ಮಾರ್ನಿಂಗ್ ಡೈಜೆಸ್ಟ್‌ | ಇಂದು ನೀವು ಗಮನಿಸಬೇಕಾದ 3 ಪ್ರಮುಖ ಸುದ್ದಿಗಳು

ನೀವು ಗಮನಿಸಲೇಬೇಕಾದ ಇಂದಿನ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ

ನ್ಯಾ.ಎ ಜೆ ಸದಾಶಿವ ವರದಿ ಕುರಿತು ಸಿಎಂ ಎಚ್‌ಡಿಕೆ ಸಭೆ

ಒಳ ಮೀಸಲಾತಿಗೆ ಸಂಬಂಧಿಸಿದ ನ್ಯಾ.ಎ ಜೆ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಹಲವು ರೀತಿಯ ಹೋರಾಟಗಳು ನಡೆಯುತ್ತಿರುವ ನಡುವೆಯೇ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ವರದಿಯ ಸಂಬಂಧ ಮುಂದಿನ ಕ್ರಮಗಳ ಕುರಿತಾಗಿ ವಿವಿಧ ಸಚಿವರು, ಸಂಸದರು ಹಾಗೂ ಶಾಸಕರ ಸಭೆ ನಡೆಸಲಿದ್ದಾರೆ.

ರಫೇಲ್ ಉತ್ಪಾದನಾ ಘಟಕಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

ಭಾರತ ಹಾಗೂ ಫ್ರಾನ್ಸ್ ದೇಶಗಳ ನಡುವಿನ ರಫೇಲ್ ಒಪ್ಪಂದ ಬಗೆಗೆ ಎದ್ದಿರುವ ವಿವಾದಗಳ ನಡುವೆಯೇ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಫ್ರಾನ್ಸ್‌ಗೆ ಭೇಟಿ ನೀಡಿದ್ದು, ಪ್ಯಾರಿಸ್ ಹತ್ತಿರ ಇರುವ ರಫೇಲ್ ಉತ್ಪಾದನಾ ಘಟಕವಾದ ರಫೇಲ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿಗೆ ಶುಕ್ರವಾರ ಭೇಟಿ ನೀಡಲಿದ್ದಾರೆ. ಸೀತಾರಾಮನ್ ಅವರು ಫ್ರಾನ್ಸ್‌ನಲ್ಲಿ ಇದ್ದ ಸಂದರ್ಭದಲ್ಲಿಯೇ ಗುರುವಾರ ಡಸಾಲ್ಟ್ ಏವಿಯೇಶನ್ ಕಂಪನಿಯು, ರಫೇಲ್ ಒಪ್ಪಂದಲ್ಲಿ ರಿಲಯನ್ಸ್ ಡಿಫೆನ್ಸ್ ಜೊತೆಗಿನ ಪಾಲುದಾರಿಕೆಯ ಆಯ್ಕೆ ಮುಕ್ತವಾಗಿತ್ತು ಎಂದು ಹೇಳಿಕೆ ನೀಡಿತ್ತು.

ನಿಶಿಕೊರಿ, ಫೆಡರರ್ ಹಣಾಹಣಿಗೆ ಕ್ಷಣಗಣನೆ

ಜಪಾನ್‌ನ ಯುವ ಆಟಗಾರ ಕೀ ನಿಶಿಕೊರಿ ಮತ್ತು ಸ್ವಿಸ್ ಮಾಸ್ಟರ್ ರೋಜರ್ ಫೆಡರರ್ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ. ಶಾಂಘೈ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಇಂದು ಸಂಜೆ ಸುಮಾರು ೪.೩೦ರ ಹೊತ್ತಿಗೆ ಆರಂಭವಾಗಲಿರುವ ಪಂದ್ಯದಲ್ಲಿ ಫೆಡರರ್ ಸೆಮಿಫೈನಲ್ ತಲುಪುವ ಗುರಿ ಹೊತ್ತಿದ್ದಾರೆ. ಹಾಲಿ ಚಾಂಪಿಯನ್ ಹಾಗೂ ೨೦ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ಫೆಡರರ್‌ಗೆ ಆಘಾತ ನೀಡಿ ನಾಲ್ಕರ ಘಟ್ಟ ತಲುಪುವ ಗುರಿ ನಿಶಿಕೊರಿ ಅವರದ್ದು. ಇನ್ನು, ಟೂರ್ನಿಯ ಇನ್ನುಳಿದ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ನೊವಾಕ್ ಜೊಕೊವಿಚ್, ಕೆವಿನ್ ಆಂಡರ್ಸನ್ ನಡುವೆ ಪಂದ್ಯ ನಡೆಯಲಿದ್ದು, ಟೆನಿಸ್ ಪ್ರೇಮಿಗಳ ಆಸಕ್ತಿ ಕೆರಳಿಸಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More