₹2.50 ದರ ಕಡಿತ; ಬೆಂಗಳೂರಿನಲ್ಲಿ ಪೆಟ್ರೋಲ್ ₹82.18, ಡಿಸೇಲ್ ₹73.34

ಬೆಲೆ ಏರಿಕೆ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು 1.50 ರುಪಾಯಿ ಕಡಿತ ಮಾಡಿದೆ. ತೈಲ ಮಾರಾಟ ಕಂಪನಿಗಳು 1 ರುಪಾಯಿ ಕಡಿತ ಮಾಡಿವೆ. ಇದರಿಂದಾಗಿ ಒಟ್ಟಾರೆ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ 2.50 ರುಪಾಯಿ ಕಡಿತ ಆಗಲಿದೆ

ಕೇಂದ್ರ ಸರ್ಕಾರ ದೇಶದ ಜನತೆ ಮೇಲೆ ಕೊನೆಗೂ ಕನಿಕರ ತೋರಿಸಿದೆ. ಬೆಲೆ ಏರಿಕೆ ಬಗ್ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ದರವನ್ನು 1.50 ರುಪಾಯಿ ಕಡಿತ ಮಾಡಿದೆ. ತೈಲ ಮಾರಾಟ ಕಂಪನಿಗಳು 1 ರುಪಾಯಿ ಕಡಿತ ಮಾಡಲಿವೆ.

ಇದರಿಂದಾಗಿ ಒಟ್ಟಾರೆ ಪೆಟ್ರೋಲ್ ಮತ್ತು ಡಿಸೇಲ್ ದರದಲ್ಲಿ 2.50 ರುಪಾಯಿ ಕಡಿತ ಆಗಲಿದೆ. ಆದರೆ, ಈ ಕಡಿತ ಆಗಿರುವ ದರವೇ ಮುಂಬರುವ ದಿನಗಳಲ್ಲಿ ಇರುತ್ತದೆಂದು ಭಾವಿಸಬೇಕಿಲ್ಲ. 1 ರುಪಾಯಿ ಕಡಿತ ಮಾಡಿರುವ ತೈಲ ಮಾರಾಟ ಕಂಪನಿಗಳು ನಿತ್ಯವೂ ದರ ಏರಿಸುತ್ತಲೇ ಇರುತ್ತವೆ.

ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯನ್ನು 2 ರುಪಾಯಿ ಕಡಿತ ಮಾಡಿತ್ತು. ಆದರೆ ನಿತ್ಯವೂ ದರ ಏರಿಕೆಯಿಂದಾಗಿ ಕಡಿತ ಮಾಡಿದ ಪೂರ್ವದಲ್ಲಿದ್ದ ದರದ ಮಟ್ಟಕ್ಕೆ ಈಗ ದರ ಏರಿದೆ.

“ನಾವು ದರ ಕಡಿತ ಮಾಡಿದ್ದೇವೆ. ರಾಜ್ಯ ಸರ್ಕಾರಗಳೂ ಅಷ್ಟೇ ಪ್ರಮಾಣದಲ್ಲಿ ದರ ಕಡಿತ ಮಾಡಬೇಕು” ಎಂದು ದರ ಕಡಿತ ಪ್ರಕಟಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.ಅವರ ಪ್ರಕಾರ, ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಎಕ್ಸೇಜ್ ಸುಂಕವು ಸ್ಥಿರವಾಗಿರುತ್ತದೆ. ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿದರೂ ಕೇಂದ್ರ ಸರ್ಕಾರಕ್ಕೆ ಬರುವ ಆದಾಯ ಮಾತ್ರ ಸ್ಥಿರವಾಗಿರುತ್ತದೆ. ಆದರೆ, ರಾಜ್ಯ ಸರ್ಕಾರಗಳು ಸರಾಸರಿ ಶೇ.29ರಷ್ಟು ತೆರಿಗೆ ವಿಧಿಸುತ್ತಿವೆ. ಈ ತೆರಿಗೆಯು ಮಾರಾಟ ದರದ ಮೇಲೆ ವಿಧಿಸುವುದರಿಂದ ದರ ಏರಿದಂತೆ ರಾಜ್ಯ ಸರ್ಕಾರಗಳಿಗೆ ಬರುವ ಆದಾಯವೂ ಹೆಚ್ಚುತ್ತದೆ. ಆದ್ದರಿಂದ ತಕ್ಷಣವೇ ಕೇಂದ್ರ ಸರ್ಕಾರ ಕಡಿತ ಮಾಡಿರುವಷ್ಟೇ ಪ್ರಮಾಣದಲ್ಲಿ ದರ ಕಡಿತ ಮಾಡುವಂತೆ ಮನವಿ ಮಾಡಿದ್ದಾರೆ.

ಈ ನಡುವೆ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಈ ಹಂತದಲ್ಲಿ ದರ ಕಡಿತ ಮಾಡಲು ನಿರಾಕರಿಸಿದ್ದಾರೆ. ನಾವು ಈ ಹಿಂದೆಯೇ ದರ ಕಡಿತ ಮಾಡಿದ್ದೇವೆ ಈಗ ಕಡಿತ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಇಡೀ ದೇಶಕ್ಕೆ ರಜೆ ಇದ್ದರೂ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ಇರಲಿಲ್ಲ ರಜೆ!

ತತ್ಪರಿಣಾಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಕೇವಲ 2.50ರುಪಾಯಿ ಮಾತ್ರ ಕಡಿತವಾಗಲಿದೆ. ಆದರೆ, ಮಹಾರಾಷ್ಟ್ರ, ಗುಜರಾತ್ ಮತ್ತಿತರ ಬಿಜೆಪಿ ಆಡಳಿತದ ರಾಜ್ಯಗಳು ದರ ಕಡಿತಕ್ಕೆ ಮುಂದಾಗಿದ್ದು ಅಲ್ಲಿ ಕಡಿತದ ಪ್ರಮಾಣ 5 ರುಪಾಯಿಗಳಾಗಿರುತ್ತದೆ.

ಮಧ್ಯರಾತ್ರಿಯಿಂದ ಜಾರಿಯಾಗಲಿರುವ ಪರಿಷ್ಕೃತ ದರದ ಪ್ರಕಾರ ಬೆಂಗಳೂರಿನಲ್ಲಿ ಪೆಟ್ರೋಲ್ ದರವು 84.67 ಇದ್ದು 82,17ಕ್ಕೆ ಇಳಿಯಲಿದೆ. ಡಿಸೇಲ್ ದರವು 75.84 ರುಪಾಯಿ ಇದ್ದು 73.34ಕ್ಕೆ ಇಳಿಯಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More