ಸರ್ಕಾರಿ ಸೌಲಭ್ಯ ಪಡೆಯಲು ಮಾತ್ರ ಆಧಾರ್‌ ಸೀಮಿತ ಎಂದು ತೀರ್ಪಿತ್ತ ಸುಪ್ರೀಂ

ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿ ಐತಿಹಾಸಿಕ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್‌ ಹಲವು ಮಹತ್ವದ ನಿಯಮ ಮತ್ತು ಷರತ್ತುಗಳನ್ನು ವಿಧಿಸಿದೆ. ಆ ಮೂಲಕ ಆಧಾರ್‌ನಿಂದ ನಾಗರಿಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುವುದಿಲ್ಲವೆಂದು ‌ಪ್ರತಿಪಾದಿಸಿದೆ. ಸುಪ್ರೀಂ ಕೋರ್ಟ್‌ ಬುಧವಾರ (ಸೆ.26) ನೀಡಿರುವ ತೀರ್ಪಿನ ಪ್ರಮುಖಾಂಶಗಳು ಇಲ್ಲಿವೆ. 

ಸುಪ್ರೀಂ ಕೋರ್ಟ್‌ ಆಧಾರ್ ಬಗ್ಗೆ ನೀಡಿರುವ ತೀರ್ಪಿನ ಪ್ರಮುಖಾಂಶಗಳು

 • ಮೊಬೈಲ್‌ ಸಂಖ್ಯೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯವಲ್ಲ
 • ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಬೇಕಿಲ್ಲ
 • ಪಾನ್‌ ಕಾರ್ಡ್‌ ಮತ್ತು ಆದಾಯ ತೆರಿಗೆ ಪಾವತಿಗೆ ಆಧಾರ್‌ ಕಡ್ಡಾಯ
 • ಬ್ಯಾಂಕ್‌ ಖಾತೆಗಳಿಗೆ ಆಧಾರ್‌ ಜೋಡಣೆ ಸಂವಿಧಾನ ಬದ್ಧವಲ್ಲ
 • ಮಕ್ಕಳ ಶಾಲಾ ದಾಖಲಾತಿಗೆ ಆಧಾರ್‌ ಅವಶ್ಯವಲ್ಲ
 • ಸಿಬಿಎಸ್‌ಇ, ನೀಟ್‌, ಯುಜಿಸಿ ಪರೀಕ್ಷೆಗಳಿಗೆ ಆಧಾರ್‌ ಅನಗತ್ಯ
 • ಆಧಾರ್‌ ಪೂರೈಸುವಲ್ಲಿ ವಿಫಲವಾಗುವ ಯಾವುದೇ ಮಗುವಿಗೆ ಸರ್ಕಾರಿ ಯೋಜನೆಗಳಿಂದ ವಂಚಿಸುವಂತಿಲ್ಲ
 • ಮಕ್ಕಳನ್ನು ಆಧಾರ್‌ ವ್ಯವಸ್ಥೆಗೆ ದಾಖಲಿಸುವ ಮುನ್ನ ಪಾಲಕರ ಒಪ್ಪಿಗೆ ಪಡೆಯುವುದು ಕಡ್ಡಾಯ
 • ದತ್ತಾಂಶ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ದತ್ತಾಂಶಗಳ ರಕ್ಷಣಾ ಕಾನೂನನ್ನು ಆದಷ್ಟು ಬೇಗ ಜಾರಿಗೊಳಿಸಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಬೇಕು
 • ದೂರವಾಣಿ ಸಂಪರ್ಕ ಕಲ್ಪಿಸುವ ಸಮಯದಲ್ಲಿ ಟೆಲಿಕಾಂ ಕಂಪನಿಗಳು ಇನ್ನು ಮುಂದೆ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸನ್ಸ್‌ ಹಾಗೂ ಮತಗುರುತಿನ ಚೀಟಿಯನ್ನು ಒಪ್ಪಿಕೊಳ್ಳಬೇಕು
 • ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಮಾತ್ರ ಆಧಾರ್‌ ಸೀಮಿತ. ಇಷ್ಟು ಬಿಟ್ಟು ಬೇರೆ ಯಾವುದೇ ಖಾಸಗಿ ಸೌಲಭ್ಯಗಳಿಗೆ ಆಧಾರ್‌ ಬಳಕೆ ಅನಗತ್ಯ
 • ಸರ್ಕಾರಿ ಆಸ್ಪತ್ರೆಗಳನ್ನು ಒಳಗೊಂಡಂತೆ ಇನ್ನುಳಿದ ಆಸ್ಪತ್ರೆಗಳಲ್ಲಿ ಆಧಾರ್‌ ಇಲ್ಲವೆಂದು ಚಿಕಿತ್ಸೆ ನಿರಾಕರಿಸುವಂತಿಲ್ಲ
 • ಖಾಸಗಿ ಸಂಸ್ಥೆಗಳಿಗೆ ಆಧಾರ್‌ ಬಯೋಮೆಟ್ರಿಕ್‌ ಮಾಹಿತಿ ನೀಡುವುದು ಕಾನೂನು ಬಾಹಿರ
 • ಆಧಾರ್‌ ಆಧಾರದ ಮೇಲೆ ನಾಗರಿಕ ಪೌರತ್ವ ನೀಡಲು ಅವಕಾಶವಿಲ್ಲ
 • ಸಂಚಿತ ನಿಧಿಯಿಂದ (consolidated fund) ಯಾವ ಯಾವ ಕಾರ್ಯಕ್ರಮಗಳಿಗೆ ಹಣ ನೀಡಲಾಗುತ್ತಿದೆಯೋ ಆ ಕಾರ್ಯಕ್ರಮಗಳಿಗೆ ಮಾತ್ರ ಆಧಾರ್‌ ಸೀಮಿತ
 • ಉದ್ದೇಶಿತ ಸಬ್ಸಿಡಿಗಳು (ಆಹಾರ, ಮನೆ, ಹೆರಿಗೆ ಮತ್ತು ಬೆಳೆಗಳಿಗೆ ಸರ್ಕಾರದಿಂದ ಸಿಗುವ ಸಹಾಯಧನ) ಹಾಗೂ ಸರ್ಕಾರದ ಯೋಜನೆಗಳಿಗೆ ಆಧಾರ್ ಬಳಕೆ ಅನಿವಾರ್ಯ
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More