ಮಾರ್ನಿಂಗ್ ಡೈಜೆಸ್ಟ್ | ಇಂದು ನೀವು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸುದ್ದಿಗಳು   

ಸಿಎಂ ಎಚ್‌ಡಿಕೆ ದೆಹಲಿ ಪ್ರವಾಸ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ಮತ್ತು ಶನಿವಾರ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯದ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ಶುಕ್ರವಾರ ಕೇಂದ್ರದ ವಿವಿಧ ಸಚಿವರುಗಳನ್ನು ಕುಮಾರಸ್ವಾಮಿ ಭೇಟಿ ಮಾಡಲಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡುವ ಉದ್ದೇಶ ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಮತ್ತೊಂದು ಶತಕದ ಮೇಲೆ ವಿರಾಟ್ ಕಣ್ಣು

ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಂದು ವಿರಾಟ್ ಕೊಹ್ಲಿ ಶತಕದತ್ತ ಗಮನ ಹರಿಸಿದ್ದಾರೆ. ಮೊದಲ ದಿನಾಂತ್ಯಕ್ಕೆ ೭೨ ರನ್ ಗಳಿಸಿ ಔಟಾಗದೆ ಉಳಿದಿರುವ ಕೊಹ್ಲಿ, ೨೪ನೇ ಟೆಸ್ಟ್ ಶತಕದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು, ಪೃಥ್ವಿ ಶಾ (೧೩೪) ಮತ್ತು ಚೇತೇಶ್ವರ ಪೂಜಾರ (೮೬) ೨ನೇ ವಿಕೆಟ್‌ಗೆ ಕಲೆಹಾಕಿದ ೨೦೬ ರನ್‌ಗಳ ಜತೆಯಾಟದೊಂದಿಗೆ ಮೊದಲ ದಿನಾಂತ್ಯಕ್ಕೆ ೮೯ ಓವರ್‌ಗಳಲ್ಲಿ ಕೇವಲ ೪ ವಿಕೆಟ್‌ಗೆ ೩೬೪ ರನ್ ಗಳಿಸಿರುವ ಆತಿಥೇಯ ಭಾರತ ತಂಡ, ಬೃಹತ್ ಮೊತ್ತದತ್ತ ಚಿತ್ತ ಹರಿಸಿದೆ. ಕ್ರೀಸ್‌ನಲ್ಲಿರುವ ಕೊಹ್ಲಿ ಮತ್ತು ರಿಷಭ್ ಪಂತ್ (೧೭) ಸೇರಿದಂತೆ ಕೆಳ ಕ್ರಮಾಂಕಿತ ಆಟಗಾರರು ನೀಡುವ ಪ್ರದರ್ಶನ ಇದನ್ನು ಅವಲಂಬಿಸಿದೆ

ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಸಾಧ್ಯತೆ

ಅಕ್ಟೋಬರ್ ೫ ರಿಂದ ೯ರವರೆಗೆ ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ಸಮುದ್ರ ಮೀನುಗಾರರಿಗೆ ವಾಪಾಸ್ ಆಗುವಂತೆ ಮುನ್ಸೂಚನೆ ನೀಡಿದ್ದು ಕರಾವಳಿ ತೀರದಲ್ಲಿ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಂಗಳೂರು ಸಹಿತ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಕೋಲಾರ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ.

ಚೀನಾ ಓಪನ್ ಟೆನಿಸ್: ಒಸಾಕ, ಝಾಂಗ್ ಹಣಾಹಣಿ

ಚೀನಾ ಓಪನ್ ಟೆನಿಸ್ ಪಂದ್ಯಾವಳಿಯ ವನಿತೆಯರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯಗಳಿಂದು ನಡೆಯಲಿದ್ದು, ಜಪಾನ್‌ ಆಟಗಾರ್ತಿ ನವೊಮಿ ಒಸಾಕ ಮತ್ತು ಚೀನಿ ಆಟಗಾರ್ತಿ ಶುವಾಯಿ ಝಾಂಗ್ ಸೆಣಸಲಿದ್ದಾರೆ. ಸರಿಸುಮಾರು ಬೆಳಗ್ಗೆ ೧೦.೦೦ರ ನಂತರ ಆರಂಭವಾಗಲಿರುವ ಪಂದ್ಯದಲ್ಲಿ ಒಸಾಕ ಫೇವರಿಟ್ ಎನಿಸಿದ್ದಾರೆ. ಝಾಂಗ್ ನಿನ್ನೆ ನಡೆದ ಪ್ರೀಕ್ವಾರ್ಟರ್‌ನಲ್ಲಿ ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್‌ಗೆ ಆಘಾತ ನೀಡಿ ಎಂಟರ ಘಟ್ಟ ತಲುಪಿದ್ದರು. ಮಧ್ಯಾಹ್ನ ೧೨.೦೦ಕ್ಕೆ ಆರಂಭವಾಗಲಿರುವ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಡೊಮಿನಿಕಾ ಸಿಬುಲ್ಕೋವಾ ಮತ್ತು ಅನಸ್ಟಾಸಿಯಾ ಸೆವಾಸ್ಟೋವಾ ಕಾದಾಡಲಿದ್ದರೆ, ಮಧ್ಯಾಹ್ನ ೨.೦೦ರ ಸುಮಾರಿಗೆ ನಡೆಯಲಿರುವ ಪಂದ್ಯದಲ್ಲಿ ಕರೋಲಿನ್ ವೋಜ್ನಿಯಾಕಿ ಹಾಗೂ ಕಟರಿನಾ ಸಿನಿಯಕೋವಾ ಸ್ಪರ್ಧಿಸಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More