದವರು ನೂರು ಬಾರಿ ಯೋಚನೆ ಮಾಡಬೇಕಾಗಿದೆ. ಯಾಕೆಂದರೆ, ರಾಜ್ಯದಲ್ಲಿ ಮಕ್ಕಳ ಕಳ್ಳರ ಸಂಖ್ಯೆ ಹೆಚ್ಚಾಗಿದೆ ಅನ್ನೋ ಸುಳ್ಳು ಸುದ್ದಿ ಹಬ್ಬುತ್ತಲೇ ಇದೆ! ಈ ಹಿನ್ನೆಲೆಯಲ್ಲಿ, ಅಪ್ಪಂದಿರಿಗೆ ಒಂದು ಟಿಪ್ಸ್‌ ಇಲ್ಲಿದೆ

ಆಧಾರ್‌ ಅನ್ನು ಎಲ್ಲ ರೀತಿಯ ಸೇವೆಗಳಿಗೆ ಕಡ್ಡಾಯ ಮಾಡುತ್ತಿರುವ ಕೇಂದ್ರದ ನಡೆಯ ಬಗ್ಗೆ ಸಾಕಷ್ಟು ಟೀಕೆ ಮತ್ತು ಪ್ರತಿರೋಧಗಳು ವ್ಯಕ್ತವಾಗುತ್ತಿವೆ. ನ್ಯಾಯ ಹೋರಾಟವೂ ನಡೆಯುತ್ತಿದೆ. ಗುರುವಾರ ಸುಪ್ರೀಂ ಕೋರ್ಟ್‌ ನ್ಯಾಯಪೀಠ ವಿಚಾರಣೆ ನಡೆಸಿ ಕೇಂದ್ರದ ಮುಂದೆ ಹಲವು ಪ್ರಶ್ನೆಗಳನ್ನಿಟ್ಟಿದೆ

ಆಧಾರ್‌ ಮತ್ತು ಖಾಸಗಿತನ ವಿಷಯವಾಗಿ ಕಳೆದ ಒಂದು ವರ್ಷದಿಂದ ಭಾರಿ ಚರ್ಚೆ ನಡೆಯುತ್ತಿದೆ. ಒಂದೆಡೆ ಸರ್ಕಾರ ಪ್ರತಿ ಸೇವೆಗೂ ಆಧಾರ್‌ ಜೋಡಣೆ ಕಡ್ಡಾಯ ಮಾಡುವ ಪ್ರಯತ್ನ ನಡೆಸುತ್ತಿದೆ. ಇನ್ನೊಂದೆಡೆ ಆಧಾರ್‌ ಮಾಹಿತಿ ಸುರಕ್ಷತೆ ಬಗ್ಗೆ ಆತಂಕ ಹುಟ್ಟಿಸುವಂತೆ ಮಾಹಿತಿ ಸೋರಿಕೆ ಪ್ರಕರಣ ಹೆಚ್ಚುತ್ತಿವೆ

ಇತ್ತೀಚೆಗೆ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸಬೇಕೆಂದು ಚುನಾವಣಾ ಸಮಿತಿ ಹೇಳಿಕೆ ನೀಡಿತ್ತು. ಬೆನ್ನಲ್ಲೇ, ಈಗಾಗಲೇ ೩೨ ಕೋಟಿ ಆಧಾರ್‌ ಸಂಖ್ಯೆಗಳನ್ನು ಗುರುತಿನ ಚೀಟಿಯೊಂದಿಗೆ ಜೋಡಿಸಲಾಗಿದೆ ಎಂಬ ಸುದ್ದಿಯೂ ಹೊರಬಿತ್ತು. ಆದರೆ ಈಗಿನ ಸುದ್ದಿಯೇ ಬೇರೆ!

ಆಧಾರ್‌ ಮತ್ತು ಖಾಸಗಿತನ ಚರ್ಚೆಗಳು ಇನ್ನೂ ಬಿಸಿಯಾಗಿವೆ. ಈ ನಡುವೆ ‘ ದಿ ಟ್ರಿಬ್ಯೂನ್’ ಪತ್ರಿಕೆಯ ವರದಿಗಾರ್ತಿ ಆಧಾರ್ ವ್ಯವಸ್ಥೆಯ ಲೋಪ ಬಹಿರಂಗಪಡಿಸಿದ್ದಾರೆ. ಸರ್ಕಾರ ವರದಿಗಾರ್ತಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರೆ, ‘ವಿಷಲ್‌ ಬ್ಲೋವರ್‌’ ಸ್ನೋಡೆನ್‌ ಮಾತ್ರ ಮೆಚ್ಚಿ ಮಾತನಾಡಿದ್ದಾರೆ

ಪ್ರಧಾನಿಗಳ ಮಾಧ್ಯಮ ಸಲಹೆಗಾರರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಹರೀಶ್‌ ಖಾರೆ ಕಳೆದ ಮೂರು ವರ್ಷಗಳಿಂದ ‘ದಿ ಟ್ರಿಬ್ಯೂನ್‌’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. ಆಧಾರ್ ಕುರಿತು ಪ್ರಕಟಿಸಿದ ವರದಿಯಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ

ಆಧಾರ್ ವ್ಯವಸ್ಥೆಯಲ್ಲಿ ಯಾವ ಲೋಪವೂ ಇಲ್ಲ ಎಂದು ಆಧಾರ್ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರ ನ್ಯಾಯಾಲಯಗಳ ಎದುರು ಪದೇಪದೇ ಹೇಳುತ್ತಲೇ ಇವೆ. ಆದರೆ, ಆ ವ್ಯವಸ್ಥೆಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾರಿ ಹೇಳುವಂಥ ಪ್ರಾತಿನಿಧಿಕ ಪ್ರಕರಣಗಳತ್ತ ಇಣುಕುನೋಟ ಇಲ್ಲಿದೆ

ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್, ಸರ್ಕಾರಿ ಸೌಲಭ್ಯ ಪಡೆಯಲು ಮಾತ್ರ ಈ ಗುರುತಿನ ಚೀಟಿ ಪರಿಗಣಿಸಬೇಕು ಎಂಬ ಮಹತ್ವದ ಷರತ್ತು ವಿಧಿಸಿದೆ. ಇದು ಕೇಂದ್ರ ಸರ್ಕಾರ ಮತ್ತು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಂತಹ ಸಂಸ್ಥೆಗಳಿಗೆ ಹಲವು ಸವಾಲುಗಳನ್ನು ಒಡ್ಡಿದೆ

ಕೊನೆಗೂ ಆಧಾರ್ ಕುರಿತ ಅಂತಿಮ ತೀರ್ಪು ಹೊರಬಿದ್ದಿದೆ. ಆಧಾರ್ ವ್ಯವಸ್ಥೆಯ ಕುರಿತ ಈ ಸುದೀರ್ಘ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟಿನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠದ ಮುಂದೆ ಕೇಳಿಬಂದ ವಾದ-ಪ್ರತಿವಾದಗಳು ಏನು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ

ಸುಪ್ರೀಂ ಕೋರ್ಟ್ ಆಧಾರ್ ಬಗ್ಗೆ ಮಹತ್ವದ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಆಧಾರ್ ಪ್ರಾಧಿಕಾರದ ಮುಖ್ಯಸ್ಥರಾಗಿದ್ದ ನಂದನ್ ನಿಲೇಕಣಿ ಟ್ವಿಟರ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಇಂದಿನ ಕೋರ್ಟ್ ತೀರ್ಪು ಆಧಾರ್‌ನ ಮೂಲ ತತ್ವಗಳನ್ನು ಎತ್ತಿಹಿಡಿದಿದೆ ಎಂದಿದ್ದಾರೆ

ಆಧಾ‌ರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿ ಐತಿಹಾಸಿಕ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್‌ ಹಲವು ಮಹತ್ವದ ನಿಯಮ ಮತ್ತು ಷರತ್ತುಗಳನ್ನು ವಿಧಿಸಿದೆ. ಆ ಮೂಲಕ ಆಧಾರ್‌ನಿಂದ ನಾಗರಿಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವುದಿಲ್ಲವೆಂದು ‌ಪ್ರತಿಪಾದಿಸಿದೆ. ಆಧಾರ್‌ ಮಾನ್ಯತೆ ಬಗ್ಗೆ ನಿವೃತ್ತ ನ್ಯಾ.ಕೆ ಎಸ್‌ ಪುಟ್ಟಸ್ವಾಮಿ ಈ ಹಿಂದೆ ‘ದಿ ಸ್ಟೇಟ್‌’ಗೆ ನೀಡಿರುವ ಸಂದರ್ಶನ

ಆಧಾರ್‌ನ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ಖಾಸಗಿ ಹಕ್ಕಿನ ಉಲ್ಲಂಘನೆಯ ಪ್ರಶ್ನೆಗೆ ಕಾರಣವಾಗಿದ್ದ ಕೆಲವು ಅಂಶಗಳನ್ನು ರದ್ದುಪಡಿಸುವ ಮೂಲಕ ಮಹತ್ವದ ತೀರ್ಪು ನೀಡಿದೆ. ಮೋದಿಯವರ ಆಧಾರ್ ತೀರ್ಪಿನ ನಂತರ ಯುಪಿಎ ಸರ್ಕಾರದ ಆಧಾರ್ ಆಗಿ ಕಾಣುತ್ತಿದೆ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More