ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು  

ಇಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೊಯ್ ಅಧಿಕಾರ ಸ್ವೀಕಾರ

ಭಾರತದ ೪೬ನೇ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಾನು ಅಧಿಕಾರ ವಹಿಸಿಕೊಂಡ ಮೇಲೆ ಬಾಕಿ ಇರುವ ೩. ೧೮ ಕೋಟಿಯಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನನ್ನ ಬಳಿ ಪರಿಹಾರ ಮಾರ್ಗ ಇದೆ ಎಂದು ಹೇಳಿದ್ದ ಗೊಗೊಯ್ ಅವರು ಇಂದು ಆ ಆಲೋಚನೆಯನ್ನು ಪ್ರಸ್ತಾಪ ಮಾಡಬಹುದು ಎನ್ನಲಾಗಿದೆ.

ಉಪಚುನಾವಣೆ ಹಿನ್ನೆಲೆಯಲ್ಲಿ‌ ಸಿಎಂ ಎಚ್ಡಿಕೆ ಮಹತ್ವದ ಸಭೆ

ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಲ್ಲಿ ಗೆಲ್ಲಲು ತಂತ್ರಗಾರಿಕೆ ರೂಪಿಸುವ ಸಂಬಂಧ ಜಿಲ್ಲೆಯ ಕೇತಗಾನಹಳ್ಳಿಯ ಫಾರ್ಮ್ಹೌಸ್ನಲ್ಲಿ ಬುಧವಾರ ಮಹತ್ವದ ಸಭೆ ನಡೆಸಲಿದ್ದಾರೆ. ಪತ್ನಿ ಅನಿತಾ ಅವರನ್ನು ರಾಮನಗರದಲ್ಲಿ ಕಣಕ್ಕಿಳಿಸಲು ಕುಮಾರಸ್ವಾಮಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಔಪಚಾರಿಕವಾಗಿ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ತುಂಗಭದ್ರಾ ಎಡೆದಂಡೆ ಕಾಲುವೆ ಅಕ್ರಮ; ಇಂದು ರೈತರ ಪ್ರತಿಭಟನೆ

ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿನ ಅಕ್ರಮ ನೀರಾವರಿ ಮತ್ತು ನೀರು ನಿರ್ವಹಣೆಯಲ್ಲಾಗುತ್ತಿರುವ ಲೋಪ ಮುಚ್ಚಿಕೊಳ್ಳಲು ರಾಜ್ಯ ಸರ್ಕಾರ ಪರ್ಯಾಯ ಮಾರ್ಗೋಪಾಯ ಅನುಷ್ಠಾನಕ್ಕೆ ಮುಂದಾಗಿದೆ ಎಂದು ಆರೋಪಿಸಿರುವ ರೈತರು ಬುಧವಾರ ರಾಯಚೂರಿನಲ್ಲಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಗಣೇಕಲ್ ಜಲಾಶಯಕ್ಕೆ ಎನ್ನಾರ್ಬಿಸಿ ಕಾಲುವೆಯಿಂದ ನೀರು ಹರಿಸಿಕೊಳ್ಳುವ ಎರಡು ಯೋಜನೆಗಳು ಸಂಘರ್ಷಕ್ಕೆ ದಾರಿ ಮಾಡಿದೆ. ಈ ಯೋಜನೆ ಜಾರಿಗೆ ಸರ್ಕಾರ ಆಸಕ್ತಿ ತೋರಿರುವುದು ರೈತರನ್ನು ಕೆರಳಿಸಿದೆ.

ಸಿಬುಲ್ಕೋವಾ, ಸ್ಟೀಫನ್ಸ್ ಹಣಾಹಣಿ ಇಂದು

ಡಬ್ಲ್ಯೂಟಿಎ ಚೀನಾ ಓಪನ್ ಟೆನಿಸ್ ಪಂದ್ಯಾವಳಿಯ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿಂದು ಸ್ಲೊವೇಕಿಯಾ ಆಟಗಾರ್ತಿ ಡೊಮಿನಿಕಾ ಸಿಬುಲ್ಕೋವಾ ಮತ್ತು ಅಮೆರಿಕದ ಸ್ಲೊವಾನಿ ಸ್ಟೀಫನ್ಸ್ ಸೆಣಸಲಿದ್ದಾರೆ. ಪಂದ್ಯ ಸರಿಸುಮಾರು ಸಂಜೆ ೬.೩೦ಕ್ಕೆ ಶುರುವಾಗುವ ಸಾಧ್ಯತೆ ಇದೆ. ಕಳೆದ ಬಾರಿಯ ಅಮೆರಿಕ ಓಪನ್ ಚಾಂಪಿಯನ್ ಸ್ಲೊವಾನಿ, ಸಿಬುಲ್ಕೋವಾ ಮಣಿಸಿ ಕ್ವಾರ್ಟರ್‌ಫೈನಲ್ ತಲುಪುವ ವಿಶ್ವಾಸದಲ್ಲಿದ್ದರೆ, ಸಿಬುಲ್ಕೋವಾ ಕೂಡ ಸ್ಟೀಫನ್ಸ್‌ಗೆ ಆಘಾತ ನೀಡಲು ತಯಾರಿ ಮಾಡಿಕೊಂಡಿದ್ದಾರೆ. ಇನ್ನು, ವನಿತೆಯರ ಸಿಂಗಲ್ಸ್ ವಿಭಾಗದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ಕೆರೋಲಿನ್ ವೋಜ್ನಿಯಾಕಿ ಕ್ರೊವೇ‍ಷ್ಯಾದ ಪೆಟ್ರಾ ಮಾರ್ಟಿಚ್ ವಿರುದ್ಧ ಕಾದಾಡಲಿದ್ದಾರೆ. ಇತ್ತ, ಮಧ್ಯಾಹ್ನ ೧೨.೦೦ರಿಂದ ಶುರುವಾಗಲಿರುವ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯಗಳ ಪ್ರಮುಖ ಆಕರ್ಷಣೆ ಜುವಾನ್ ಡೆಲ್ ಪೊಟ್ರೊ ಮತ್ತು ಕರೆನ್ ಕಚಾನೊವ್ ನಡುವಣ ಪಂದ್ಯವಾಗಿದೆ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More