ಸಹಭಾಗಿ ಪತ್ರಿಕೋದ್ಯಮ | ಅಮೃತ ಕಾಲೇಜು ಮಾರಾಟ ಪ್ರಕರಣ ವರದಿ ಮಾಡಿದ ಪ್ರಜಾವಾಣಿ

ಅಮೃತ ಎಂಜಿನಿಯರಿಂಗ್‌ ಕಾಲೇಜು ಮಾರಾಟಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿವೈಎಸ್ಪಿ ಹಾಕಿದ್ದ ಬಿ ರಿಪೋರ್ಟ್‌ ಅನ್ನು ಸತತ ಎರಡನೇ ಬಾರಿಗೆ ವಜಾಗೊಳಿಸಿದ್ದ ಜಿಲ್ಲಾ ಪ್ರರ್ಧಾನ ಸಿವಿಲ್‌ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ “ದಿ ಸ್ಟೇಟ್‌” ವಿಶೇಷ ವರದಿ ಮಾಡಿತ್ತು

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತ್‌ ಕುಮಾರ್‌, ಬಾಗಲಕೋಟೆ ಬಿಜೆಪಿ ಶಾಸಕ ಹಾಗೂ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ‌ ವೀರಣ್ಣ ಚರಂತಿಮಠ ಸೇರಿದಂತೆ ಆರು ಮಂದಿಯ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿವೈಎಸ್‌ಪಿ ಸಲ್ಲಿಸಿದ್ದ ಬಿ ರಿಪೋರ್ಟ್‌ ಅನ್ನು ಜಿಲ್ಲಾ ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಲಯವು ಸತತ ಎರಡನೇ ಬಾರಿಗೆ ವಜಾಗೊಳಿಸಿದೆ. ಇದರಿಂದ ಆರೋಪಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ‘ದಿ ಸ್ಟೇಟ್‌’ ಅಕ್ಟೋಬರ್ ೧ರಂದು ವರದಿ ಪ್ರಕಟಿಸಿತ್ತು. ಇದೀಗ ‘ಪ್ರಜಾವಾಣಿ‌’ಯು ಕೂಡ ವರದಿ ಪ್ರಕಟಿಸಿದ್ದು, ಸಹಭಾಗಿ ಪತ್ರಿಕೋದ್ಯಮವನ್ನು ವಿಸ್ತರಿಸಿದೆ. ಮಾಧ್ಯಮ ವಲಯದಲ್ಲಿ ಇದೊಂದು ಉತ್ತಮ ಬೆಳವಣಿಗೆ.

೨೦೧೪ರಲ್ಲಿ ಪ್ರಕರಣದ ತನಿಖೆ ನಡೆಸಿದ್ದ ಬಾಗಲಕೋಟೆ ಡಿವೈಎಸ್‌ಪಿ, ಕೋರ್ಟ್‌ಗೆ‌ ಬಿ ರಿಪೋರ್ಟ್‌ ಸಲ್ಲಿಸಿದ್ದರು. ಆದರೆ, ಅದನ್ನು ಮಾನ್ಯ ಮಾಡದ ನ್ಯಾಯಲಯವು, ಛೀಮಾರಿ ಹಾಕಿ, ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಆದೇಶಿಸಿತ್ತು. ಕೋರ್ಟ್ ಆದೇಶದಂತೆ ಸುಮಾರು ನಾಲ್ಕು ವರ್ಷ ತನಿಖೆ ನಡೆಸಿದ್ದ ಬಾಗಲಕೋಟೆ ಡಿವೈಎಸ್‌ಪಿ, ಎರಡನೇ ಬಾರಿಯೂ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಇದನ್ನು ವಜಾಗೊಳಿಸಿರುವ ನ್ಯಾಯಾಲಯವು‌, ಅರ್ಜಿದಾರರ ಹೇಳಿಕೆ ದಾಖಲಿಸಿಕೊಳ್ಳಲು ಮುಂದಾಗುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ೨೦೧೪ರಲ್ಲಿ ಕೋರ್ಟ್‌ ಆದೇಶದ ಮೇರೆಗೆ ತೇಜಸ್ವಿನಿ ಅನಂತ್‌ ಕುಮಾರ್‌, ವೀರಣ್ಣ ಚರಂತಿಮಠ, ವೀರಣ್ಣ ಹಲಕುರ್ಕಿ, ಮಹೇಶ್‌ ಅಥಣಿ, ಜಿ ಆರ್‌ ನಾರಾಯಣ್‌ ಮತ್ತು ಕೆ ಹರೀಶ್‌ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ : ಕೋರ್ಟ್‌ನಿಂದ ಬಿ ರಿಪೋರ್ಟ್ ವಜಾ; ತೇಜಸ್ವಿನಿ ಅನಂತಕುಮಾರ್‌, ಚರಂತಿಮಠಗೆ ಸಂಕಷ್ಟ?

“ತೇಜಸ್ವಿನಿ ಅನಂತ್‌ ಕುಮಾರ್‌ ಅವರು ನಿರ್ದೇಶಕರಾಗಿರುವ ನಾಲೆಡ್ಜ್‌ ಪಾರ್ಕ್‌ ಆಫ್‌ ಇಂಡಿಯಾ ಟ್ರಸ್ಟಿನಡಿಯಲ್ಲಿ ದಶಕದ ಹಿಂದೆ ಅಮೃತ ಎಂಜಿನಿಯರಿಂಗ್‌ ಕಾಲೇಜು ತೆರೆಯಲಾಗಿದೆ. ಆದರೆ, ಹೆಚ್ಚು ವಿದ್ಯಾರ್ಥಿಗಳು ದಾಖಲಾಗದ ಹಿನ್ನೆಲೆಯಲ್ಲಿ ಕಾಲೇಜನ್ನು ಮಾರಾಟ ಮಾಡಲು ತೇಜಸ್ವಿನಿ ಅವರು ಮುಂದಾಗಿದ್ದರು. ಟ್ರಸ್ಟ್ ಸಂಪೂರ್ಣ ನಷ್ಟದಲ್ಲಿ ಮಾತ್ರ ಮಾರಾಟ ಮಾಡಬಹುದಾಗಿದೆ. ನಾಲೆಡ್ಜ್‌ ಪಾರ್ಕ್‌ ಆಫ್‌ ಇಂಡಿಯಾ ಟ್ರಸ್ಟ್‌ ಸಾರ್ವಜನಿಕ ಆಸ್ತಿಯಾಗಿದ್ದು, ಮಾರಾಟ ಅಥವಾ ಭೋಗ್ಯದ ಕರಾರು ಮಾಡುವ ಮುನ್ನ ಸಹಾಯಕ ದತ್ತಿ ಆಯುಕ್ತರ ಅನುಮತಿ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ಅನುಮತಿ ಪಡೆಯದೆ ವ್ಯವಹರಿಸಲಾಗಿದೆ. ಇತ್ತ ಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷ‌ ವೀರಣ್ಣ ಚರಂತಿಮಠ ಅಮೃತ ಎಂಜಿನಿಯರಿಂಗ್‌ ಕಾಲೇಜು ಖರೀದಿಸಲು ಮುಂದಾಗಿದ್ದು, ಕಾಲೇಜು ಮತ್ತು ಅಲ್ಲಿರುವ ಸಾಮಗ್ರಿಗಳ ಮೌಲ್ಯಮಾಪನ ಮಾಡಿದಾಗ ಸುಮಾರು ೨೬ ಕೋಟಿ ರುಪಾಯಿ ಬೆಲೆಬಾಳುತ್ತದೆ ಎಂದು ತಜ್ಞರ ಸಮಿತಿ ಅಂದಾಜಿಸಿತ್ತು. ಇದಕ್ಕಾಗಿ ಅವರು ಮತ್ತೊಂದು ಆಸ್ತಿಯನ್ನು ಒತ್ತೆ ಇಟ್ಟು ೫೦ ಕೋಟಿ ರುಪಾಯಿ ಸಾಲ ಪಡೆದಿದ್ದಾರೆ. ಆದರೆ, ಅಮೃತ ಎಂಜಿನಿಯರಿಂಗ್ ಕಾಲೇಜಿಗೆ ಪಾವತಿಸಿರುವುದು ಕೇವಲ ೨೬ ಕೋಟಿ ರುಪಾಯಿ. ಈ ಹಣವನ್ನೂ ಆರೋಪಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More