ಮಾರ್ನಿಂಗ್ ಡೈಜೆಸ್ಟ್‌ | ಇಂದು ನೀವು ಗಮನಿಸಬೇಕಾದ 3 ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ಉಪಚುನಾವಣೆ; ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸಭೆ

ಮೂರು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ ೩ರಂದು ನಡೆಯುವ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಸಂಬಂಧ ಕಾಂಗ್ರೆಸ್ ಮತ್ತು ಬಿಜೆಪಿ ಮಂಗಳವಾರ ಮಹತ್ವದ ಸಭೆ ನಡೆಸಲಿವೆ. ಜಿಲ್ಲಾ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಸಭೆಗೆ ರಾಜ್ಯ ಉಸ್ತುವಾರಿಯಾದ ಕೆ ಸಿ ವೇಣುಗೋಪಾಲ್ ಆಗಮಿಸಲಿದ್ದಾರೆ.

ಹರ್ಯಾಣಕ್ಕೆ ಭೇಟಿ ಕೊಡಲಿದ್ದಾರೆ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಹರ್ಯಾಣಕ್ಕೆ ಭೇಟಿ ನೀಡಲಿದ್ದು, ಜಾಟ್ ಸಮುದಾಯದ ನಾಯಕ ಹಾಗೂ ರಾಜಕಾರಿಣಿ ಸರ್ ಚೋಟು ರಾಮ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಿದ್ದಾರೆ. ಸರ್ ಚೋಟು ರಾಮ್ ಅವರ ೬೪ ಅಡಿ ಎತ್ತರದ ಪುತ್ಥಳಿಯನ್ನು ಅವರ ಮೂಲ ಗ್ರಾಮ ರೋಹ್ಟಕ್ ಜಿಲ್ಲೆಯ ಗಹ್ರಿ ಸಂಪ್ಲಾದಲ್ಲಿ ನಿರ್ಮಾಣ ಮಾಡಲಾಗಿದೆ.

ಪಾಕ್ ವಿರುದ್ಧ ಮರು ಹೋರಾಟಕ್ಕಿಳಿದ ಕಾಂಗರೂ

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮರು ಹೋರಾಟ ಕುತೂಹಲ ಕೆರಳಿಸಿದೆ. ಮೊಹಮದ್ ಹಫೀಜ್ (೧೨೬) ಶತಕದ ಬಳಿಕ ಹ್ಯಾರಿಸ್ ಸೊಹೈಲ್ (೧೧೦) ದಾಖಲಿಸಿದ ಶತಕದ ನೆರವಿನಿಂದ ಪಾಕಿಸ್ತಾನ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ೪೮೨ ರನ್‌ಗಳಿಗೆ ಆಲೌಟ್ ಆಗಿದ್ದು, ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ, ಎರಡನೇ ದಿನಾಂತ್ಯಕ್ಕೆ ೧೩ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ೩೦ ರನ್ ಮಾಡಿತ್ತು. ಆರಂಭಿಕರಾದ ಏರಾನ್ ಫಿಂಚ್ (೧೩) ಮತ್ತು ಉಸ್ಮಾನ್ ಖವಾಜ ೧೭ ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ. ಈ ಜೋಡಿಯ ಜೊತೆಯಾಟ ಮಾತ್ರವಲ್ಲದೆ, ಮಧ್ಯಮ ಕ್ರಮಾಂಕಿತ ಆಟಗಾರರು ನೀಡುವ ಪ್ರದರ್ಶನವೂ ಆಸೀಸ್‌ಗೆ ನಿರ್ಣಾಯಕವಾಗಿದೆ. ಏತನ್ಮಧ್ಯೆ, ಪಾಕ್ ಬೌಲರ್‌ಗಳು ಕಾಂಗರೂ ಕಾಲೆಳೆಯಲು ಸಜ್ಜಾಗಿದ್ದು, ಮೂರನೇ ದಿನದಾಟ ಕುತೂಹಲ ಕೆರಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More