ಪ್ರಧಾನಿ ನರೇಂದ್ರ ಮೋದಿ ಮುಂದಿರುವ ಅತಿದೊಡ್ಡ ಸವಾಲು ಯಾವುದು ಗೊತ್ತೇ?

ಇದುವರೆಗಿನ ಜಿಡಿಪಿ ಅಂಕಿ-ಅಂಶಗಳು ಭಾರತವು ಜಗತ್ತಿನ ತ್ವರಿತಗತಿ ಆರ್ಥಿಕ ಅಭಿವೃದ್ಧಿ ದಾಖಲಿಸುತ್ತಿರುವ ದೇಶ ಎಂಬುದನ್ನು ಸಾರಿ ಹೇಳುತ್ತಿವೆ. ಆದರೆ, ದೇಶದ ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿಲ್ಲ. ಕುಸಿಯುತ್ತಿರುವ ರುಪಾಯಿ, ಏರುತ್ತಿರುವ ತೈಲಬೆಲೆ ಮತ್ತು ಜನರ ಸಂಕಷ್ಟಗಳನ್ನು ದುಪಟ್ಟು ಮಾಡಿವೆ

2014ರ ಚುನಾವಣೆಯಲ್ಲಿ ದೇಶದ ಆರ್ಥಿಕ ಪ್ರಗತಿಯ ಕನಸುಗಳನ್ನು ಬಿತ್ತಿ ಮತಗಳ ಸಮೃದ್ಧ ಬೆಳೆ ಬೆಳೆದ ನರೇಂದ್ರ ಮೋದಿ ತಮ್ಮ ರಾಜಕೀಯ ಜೀವನದ ಅತಿ ದೊಡ್ಡ ಸವಾಲು ಎದುರಿಸುತ್ತಿದ್ದಾರೆ. ಅದು ರಾಜಕೀಯ ಸವಾಲು ಅಲ್ಲಾ. ಆರ್ಥಿಕ ಸವಾಲು! ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳಿಗಿಂತ ಹೆಚ್ಚಾಗಿ ದೇಶದ ಬೃಹದಾರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸಲು ವಿಫಲವಾಗಿರುವ ಬಗ್ಗೆಯೇ ಹೆಚ್ಚು ಟೀಕೆಗಳು ಕೇಳಿ ಬರುತ್ತಿವೆ.

ಈಗ ದೇಶದ ಮುಂದಿರುವ ಪ್ರಮುಖ ಸಮಸ್ಯೆ ನಗದು ಕೊರತೆ. ನಗದು ಕೊರತೆ ಸಮಸ್ಯೆಯು ಕೇವಲ ರುಪಾಯಿ ನೋಟುಗಳ ಹಂಚಿಕೆ ವಿತರಣೆಗೆ ಸೀಮಿತವಾದುದಲ್ಲ. ಇಡೀ ಆರ್ಥಿಕತೆಯ ಜೀವನಾಡಿಯಾಗಿರುವ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಗೃಹ ಸಾಲ ಕಂಪನಿಗಳು ಸಕಾಲದಲ್ಲಿ ಸಾಲ ಸಿಗದೇ ಸಂಕಷ್ಟ ಎದುರಿಸುತ್ತಿವೆ. ಸಕಾಲದಲ್ಲಿ ಸಾಲ ಸಿಗದೇ ಇರುವುದು, ಇರುವ ಆಸ್ಥಿಯನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಿ ನಗದೀಕರಿಸಿಕೊಳ್ಳಲು ಸಾಧ್ಯವಾಗದೇ ಇರುವುದು ನಗದು ಕೊರತೆಯ ಮುನ್ಸೂಚನೆಗಳು. ನಗದು ಕೊರತೆ ಸಮಸ್ಯೆಯು ದೇಶದ ಆರ್ಥಿಕ ವ್ಯವಸ್ಥೆಯ ನಿರ್ವಹಣೆಯಲ್ಲಿನ ದೋಷವನ್ನು ಪ್ರತಿಬಿಂಬಿಸುತ್ತದೆ.

ದೇಶದಲ್ಲಿ ನಗದು ಕೊರತೆ ಎದ್ದು ಕಾಣುತ್ತಿದೆ. ಐಎಲ್&ಎಫ್ಎಸ್ ಮತ್ತು ಸೂಪರ್ಟೆಕ್ ಸುಸ್ತಿಯಾದ ಪ್ರಕರಣಗಳು ಕೇವಲ ಪ್ರಾತಿನಿಧಿಕ ಮಾತ್ರ. ಮುಂಬರುವ ದಿನಗಳಲ್ಲಿ ಇಂತಹ ಹತ್ತಾರು ಪ್ರಕರಣಗಳು ಹೊರಬರಬರಲಿವೆ. ಬ್ಯಾಂಕುಗಳ ಮೂಲ ವ್ಯಾಪಾರವೇ ಬಡ್ಡಿಗೆ ಸಾಲ ನೀಡುವುದು. ಅಂತಹ ಬ್ಯಾಂಕುಗಳು ಈಗ ಸಾಲ ನೀಡಲಾಗದ ಸ್ಥಿತಿ ತಲುಪಿವೆ. ಸಾಲ ಇಲ್ಲದೇ ಔದ್ಯಮಿಕ ಚಟುವಟಿಕೆಗಳು ನಿಧಾನಗತಿಗೆ ಹೊರಳಿವೆ. ಇತ್ತೀಚಿನ ಐಐಪಿ ಅಂಕಿಅಂಶಗಳು ಇದನ್ನು ಪುಷ್ಟೀಕರಿಸಿವೆ.

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ರುಪಾಯಿ ಕುಸಿತಕ್ಕೆ ಆಂತಕರಿಕ ಕಾರಣಗಳೇನು ಇಲ್ಲ. ಜಾಗತಿಕ ವಿದ್ಯಮಾನಗಳೇ ಕಾರಣ ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿ ಕೊಂಡಿದ್ದಾರೆ. ಆ ಮೂಲಕ ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳು ಸರಿಯಾಗಿಯೇ ಇವೆ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ. ವಾಸ್ತವವಾಗಿ ಒಂದು ದೇಶದ ಕರೆನ್ಸಿ ಮೌಲ್ಯ ಕುಸಿದರೆ ಅದು ಆ ದೇಶದ ಆರ್ಥಿಕತೆಯ ವೈಫಲ್ಯವನ್ನು ಪ್ರತಿನಿಧಿಸುತ್ತದೆ.

ಆದರೆ ಕರೆನ್ಸಿ ಮೌಲ್ಯ ಕುಸಿತವೆಲ್ಲವೂ ದೇಶದ ಆರ್ಥಿಕತೆಯ ವೈಫಲ್ಯ ಎಂದು ತಿಳಿಯಬೇಕಿಲ್ಲ. ಚೀನಾ ಸರ್ಕಾರವು ತನ್ನ ಕರೆನ್ಸಿ ಯಾನ್ ಮೌಲ್ಯವನ್ನು ಡಾಲರ್ ವಿರುದ್ಧ ತಗ್ಗಿಸಿದೆ. ಅದು ಆ ದೇಶದ ವ್ಯಾಪಾರ ತಂತ್ರ. ಚೀನಾದ ರಫ್ತು ಪ್ರಮಾಣವು ಆಮದು ಪ್ರಮಾಣಕ್ಕಿಂತಲೂ ಹೆಚ್ಚಿದೆ. ಅಂತಹ ಸಂದರ್ಭದಲ್ಲಿ ದೇಶದ ಕರೆನ್ಸಿ ಮೌಲ್ಯ ಕುಸಿದಷ್ಟು ರಫ್ತು ಉತ್ಪನ್ನಕ್ಕೆ ಹೆಚ್ಚಿನ ಲಾಭ ಬರುತ್ತದೆ. ಆದರೆ, ಭಾರತದ ಪರಿಸ್ಥಿತಿ ಭಿನ್ನವಾಗಿದೆ. ನಮ್ಮ ದೇಶದ ರಫ್ತು ಪ್ರಮಾಣವು ಆಮದು ಪ್ರಮಾಣಕ್ಕಿಂತ ಕಡಮೆ ಇದೆ. ಇದೂ ಕೂಡ ದೇಶದ ಆರ್ಥಿಕತೆ ಸುಸ್ಥಿರವಾಗಿಲ್ಲ ಎಂಬುದರ ಪ್ರತೀಕ.

ಕೇಂದ್ರ ಸರ್ಕಾರದ ಆರ್ಥಿಕ ನೀತಿ ಸಮರ್ಥವಾಗಿದ್ದರೆ, ಆರ್ಥಿಕ ನಿರ್ವಹಣೆ ಸಮರ್ಥವಾಗಿದ್ದರೆ ಮಾತ್ರ ರಫ್ತು ಪ್ರಮಾಣ ಹೆಚ್ಚಿ, ಆಮದು ಪ್ರಮಾಣ ತಗ್ಗುತ್ತದೆ. ಆದರೆ, ಭಾರತದ ಆಮದು-ರಫ್ತು ವ್ಯಾಪಾರ ಕೊರತೆ ಹಿಗ್ಗುತ್ತಲೇ ಇದೆ. ಆಗಸ್ಟ್ ತಿಂಗಳಲ್ಲಿನ ವ್ಯಾಪಾರ ಕೊರತೆಯು 17.4 ಬಿಲಿಯನ್ ಡಾಲರ್ ಗೆ ಏರಿದೆ. ಅಂದರೆ, ಭಾರತ 45.24 ಬಿಲಿಯನ್ ಡಾಲರ್ ಆಮದು ಮಾಡಿಕೊಂಡಿದ್ದರೆ, ರಫ್ತು ಮಾಡಿದ ಪ್ರಮಾಣವು 27.84 ಬಿಲಿಯನ್ ಡಾಲರ್. ಆಮದು- ರಫ್ತು ನಡುವಿನ ಅಂತರವು 17.4 ಬಿಲಿಯನ್ ಡಾಲರ್ ಗೆ ಏರಿದೆ.

ಯಾವ ದೇಶದ ವ್ಯಾಪಾರ ಕೊರತೆ ಹೆಚ್ಚಿರುತ್ತದೋ ಆ ದೇಶದ ಕರೆನ್ಸಿ ಮೌಲ್ಯವು ಡಾಲರ್ ವಿರುದ್ಧ ಕುಸಿಯುತ್ತಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಶೇ.15ರಷ್ಟು ಕುಸಿದಿದೆ. ಇದೇ ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲವು ಶೇ.28ರಷ್ಟು ಏರಿಕೆಯಾಗಿದೆ. ಈ ಎರಡೂ ಅಂಶಗಳಿಂದಾಗಿ ದೇಶದ ಪಾಲಿಗೆ 2018-19ನೇ ವಿತ್ತೀಯ ವರ್ಷ ಅತಿ ಸಂಕಷ್ಟದ ವರ್ಷವಾಗಿ ಪರಿಣಮಿಸಲಿದೆ.

ಹೇಗೆಂಬುದನ್ನು ಗಮನಿಸಿ. ಕಚ್ಚಾ ತೈಲ (ಡಬ್ಲ್ಯೂಟಿಐ ಕ್ರೂಡ್) 2018ರ ಆರಂಭದಲ್ಲಿ 60.20 ಡಾಲರ್ ಗಳಷ್ಟಿತ್ತು. 2018ರಲ್ಲಿ ಅಕ್ಟೋಬರ್ ತಿಂಗಳ ಆರಂಭದಲ್ಲಿ ತೈಲದ ಗರಿಷ್ಠ ಬೆಲೆ 76.90 ಡಾಲರ್ ಗೆ ಏರಿತ್ತು. ಡಾಲರ್ ಲೆಕ್ಕದಲ್ಲಿ ಹೇಳುವುದಾದರೆ ಕಚ್ಚಾ ತೈಲ ಈ ಅವಧಿಯಲ್ಲಿನ ಏರಿಕೆಯು ಶೇ.28ರಷ್ಟು. ಆದರೆ, ಇದೇ ಅವಧಿಯಲ್ಲಿ ನಮ್ಮ ರುಪಾಯಿಯು ಡಾಲರ್ ವಿರುದ್ಧ ಕುಸಿತ ತೀವ್ರ ಕುಸಿತ ದಾಖಲಿಸಿದೆ.

ರುಪಾಯಿ ಲೆಕ್ಕದಲ್ಲಿ ನೋಡುವುದಾದರೆ ಕಚ್ಚಾ ತೈಲದ ಬೆಲೆ ಏರಿಕೆಯು ಮತ್ತಷ್ಟು ತೀವ್ರವಾಗಿರುತ್ತದೆ. 2018ರ ಆರಂಭದಲ್ಲಿ ಕಚ್ಚಾ ತೈಲವು ಪ್ರತಿ ಬ್ಯಾರೆಲ್ ದೇಶೀಯ ಕರೆನ್ಸಿ ಲೆಕ್ಕದಲ್ಲಿ 3858 ರುಪಾಯಿ ಇತ್ತು. ಅಕ್ಟೋಬರ್ ಆರಂಭದಲ್ಲಿ ಕಚ್ಚಾ ತೈಲ ಗರಿಷ್ಠ ದರವು 5669 ರುಪಾಯಿಗೆ ಏರಿತ್ತು. ಅಂದರೆ ಡಾಲರ್ ಲೆಕ್ಕದಲ್ಲಿ ಕಚ್ಚಾ ತೈಲ ದರ ಏರಿಕೆ ಶೇ.28ರಷ್ಟು ಇದ್ದದ್ದು, ರುಪಾಯಿ ಲೆಕ್ಕದಲ್ಲಿ ಅದು ಶೇ.47ರಷ್ಟಾಗಿದೆ. ಇದು ರುಪಾಯಿ ಮೌಲ್ಯ ಕುಸಿತದಿಂದಾದ ಹೆಚ್ಚಿನ ಭಾರ.

ಈಗಾಗಲೇ ಐಎಲ್&ಎಫ್ಎಸ್ ಸಾಲ ಸುಸ್ತಿಯಿಂದ ಹೊರಬಿದ್ದ ನಗದು ಕೊರತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಪೇಟೆಯಿಂದ ತಮ್ಮ ಹೂಡಿಕೆ ವಾಪಾಸು ಪಡೆದಿದ್ದಾರೆ. ಈಗ ಸೂಪರ್ಟೆಕ್ ಸಾಲ ಸುಸ್ತಿಯಿಂದಾಗಿ ಗೃಹಸಾಲ ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿವೆ. ಬರುವ ದಿನಗಳಲ್ಲಿ ನಗದು ಕೊರತೆಯ ಕರಿನೆರಳು ಷೇರುಪೇಟೆಯ ಜತೆಗ ಬಂಡವಾಳ ಪೇಟೆಯನ್ನು ಕಾಡಲಿದೆ.ು ಕಾರಣವಾಗಿದೆ. ಅಂತಿಮವಾಗಿ ವಿತ್ತೀಯ ಕೊರತೆ ಮೇಲೆಾಇದು ಪರಿಣಾಮ ಬೀರುತ್ತದೆ. ಕೇಂದ್ರ ಸರ್ಕಾರ ಶೇ.3.3ರ ವಿತ್ತೀಯ ಕೊರತೆ ಮಿತಿ ಕಾಯ್ದುಕೊಳ್ಳುವುದಾಗಿ ಹೇಳಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಎಕ್ಸೈಜ್ ಸುಂಕ ಕಡಿತ ಮಾಡಬೇಕೆಂಬ ಒತ್ತಡದಿಂದ ರಕ್ಷಣೆ ಪಡೆಯಲು ಕೇಂದ್ರ ಸರ್ಕಾರವು ವಿತ್ತೀಯ ವಿವೇಕ ಪಾಲನೆಯನ್ನು ಪ್ರಸ್ತಾಪಿಸುತ್ತಲೇ ಬಂದಿದೆ. ಇಂತಹ ಸಂದರ್ಭದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣ ಗಣನೀಯವಾಗಿ ಕುಗ್ಗುತ್ತದೆ.

ಇದನ್ನೂ ಓದಿ : ದೇಶದ ಆರ್ಥಿಕ ಬಿಕ್ಕಟ್ಟಿನ ಹೊತ್ತಿನಲ್ಲಿ ಮನಮೋಹನ್ ಸಿಂಗ್ ನೆನಪಾಗುತ್ತಾರೇಕೆ?

ಈಗಾಗಲೇ ಐಎಲ್&ಎಫ್ಎಸ್ ಸಾಲ ಸುಸ್ತಿಯಿಂದ ಹೊರಬಿದ್ದ ನಗದು ಕೊರತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಪೇಟೆಯಿಂದ ತಮ್ಮ ಹೂಡಿಕೆ ವಾಪಸು ಪಡೆಯುತ್ತಿದ್ದಾರೆ. ಈಗ ಸೂಪರ್ಟೆಕ್ ಸಾಲ ಸುಸ್ತಿಯಿಂದಾಗಿ ಗೃಹಸಾಲ ಕಂಪನಿಗಳ ಷೇರುಗಳು ಪಾತಾಳಕ್ಕೆ ಕುಸಿದಿವೆ. ಬರುವ ದಿನಗಳಲ್ಲಿ ನಗದು ಕೊರತೆಯ ಕರಿನೆರಳು ಷೇರುಪೇಟೆಯ ಜತೆಗ ಬಂಡವಾಳ ಪೇಟೆಯನ್ನು ಕಾಡಲಿದೆ.

ಸದ್ಯಕ್ಕೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಮಾಡಬೇಕಾದ ತುರ್ತು ಕೆಲಸ ಎಂದರೆ ನಗದು ಹರಿವು ನಿರಾಯಾಸವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಬೇಕು. ಮೋದಿ ಸರ್ಕಾರವು ತನ್ನ ಆರ್ಥಿಕ ನೀತಿಗಳನ್ನು ಮರುಪರಾಮರ್ಶೆ ಮಾಡಿಕೊಂಡು, ಸುಸ್ಥಿರ ಆರ್ಥಿಕತೆಗೆ ಪೂರಕವಾದ ನೀತಿಗಳನ್ನು ಜಾರಿಗೊಳಿಸಬೇಕು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More