ಮಾರ್ನಿಂಗ್ ಡೈಜೆಸ್ಟ್‌ | ಇಂದು ನೀವು ಗಮನಿಸಬೇಕಾದ ೪ ಪ್ರಮುಖ ಸುದ್ದಿಗಳು  

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ  

ರಫೇಲ್ ಒಪ್ಪಂದ; ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ

ಫ್ರಾನ್ಸ್ ಹಾಗೂ ಭಾರತ ದೇಶಗಳ ನಡುವೆ ಯುಪಿಎ ಆಡಳಿತ ಅವಧಿಯಲ್ಲಿ ಹಾಗೂ ಎನ್‌ಡಿಎ ಆಡಳಿತ ಅವಧಿಯಲ್ಲಿ ನಡೆದ ನಡೆದ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿವರಗಳನ್ನು ಬಹಿರಂಗಪಡಿಸಲು ಕೇಂದ್ರ ಹಿಂದೇಟು ಹಾಕಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬುಧವಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ , ನ್ಯಾಯಮೂರ್ತಿ ಎಸ್ ಕೆ ಕೌಲ್ ಹಾಗೂ ಕೆ ಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದ್ದು ಅರ್ಜಿಯನ್ನು ವಕೀಲ ವಿನೀತ್ ದಂಡಾ ಸಲ್ಲಿಸಿದ್ದರು.

ನವರಾತ್ರಿ ಸಂಭ್ರಮ ಆರಂಭ

ವಿಶ್ವ ಪ್ರಸಿದ್ಧ ದಸರಾ ಬುಧವಾರದಿಂದ ಅಕ್ಟೋಬರ್ ೧೯ರ ವರೆಗೆ ನಡೆಯಲಿದೆ. ಇನ್ಫೋಸಿಸ್ ಸಹಸಂಸ್ಥಾಪಕಿ ಸುಧಾಮೂರ್ತಿ ಚಾಮುಂಡಿ ಬೆಟ್ಟದಲ್ಲಿ ಪೂಜೆ ನೆರವೇರಿಸಿ ನವರಾತ್ರಿ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ದಿನವಿಡೀ ವಿವಿಧ ಕಾರ್ಯಕ್ರಮಗಳ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ತೆಲಂಗಾಣ ವಿಧಾನಸಭಾ ಚುನಾವಣಾ; ಕಾರ್ಯಕರ್ತರ ಜತೆ ಅಮಿತ್ ಶಾ ಸಭೆ

ತೆಲಂಗಾಣದ ಮುಂಬರುವ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಧವಾರ ನಗರದ ಕರೀಂನಗರಕ್ಕೆ ಭೇಟಿ ನೀಡಲಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ.

ರೋಜರ್ ಫೆಡರರ್ ಇಂದು ಕಣಕ್ಕೆ

೨೦ ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ರೋಜರ್ ಫೆಡರರ್ ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಇಂದು ಕಣಕ್ಕಿಳಿಯಲಿದ್ದಾರೆ. ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದ ಅವರು, ರಷ್ಯನ್ ಆಟಗಾರ ಡ್ಯಾನಿಲ್ ಮೆಡ್ವದೆವ್ ವಿರುದ್ಧ ಸೆಣಸಲಿದ್ದಾರೆ. ಪಂದ್ಯ ಇಂದು ಸಂಜೆ ೫.೦೦ರ ಸುಮಾರಿಗೆ ಶುರುವಾಗುವ ಸಾಧ್ಯತೆ ಇದೆ. ಮೊದಲ ಸುತ್ತಿನಲ್ಲಿ ಮೆಡ್ವದೆವ್ ಚೀನಿ ಆಟಗಾರ ಜಾಂಗ್ ಜೀ ವಿರುದ್ಧ ೩-೬, ೭-೬ (೯/೭), ೬-೪ ಸೆಟ್‌ಗಳಿಂದ ಗೆಲುವು ಸಾಧಿಸಿದರು. ಸ್ಪೇನ್ ಆಟಗಾರ ರಾಫೇಲ್ ನಡಾಲ್ ಈ ಪಂದ್ಯಾವಳಿಗೆ ಅಲಭ್ಯವಾಗಿರುವ ಕಾರಣ ಹಾಲಿ ಚಾಂಪಿಯನ್‌ ರೋಜರ್ ಫೆಡರರ್ ಮತ್ತೊಮ್ಮೆ ಫೇವರಿಟ್ ಆಗಿದ್ದು, ಸರ್ಬಿಯಾ ಆಟಗಾರ ನೊವಾಕ್ ಜೊಕೊವಿಚ್ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More