ಫ್ಲಿಪ್ಕಾರ್ಟ್ ಬಿಬಿಡಿ ಉತ್ಸವ; ಶೇ.62ರಷ್ಟು ದರ ಇಳಿಸಿದ ಮೊಬೈಲ್ ಕಂಪನಿಗಳು

ಅ.11ರಿಂದ ಆರಂಭವಾಗಲಿರುವ ಫ್ಲಿಪ್ಕಾರ್ಟ್ ‘ಬಿಗ್ ಬಿಲಿಯನ್ ಡೇ’ ಮಾರಾಟ ಉತ್ಸವಕ್ಕಾಗಿ ಮೊಬೈಲ್ ಕಂಪನಿಗಳು ಸಿದ್ಧವಾಗಿದ್ದು, ಗರಿಷ್ಠ ಶೇ.62ರಷ್ಟು ದರ ಕಡಿತ ಮಾಡಲಿವೆ. ಸ್ಯಾಮ್ಸಂಗ್, ಪ್ಯಾನಸೋನಿಕ್, ಹ್ಯುವೆಯ್, ಆ್ಯಸುಸ್ ಸಹಿತ ಹಲವು ಕಂಪನಿಗಳು ರಿಯಾಯ್ತಿ ನೀಡಲಿವೆ

ಬೆಂಗಳೂರು ಮೂಲದ ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಅಕ್ಟೋಬರ್ 11ರಿಂದ ಆರಂಭಿಸಲಿರುವ ‘ಬಿಗ್ ಬಿಲಿಯನ್ ಡೇ’ ಮಾರಾಟ ಉತ್ಸವಕ್ಕಾಗಿ ಮೊಬೈಲ್ ಕಂಪನಿಗಳು ಸಿದ್ಧವಾಗಿದ್ದು, ಗರಿಷ್ಠ ಶೇ.62ರಷ್ಟು ದರ ಕಡಿತ ಮಾಡಲಿವೆ.

ಸ್ಯಾಮ್ಸಂಗ್ ತನ್ನ ಹೊಸ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ ಎಸ್8 ಮೇಲೆ ಭಾರಿ ರಿಯಾಯ್ತಿ ಘೋಷಿಸಿದೆ. 49,000 ರುಪಾಯಿಗಳ ಎಸ್8 ಮೇಲೆ 20,000 ರುಪಾಯಿ ರಿಯಾಯ್ತಿ ನೀಡಲಿದ್ದು, 29,000 ರುಪಾಯಿಗೆ ಮಾರಾಟ ಮಾಡಲಿದೆ.

ಪ್ಯಾನಸೋನಿಕ್ ಕಂಪನಿಯು ತನ್ನ 4ಜಿ ಸ್ಮಾರ್ಟ್ ಫೋನ್ ಪಿ91 ಮೇಲೆ ಶೇ.62ರಷ್ಟು ರಿಯಾಯ್ತಿ ಘೋಷಿಸಿದೆ. ಈಗ 3,999 ರುಪಾಯಿಗೆ ಫ್ಲಿಪ್ಕಾರ್ಟ್ ಸ್ಪರ್ಧಿ ಅಮೆಜಾನ್‌ನಲ್ಲಿ ಲಭ್ಯವಾಗುತ್ತಿರುವ ಪಿ91 ಬಿಗ್ ಬಿಲಿಯನ್ ಡೇ ವೇಳೆ ಖರೀದಿ ಮಾಡಿದಾಗ 2,990 ರುಪಾಯಿಗೆ ನೀಡಲಿದೆ.

ಹ್ಯೂವೆಯ್ ಕಂಪನಿಯು ತನ್ನ ಆನರ್ ಬ್ರಾಂಡ್ 4ಜಿ ಸ್ಮಾರ್ಟ್‌ಫೋನ್ ಮೇಲಿನ ದರವನ್ನು 500-8000 ರುಪಾಯಿಗಳವರೆಗೆ ಕಡಿತ ಮಾಡಿದೆ. ತನ್ನ ಹೈ ಎಂಡ್ ಸ್ಮಾರ್ಟ್ ಫೋನ್ ಆನರ್ 8 ಮೇಲೆ 8,000 ರುಪಾಯಿ ರಿಯಾಯ್ತಿ ಘೋಷಿಸಿದೆ.

ಆ್ಯಸುಸ್ ತನ್ನ ಹೊಸ 4ಜಿ ಸ್ಮಾರ್ಟ್‌ಫೋನ್ ಮೇಲೆ 1000-2000 ರಿಯಾಯ್ತಿ ಘೋಷಿಸಿದೆ. 10,000ಕ್ಕಿಂತ ಕಡಮೆ ದರದ ವರ್ಗದ ಸ್ಮಾರ್ಟ್‌ಫೋನ್‌ಗಳ ಮೇಲೂ ಭಾರಿ ರಿಯಾಯ್ತಿ ಇದೆ. ಒಪ್ಪೊ ತನ್ನ ಉಪ ಬ್ರಾಂಡ್‌ಗಳಾದ ರಿಯಲ್ ಮಿ, ಟ್ರಾನ್ಸಿಷನ್ ಇನ್ಫಿನಿಕ್ಸ್, ಒಪ್ಪೊ ಎ71 ಸ್ಮಾರ್ಟ್‌ಫೋನ್‌ಗಳನ್ನು 2,000ದಿಂದ 4,000ದರಷ್ಟು ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಿದೆ.

ಕಳೆದ ವರ್ಷ ಹಬ್ಬದ ದಿನಗಳಿಂದೀಚೆಗೆ ಸ್ಮಾರ್ಟ್‌ಫೋನ್‌ಗಳ ಮಾರಾಟವು ಶೇ.100ರಷ್ಟು ಹೆಚ್ಚಳವಾಗಿದೆ ಎಂದು ಫ್ಲಿಪ್ಕಾರ್ಟ್ ಹೇಳಿಕೊಂಡಿದೆ. “ಬಜೆಟ್ ಸ್ಮಾರ್ಟ್‌ಫೋನ್‌ ನಮ್ಮಲ್ಲಿ ಅತಿ ತ್ವರಿತವಾಗಿ ಮಾರಾಟವಾಗುತ್ತಿವೆ. ಕಳೆದೊಂದು ವರ್ಷದಲ್ಲಿ ಶೇ.100ರಷ್ಟು ಮಾರಾಟ ವೃದ್ದಿಸಿದೆ. ಜನರು ತಾಂತ್ರಿಕ ಉನ್ನತೀಕರಣಗೊಂಡ ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳನ್ನು ಬಯಸುತ್ತಿದ್ದಾರೆ,” ಎನ್ನುತ್ತಾರೆ ಫ್ಲಿಪ್ಕಾರ್ಟ್ ಮೊಬೈಲ್ ಮಾರಾಟ ವಿಭಾಗದ ಹಿರಿಯ ನಿರ್ದೇಶಕ ಅಯ್ಯಪ್ಪನ್ ರಾಜಗೋಪಾಲ್.

ಇದನ್ನೂ ಓದಿ : ಪೈಪೋಟಿಗೆ ಇಳಿದ ಫ್ಲಿಪ್‌ಕಾರ್ಟ್, ಅಮೆಜಾನ್; ಖರೀದಿದಾರರಿಗೆ ಸುಗ್ಗಿ

ಅಯ್ಯಪ್ಪನ್ ರಾಜಗೋಪಾಲ್ ಅವರ ಪ್ರಕಾರ, ಆನ್ಲೈನ್‌ನಲ್ಲಿ ಮಾರಾಟವಾಗುವ ಸ್ಮಾರ್ಟ್‌ಫೋನ್‌ ಪೈಕಿ ಶೇ.65ರಷ್ಟು ಫ್ಲಿಪ್ಕಾರ್ಟ್‌ನಲ್ಲೇ ಮಾರಾಟವಾಗುತ್ತಿವೆ. ಈ ಪ್ರಮಾಣವು ಬಿಗ್ ಬಿಲಿಯನ್ ಡೇ ಮಾರಾಟ ಉತ್ಸವದ ನಂತರ ಶೇ.70-75ರಷ್ಟಾಗಲಿದೆ.

ಪಿಟಿಐ ವರದಿ ಪ್ರಕಾರ, ಅಕ್ಟೋಬರ್ 10ರಂದು ಮಧ್ಯರಾತ್ರಿಯಿಂದಲೇ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇ ಮಾರಾಟ ಪ್ರಾರಂಭವಾಗಲಿದೆ. ಸ್ಮಾರ್ಟ್‌ಫೋನ್‌ಗಳ ಮಾರಾಟವು ಮಾರನೇ ದಿನ ಆರಂಭವಾಗಲಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More