ಲೈಂಗಿಕ ಶೋಷಣೆ ಆರೋಪ; ಕೊನೆಗೂ ರಾಜೀನಾಮೆ ಕೊಟ್ಟ ಕೇಂದ್ರ ಸಚಿವ ಎಂ ಜೆ ಅಕ್ಬರ್‌

ಕೇಂದ್ರ ಸಚಿವರಾಗಿದ್ದ ಎಂ ಜೆ ಅಕ್ಬರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ಹಿಂದೆ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲೆ ಕೇಳಿಬಂದಿತ್ತು

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಎಂ ಜೆ ಅಕ್ಬರ್‌ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಆ ಮೂಲಕ ತಮ್ಮ ಮೇಲೆ ಕೇಳಿ ಬಂದಿರುವ ಆರೋಪದ ವಿರುದ್ಧ ನ್ಯಾಯಲಯದಲ್ಲಿ ಹೋರಾಡುವುದಾಗಿ ತಿಳಿಸಿದ್ದಾರೆ. ಅಕ್ಬರ್ ಅವರು ಈ ಹಿಂದೆ ಸಂಪಾದಕರಾಗಿದ್ದಾಗ‌ ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮುಜುಗರ ತಪ್ಪಿಸಲು ರಾಜಿನಾಮೆ ನಿರ್ಧಾರವನ್ನು ಅಕ್ಬರ್‌ ಅವರು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರೊಬ್ಬರು ತಮ್ಮ ಮೇಲೆ ಆಪಾದನೆಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜಿನಾಮೆ ನೀಡಿದ್ದಾರೆ. ಅಕ್ಬರ್‌ ಅವರು ಎರಡು ವರ್ಷಗಳ ಹಿಂದೆಯಷ್ಟೇ ವಿದೇಶಾಂಗ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಎಂ ಜೆ ಅಕ್ಬರ್‌ ಅವರು ಏಷ್ಯನ್‌‌ ಏಜ್‌ ಸಂಪಾದಕರಾಗಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಪತ್ರಕರ್ತೆ ಪ್ರಿಯಾ ರಮಣಿ ಅವರು #MeToo ಅಭಿಯಾನದ ಮೂಲಕ ಮೊದಲ ಬಾರಿ ಗಂಭೀರ ಆರೋಪ ಮಾಡಿದ್ದರು. ಆ ನಂತರ ಸುಮಾರು 20 ಪತ್ರಕರ್ತೆಯರು ಅಕ್ಬರ್‌ ಜೊತೆಗಿನ ತಮ್ಮ ಕಹಿ ಅನುಭವವನ್ನು ಮಾಧ್ಯಮಗಳು ಮತ್ತು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು. ಶುಮಾ ರಹಾ, ಗಜಾಲಾ ವಹಾಬ್‌ ಮತ್ತು ಶುತಪ ಪೌಲ್ ಮೊದಲಾದವರು ಎಂ ಜೆ ಅಕ್ಬರ್ ಹೊಟೇಲ್‌ ಕೋಣೆಗಳಲ್ಲಿ ಸಂದರ್ಶನಗಳನ್ನು ಮಾಡುವುದು ಅಥವಾ ತಮ್ಮ ಕೋಣೆಗೆ ಏಕಾಂತದಲ್ಲಿ ಮಹಿಳಾ ಪತ್ರಕರ್ತೆಯರನ್ನು ಕರೆದು ಅಸಭ್ಯವಾಗಿ ವರ್ತಿಸಿರುವ ವಿವರಗಳನ್ನು ನೀಡಿದ್ದರು. ಅಕ್ಬರ್ ಈ ಹಿಂದೆ ‘ದಿ ಟೆಲಿಗ್ರಾಫ್‌’, ‘ಏಷ್ಯನ್ ಏಜ್‌’ ಮತ್ತು ‘ದಿ ಸಂಡೆ ಗಾರ್ಡಿಯನ್‌’ ಮೊದಲಾದ ಸುದ್ದಿಪತ್ರಿಕೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಮಿಟು’ ಅಭಿಯಾನಕ್ಕೆ ಬಲಿಯಾದ ಅತ್ಯಂತ ಉನ್ನತ ಹುದ್ದೆಯಲ್ಲಿರುವ ಮೊದಲ ವ್ಯಕ್ತಿಯಾಗಿ ಅಕ್ಬರ್‌ ದಾಖಲಾಗಿದ್ದಾರೆ.

ಪ್ರಿಯಾ ರಮಣಿ ಆರೋಪದ ವಿರುದ್ಧ ದೆಹಲಿಯ ಪಟಿಯಾಲ ಹೌಸ್‌ ಕೋರ್ಟ್‌ನಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ಹೂಡಿರುವ ಅಕ್ಬರ್‌ ಅವರು ತಮ್ಮ ಮೇಲೆ ಕೇಳಿಬಂದಿರುವ ಆರೋಪಗಳು ಆಧಾರರಹಿತವಾಗಿವೆ ಎಂದಿದ್ದರು. ಅಕ್ಬರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಮಣಿ ಅವರು ತಾವೂ ಸಹ ಪ್ರತಿ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಅಕ್ಬರ್‌ ರಾಜಿನಾಮೆಯ ಬಗ್ಗೆ ಪ್ರತಿಕ್ರಿಯಿಸಿರುವ ಪತ್ರಕರ್ತೆ ಪ್ರಿಯಾ ರಮಣಿ ಅವರು, “ಎಂ ಜೆ ಅಕ್ಬರ್‌ ರಾಜಿನಾಮೆ ತಮ್ಮಂತಹ ಮಹಿಳೆಯರಿಗೆ ಸಮಾಧಾನ ತಂದಿದೆ. ನ್ಯಾಯಲಯದಲ್ಲಿ ನ್ಯಾಯ ಸಿಗುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ,” ಎಂದಿದ್ದಾರೆ.

ಈ ಎಲ್ಲ ಬೆಳವಣಿಗಗಳ ನಡುವೆಯೇ ಕೇಂದ್ರ ಸಚಿವರ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಪ್ರಮುಖವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಕ್ಬರ್‌ ವಿರುದ್ಧ ಮಂಗಳವಾರ ಮಧ್ಯಪ್ರದೇಶದಲ್ಲಿ ಟೀಕೆಗಳ ಸುರಿಮಳೆಯನ್ನೇ ಗೈದಿದ್ದರು. ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಅಕ್ಬರ್‌ ವಿಚಾರ ವಿರೋಧ ಪಕ್ಷಗಳ ಪ್ರಚಾರ ಸಾಮಗ್ರಿಯಾಗಬಹುದು ಎಂಬುದನ್ನು ಅರಿತಂತಿರುವ ಬಿಜೆಪಿ ಹೈಕಮಾಂಡ್ ಮುಜುಗರ ತಪ್ಪಿಸಿಕೊಳ್ಳಲು‌ ಅಕ್ಬರ್‌ ರಾಜೀನಾಮೆ ಪಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ರಮಣಿ ವಿರುದ್ಧ ಅಕ್ಬರ್‌ ಅವರು ಹೂಡಿರುವ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯ ವಿಚಾರಣೆ ಗುರುವಾರದಿಂದ ಆರಂಭವಾಗಲಿದೆ.

ಇದನ್ನೂ ಓದಿ : #MeToo | ಭಾರತದಲ್ಲಿ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾದ ಪ್ರಮುಖರ ಪಟ್ಟಿ
ಇದನ್ನೂ ಓದಿ : #MeToo | ಸಚಿವ ಅಕ್ಬರ್ ವಿರುದ್ಧ ಕಾನೂನು ಸಮರಕ್ಕೆ ಸಜ್ಜಾದ ಪತ್ರಕರ್ತೆಯರು
ಇದನ್ನೂ ಓದಿ : ಸಚಿವ ಎಂ ಜೆ ಅಕ್ಬರ್ ಮೇಲೆ ಲೈಂಗಿಕ ಲಂಪಟತನ ಪ್ರದರ್ಶಿಸಿದ ಮತ್ತೊಂದು ಆರೋಪ
ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಕೇಂದ್ರ ಸಚಿವ ಅಕ್ಬರ್ ಕುತ್ತಿಗೆ ಬಿಗಿಯುತ್ತಿದೆ #MeToo ಕುಣಿಕೆ
ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ಲೈಂಗಿಕ ದುರುಳರನ್ನು ಕಾಡುತ್ತಿರುವ #MeToo ಬಾಣ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More