ಇಂದಿನ ಡೈಜೆಸ್ಟ್ | ನೀವು ಗಮನಿಸಲೇಬೇಕಾದ ಇತರ ಪ್ರಮುಖ ಸುದ್ದಿಗಳು

ಇಂದು ಓದಲೇಬೇಕಾದ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಯುವ ಒಲಿಂಪಿಕ್ಸ್: ಭಾರತ ಫೈನಲ್‌ಗೆ

ಅರ್ಜೆಂಟೀನಾದ ಬ್ಯೂನಸ್ ಐರಿಸ್‌ನಲ್ಲಿ ನಡೆಯುತ್ತಿರುವ ಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷ ಮತ್ತು ವನಿತೆಯರ ಎರಡೂ ವಿಭಾಗಗಳಲ್ಲಿ ಭಾರತ ಫೈನಲ್ ತಲುಪಿದೆ. ಪುರುಷರ ವಿಭಾಗದಲ್ಲಿ ಆತಿಥೇಯ ಅರ್ಜೆಂಟೀನಾ ತಂಡವನ್ನು ಭಾರತದ ಪುರುಷರ ತಂಡ ೩-೧ ಗೋಲುಗಳಿಂದ ಮಣಿಸಿದರೆ, ವನಿತೆಯರ ವಿಭಾಗದ ಸೆಮಿಫೈನಲ್‌ನಲ್ಲಿ ಚೀನಾ ವನಿತಾ ತಂಡವನ್ನು ೩-೦ ಗೋಲುಗಳಿಂದ ಮಣಿಸಿತು. ಸುದೀಪ್ ಚಿರ್ಮಾಕೊ (೧೨ ಮತ್ತು ೧೮ನೇ ನಿ.), ರಾಹುಲ್ ಕುಮಾರ್ ರಜ್ಭಾರ್ (೩ನೇ ನಿ.) ಗೋಲು ಬಾರಿಸಿದರೆ, ಅರ್ಜೆಂಟೀನಾ ಪರ ಫಾಕುಂಡೊ ಜರಾಟೆ ಒಂದು ಗೋಲು ದಾಖಲಿಸಿದರು. ಮುಮ್ತಾಜ್ ಖಾನ್, ರೀತ್ ಮತ್ತು ಲಾಲ್ರೆಮ್‌ಸಿಯಾಮಿ ತಲಾ ಒಂದೊಂದು ಗೋಲು ದಾಖಲಿಸಿದರು. ಚಿನ್ನದ ಪದಕಕ್ಕಾಗಿ ನಡೆಯಲಿರುವ ಫೈನಲ್‌ನಲ್ಲಿ ಭಾರತ ಪುರುಷರ ತಂಡ ಮಲೇಷ್ಯಾ ತಂಡವನ್ನು ಮಣಿಸಲಿದ್ದರೆ, ವನಿತೆಯರ ವಿಭಾಗದಲ್ಲಿ ಅರ್ಜೆಂಟೀನಾ ತಂಡವನ್ನು ಭಾರತ ವನಿತಾ ತಂಡ ಎದುರಿಸಲಿದೆ.

ಸ್ಯಾಂಟೊ ಡೊಮಿಂಗೊ ಪ್ರಶಸ್ತಿ ಜಯಿಸಿದ ಪೇಸ್

ಭಾರತದ ಡಬಲ್ಸ್ ಆಟಗಾರ ಲಿಯಾಂಡರ್ ಪೇಸ್ ಸ್ಯಾಂಟೊ ಡೊಮಿಂಗೊ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಆ ಮೂಲಕ ಈ ಋತುವಿನಲ್ಲಿ ೪೫ರ ಹರೆಯದ ಪೇಸ್ ಎರಡನೇ ಪ್ರಶಸ್ತಿಯನ್ನು ಜಯಿಸಿದರು. ಮೆಕ್ಸಿಕೊ ಆಟಗಾರ ಮಿಗುಯೆಲ್ ಏಂಜೆಲ್ ರೆಯೆಸ್ ವರೆಲಾ ಅವರೊಂದಿಗೆ ಇಂದು ನಡೆದ ಪುರುಷರ ಡಬಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಏರಿಯೆಲ್ ಬೆಹಾರ್ ಮತ್ತು ರಾಬೆರ್ಟೊ ಕಿರೋಜ್ ಜೋಡಿಯನ್ನು ೪-೬, ೬-೩, ೧೦-೫ ಸೆಟ್‌ಗಳಲ್ಲಿ ಮಣಿಸಿದರು. ಒಂದು ತಾಸು, ೨೬ ನಿಮಿಷಗಳ ಹಣಾಹಣಿಯಲ್ಲಿ ಪೇಸ್ ಜೋಡಿ ಮೊದಲ ಸೆಟ್‌ನಲ್ಲಿ ಸೋಲನುಭವಿಸಿದರೂ, ಅದ್ಭುತಕರವಾಗಿ ಪುಟಿದೆದ್ದು ಜಯ ಪಡೆಯಿತು. ೬೯ನೇ ಶ್ರೇಯಾಂಕಿತ ಪೇಸ್ ೧೧೦ ರೇಟಿಂಗ್ ಪಾಯಿಂಟ್ಸ್‌ಗಳೊಂದಿಗೆ ೭೭೫೦ ಡಾಲರ್ ಅನ್ನು ಜತೆಯಾಟಗಾರನೊಂದಿಗೆ ಸಮನಾಗಿ ಹಂಚಿಕೊಂಡರು.

ಯುವ ಒಲಿಂಪಿಕ್ಸ್‌ನಲ್ಲಿ ಸಿಮ್ರನ್‌ಗೆ ಬೆಳ್ಳಿ ಪದಕ

ಭಾರತದ ಯುವ ಮಹಿಳಾ ಕುಸ್ತಿಪಟು ಸಿಮ್ರನ್ ಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಜಯಿಸಿದರು. ೨೦೧೭ರ ಕೆಡೆಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ೪೦ ಕೆಜಿ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಸಿಮ್ರನ್, ಇಂದು ಅಮೆರಿಕದ ಎಮಿಲಿ ಶಿಲ್ಸನ್ ಎದುರು ೪೩ ಕೆಜಿ ವಿಭಾಗಾದ ಫೈನಲ್‌ನಲ್ಲಿ ಸೋಲನುಭವಿಸಿ ರಜತ ಪದಕಕ್ಕೆ ತೃಪ್ತರಾದರು. ತಾಂತ್ರಿಕವಾಗಿ ಗಮನಾರ್ಹ ಪ್ರದರ್ಶನ ನೀಡಿದ ಅಮೆರಿಕದ ಎಮಿಲಿ, ೧೧-೬ರಿಂದ ಭಾರತೀಯ ರೆಸ್ಲರ್‌ಗೆ ಸೋಲುಣಿಸಿದರು. ಮೊದಲ ಅವಧಿಯಲ್ಲಿ ೨-೯ರಿಂದ ಎಮಿಲಿಗೆ ಮುನ್ನಡೆ ಬಿಟ್ಟುಕೊಟ್ಟ ಸಿಮ್ರನ್, ಆಗಲೇ ತನ್ನ ಸೋಲನ್ನು ಖಚಿತಪಡಿಸಿದ್ದರು. ಆದಾಗ್ಯೂ, ಎರಡನೇ ಅವಧಿಯಲ್ಲಿ ಸಿಮ್ರನ್ ತುಸು ಪ್ರತಿರೋಧ ನೀಡಿದರೂ, ನಂತರದ ನಿರ್ಣಾಯಕ ಹಣಾಹಣಿಯಲ್ಲಿ ಎಮಿಲಿ ಆಕ್ರಮಣಕಾರಿತನಕ್ಕೆ ಸಿಮ್ರನ್ ಮಣಿಯಲೇಬೇಕಾಯಿತು. ಸಿಮ್ರನ್ ಜಯಿಸಿದ ಬೆಳ್ಳಿ ಪದಕ ಭಾರತಕ್ಕೆ ಐದನೇ ರಜತ ಪದಕವಾಗಿದೆ. ಮೂರು ಚಿನ್ನ ಸೇರಿದಂತೆ ಶಟ್ಲರ್ ಲಕ್ಷ್ಯ ಸೇನ್, ಶೂಟರ್ ಮನು ಭಾಕರ್ ಹಾಗೂ ಜೂಡೊ ಸ್ಪರ್ಧಿ ತಬಾಬ ದೇವಿ ಕೂಡ ಬೆಳ್ಳಿ ಪದಕ ಜಯಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More