ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು

ವಿವಾದಿತ ಅಯೋಧ್ಯೆ ಪ್ರಕರಣ ವಿಚಾರಣೆ

1994ರಲ್ಲಿ ನಮಾಜಿನ ಕುರಿತಾಗಿ ಸುಪ್ರಿಂ ಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಲಿದೆ. ಮಸೀದಿಯು ಮುಸ್ಲಿಮರ ಪ್ರಾರ್ಥನೆಯ ಅವಿಭಾಜ್ಯ ಅಂಗವಲ್ಲವೆಂದು 94ರ ತೀರ್ಪಿನಲ್ಲಿ ಹೇಳಲಾಗಿತ್ತು. ಇದಲ್ಲದೆ, ಮಸೀದಿಯು ಇಸ್ಲಾಂ ಧರ್ಮಕ್ಕೆ ಅಂತರ್ಗತ ವಿಚಾರವೇ ಎಂಬುದನ್ನು ಇಂದು ಪೀಠ ನಿರ್ಧರಿಸಲಿದೆ. ಅಯೋಧ್ಯೆಯ ವಿವಾದಿತ ನಿವೇಶನವನ್ನು ಮೂರು ಭಾಗಗಳಾಗಿ ಅಖಾಡ, ರಾಮ ಲಲ್ಲಾ ಹಾಗೂ ಸುನ್ನಿ ವಕ್ಫ್ ಮಂಡಳಿಗೆ ಹಂಚಿಕೆ ಮಾಡಬೇಕು ಎಂದು ಈ ಹಿಂದೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಸಹ ಸುಪ್ರೀಂ ಕೋರ್ಟ್ ಇಂದು ನೀಡಲಿದೆ.

ಮದುವೆಯಾಚೆಗಿನ ಅಕ್ರಮ ಸಂಬಂಧ ಕುರಿತು ಸುಪ್ರೀಂ ತೀರ್ಪು

ಮದುವೆಯಾಚೆಗೆ ಹೊಂದುವ ಅಕ್ರಮ ಸಂಬಂಧವನ್ನು ಅಪರಾಧವೆಂದು ಪರಿಗಣಿಸುವ ಸೆಕ್ಷನ್ 497 ಕುರಿತ ಸುಪ್ರೀಂ ಕೋರ್ಟ್ ತೀರ್ಪು ಗುರುವಾರ ಹೊರಬೀಳಲಿದೆ. ಅಕ್ರಮ ಸಂಬಂಧಗಳಲ್ಲಿ ಪುರುಷನೊಬ್ಬನೇ ಆರೋಪಿ, ಮಹಿಳೆ ಸಂತ್ರಸ್ತೆ ಎಂದು ಸೆಕ್ಷನ್‌ 497 ಹೇಳುತ್ತದೆ. ಆ ಬಗ್ಗೆ ದೀಪಕ್‌ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ತೀರ್ಪು ನೀಡಲಿದೆ.

ಕ್ವಾರ್ಟರ್‌ಫೈನಲ್ ತಲುಪುವ ಭರವಸೆಯಲ್ಲಿ ಸೈನಾ ನೆಹ್ವಾಲ್

ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉಳಿದುಕೊಂಡಿರುವ ಭಾರತದ ಸವಾಲನ್ನು ಏಕಾಂಗಿಯಾಗಿ ಮುಂದುವರೆಸಿರುವ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಕ್ವಾರ್ಟರ್‌ಫೈನಲ್ ತಲುಪುವ ವಿಶ್ವಾಸದಲ್ಲಿದ್ದಾರೆ. ಇಂದು ನಡೆಯಲಿರುವ ಅಂತಿಮ ಹದಿನಾರರ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾ ಆಟಗಾರ್ತಿ ಗಾ ಉನ್ ಕಿಮ್ ವಿರುದ್ಧ ಸೈನಾ ಕಾದಾಡಲಿದ್ದಾರೆ. ಏಷ್ಯಾಡ್‌ನಲ್ಲಿ ಕಂಚು ಗೆದ್ದಿದ್ದ ಸೈನಾ, ಚೀನಾ ಓಪನ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದರು. ಪ್ರಸಕ್ತ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಆಕೆ, ಇದೀಗ ಕ್ವಾರ್ಟರ್‌ಫೈನಲ್ ತಲುಪುವ ಭರವಸೆಯಲ್ಲಿದ್ದಾರೆ.

ವುಹಾನ್ ಓಪನ್: ಮೋನಿಕಾ, ಸಿಬುಲ್ಕೋವಾ ಇಂದು ಕಣಕ್ಕೆ

ವುಹಾನ್ ಓಪನ್ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದ ಎರಡು ಪ್ರತ್ಯೇಕ ಪಂದ್ಯಗಳಲ್ಲಿ ಡೊಮಿನಿಕಾ ಸಿಬುಲ್ಕೋವಾ ಮತ್ತು ಮೋನಿಕಾ ಪ್ಯುಗ್ ಕಣಕ್ಕಿಳಿಯುತ್ತಿದ್ದಾರೆ. ಇಂದು ಮಧ್ಯಾಹ್ನ ಸುಮಾರು ೧.೩೦ಕ್ಕೆ ಆರಂಭವಾಗಲಿರುವ ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಚೀನಿ ಆಟಗಾರ್ತಿ ವಾಂಗ್ ಕಿಯಾಂಗ್ ವಿರುದ್ಧ ರಿಯೋ ಒಲಿಂಪಿಕ್ಸ್ ಚಾಂಪಿಯನ್ ಮೋನಿಕಾ ಪ್ಯುಗ್ ಸೆಣಸಲಿದ್ದರೆ, ಸಂಜೆ ೪.೦೦ರ ಹೊತ್ತಿಗೆ ಆರಂಭವಾಗುವ ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಸ್ಲೋವೇಕಿಯಾದ ಡೊಮಿನಿಕಾ ಸಿಬುಲ್ಕೋವಾ, ಬೆಲಾರಸ್‌ನ ಅರಿನಾ ಸಬಲೆಂಕಾ ವಿರುದ್ಧ  ಕಾದಾಡಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More