ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್‌ಗೆ ನೊಬೆಲ್ ಶಾಂತಿ ಪುರಸ್ಕಾರ

ಅತ್ಯಾಚಾರ, ಲೈಂಗಿಕ ಕಿರುಕುಳವನ್ನು ಯುದ್ಧಾಸ್ತ್ರವಾಗಿ ಬಳಸುವುದರ ವಿರುದ್ಧದ ಹೋರಾಟಕ್ಕಾಗಿ ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಯುದ್ಧಪೀಡಿತ ಪ್ರದೇಶಗಳ ಕರಾಳ ಚಿತ್ರಣಗಳತ್ತ ಮತ್ತೊಮ್ಮೆ ಗಮನ ಹರಿದಿದೆ

ಅತ್ಯಾಚಾರ, ಲೈಂಗಿಕ ಕಿರುಕುಳವನ್ನು ಯುದ್ಧಾಸ್ತ್ರವಾಗಿ ಬಳಸುವುದರ ವಿರುದ್ಧದ ಹೋರಾಟಕ್ಕಾಗಿ ಡೆನಿಸ್ ಮುಕ್ವೀಜ್ ಮತ್ತು ನಾಡಿಯಾ ಮುರಾದ್ ಪ್ರಸಕ್ತ ಸಾಲಿನ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಯುದ್ಧದ ಸಂದರ್ಭದಲ್ಲಿ ಲೈಂಗಿಕ ದೌರ್ಜನ್ಯಗಳನ್ನು ಅಸ್ತ್ರವಾಗಿ ಬಳಸುವ ಯತ್ನಗಳನ್ನು ಕೊನೆಗೊಳಿಸಲು ಇವರಿಬ್ಬರು ಅವಿರತವಾಗಿ ಶ್ರಮಿಸಿದ್ದಾರೆ. ಇದಕ್ಕಾಗಿ ನೊಬೆಲ್ ಶಾಂತಿ ಪುರಸ್ಕಾರ ಸಮಿತಿ, ಮುಕ್ವೀಜ್ ಮತ್ತು ನಾಡಿಯಾ ಮುರಾದ್ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳಿಂದ ಚಿತ್ರಹಿಂಸೆ ಹಾಗೂ ಅತ್ಯಾಚಾರಕ್ಕೊಳಗಾಗಿದ್ದ ಎಂ ಎಸ್ ಮುರಾದ್, ಬಳಿಕ ಯಾಜಿಡಿ ಜನರನ್ನು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿ ಬೃಹತ್ ಅಭಿಯಾನವನ್ನೇ ಆರಂಭಿಸಿದ್ದರು. ಸ್ತ್ರೀರೋಗ ತಜ್ಞರಾಗಿರುವ ಡೆನಿಸ್ ಮುಕ್ವೀಜ್, ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದವರಿಗಾಗಿ ನೆರವು ನೀಡಿದ್ದರು.

ನಾಡಿಯಾ ಮುರಾದ್

ಇರಾಕ್‌ನಲ್ಲಿನ ಯಾಜಿದಿ ಅಲ್ಪಸಂಖ್ಯಾತ ಗುಂಪಿಗೆ ಸೇರಿದ್ದ ನಾಡಿಯಾ ಮುರಾದ್‌ರನ್ನು ಅಪಹರಿಸಿದ್ದ ಐಎಸ್ ಉಗ್ರರು, ಸತತ ಮೂರು ತಿಂಗಳ ಕಾಲ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಉಗ್ರರ ವಶದಲ್ಲಿದಷ್ಟು ಕಾಲ ಲೈಂಗಿಕ ದೌರ್ಜನ್ಯ ಮಾತ್ರವಲ್ಲದೆ, ದೈಹಿಕ ಹಿಂಸೆಗೆ ಒಳಗಾಗಿದ್ದ ಮುರಾದ್, ಉಗ್ರರ ಹಿಡಿತದಿಂದ ತಪ್ಪಿಸಿಕೊಂಡು ಹೊರಬಂದ ನಂತರ ಸ್ವತಃ ನೋವು ನುಂಗಿಕೊಂಡು ಎಲ್ಲವನ್ನು ಧೈರ್ಯದಿಂದ ಎದುರಿಸಿ, ಲೈಂಗಿಕ ಹಿಂಸಾಚಾರವನ್ನು ಯುದ್ಧಾಸ್ತ್ರವನ್ನಾಗಿ ಬಳಸುವುದರ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿದ್ದಾರೆ.

ಡೆನಿಸ್ ಮುಕ್ವೀಜ್

63ರ ಹರೆಯದ ಡೆನಿಸ್ ಮುಕ್ವೇಜ್, ಅತ್ಯಾಚಾರ ಸಂತ್ರಸ್ತರ ನೆರವಿಗಾಗಿ ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಸಹೋದ್ಯೋಗಿಗಳ ಜೊತೆಗೂಡಿ, 30 ಸಾವಿರಕ್ಕೂ ಅಧಿಕ ಮಂದಿ ಅತ್ಯಾಚಾರ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ್ದಾರೆ.

ಕೊರಿಯಾ ದ್ವೀಪದಲ್ಲಿ ಶಾಂತಿ ಸ್ಥಾಪನೆಗೆ ಮುಂದಾದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಸೇರಿದಂತೆ 331 ವ್ಯಕ್ತಿ ಹಾಗೂ ಸಂಘಸಂಸ್ಥೆಗಳು ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ರೇಸ್‌ನಲ್ಲಿ ನಾಮನಿರ್ದೇನಶಗೊಂಡಿದ್ದವು. ಯುದ್ದದ ಸಂದರ್ಭದಲ್ಲಿ ಲೈಂಗಿಕ ಹಿಂಸೆ ಹಾಗೂ ಸಶಸ್ತ್ರ ಸಂಘರ್ಘದ ವಿರುದ್ಧ ಹೋರಾಡಿದ ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್ ಅಂತಿಮವಾಗಿ ಆಯ್ಕೆಯಾಗಿದ್ದಾರೆ ಎಂದು ನೊಬೆಲ್ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More