ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ

ದೇಶದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಳೆದ 4 ವರ್ಷದಲ್ಲಿ ಕೋಟಿ ಮೀರಿ ಆದಾಯ ಗಳಿಸಿದ ತೆರಿಗೆದಾರರ ಸಂಖ್ಯೆ ಶೇ.60ರಷ್ಟು ಹೆಚ್ಚಳವಾಗಿದ್ದರೆ, ವೈಯಕ್ತಿಕವಾಗಿ ಕೋಟಿ ಸಂಪಾದಿಸುವವರ ಸಂಖ್ಯೆ ಶೇ.68ರಷ್ಟು ಜಿಗಿದಿದೆ. ಇದು ಕೇಂದ್ರೀಯ ನೇರ ತೆರಿಗೆ ಮಂಡಳಿ ಮಾಹಿತಿ

ದೇಶದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದೆ. 2017-18ರಲ್ಲಿ ವೈಯಕ್ತಿಕ ಕೋಟ್ಯಧಿಪತಿಗಳ ಸಂಖ್ಯೆ 88,649ಕ್ಕೆ ಏರಿದೆ. ಅಂದರೆ, 2017-18ನೇ ಸಾಲಿನಲ್ಲಿ ಇಷ್ಟು ಮಂದಿ 1 ಕೋಟಿ ರುಪಾಯಿ ಮೀರಿದ ಆದಾಯ ಗಳಿಸಿದ್ದಾರೆ. ಅದನ್ನು ತೆರಿಗೆ ಇಲಾಖೆ ಮುಂದೆ ಘೋಷಿಸಿಕೊಂಡಿದ್ದಾರೆ. ವ್ಯಕ್ತಿಗಳು, ಸಂಸ್ಥೆಗಳು, ಕಾರ್ಪೋರೆಟುಗಳೆಲ್ಲವೂ ಸೇರಿದಂತೆ ದೇಶದಲ್ಲಿ 1 ಕೋಟಿ ರುಪಾಯಿ ಮೀರಿದ ಆದಾಯ ಗಳಿಸುತ್ತಿರುವ ತೆರಿಗೆದಾರರ ಸಂಖ್ಯೆ 1,40,139ಕ್ಕೆ ಏರಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನೀಡಿರುವ ಮಾಹಿತಿ ಪ್ರಕಾರ, 2014-15ರಲ್ಲಿ ವೈಯಕ್ತಿಕ ಕೋಟ್ಯಧಿಪತಿಗಳ ಸಂಖ್ಯೆ 48,416 ಇದ್ದದ್ದು 2017-18ರಲ್ಲಿ 81,344 ಕ್ಕೆ ಏರಿದೆ. ಏರಿಕೆ ಪ್ರಮಾಣ ಶೇ.68ರಷ್ಟಾಗಿದೆ. 1 ಕೋಟಿ ಮೀರಿದ ಆದಾಯ ಗಳಿಸಿದ ವ್ಯಕ್ತಿಗಳು, ಸಂಸ್ಥೆಗಳು ಕಾರ್ಪೊರೆಟ್‌ಗಳ ಸಂಖ್ಯೆಯು 2014-15ರಲ್ಲಿ 88,649 ಕೋಟಿಯಿಂದ ಮೂರು ವರ್ಷಗಳ ಅವಧಿಯಲ್ಲಿ 1,40,139ಗೆ ಏರಿದ್ದು ಶೇ.60ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ : ಚುನಾವಣೆ ಮೇಲೆ ಕಣ್ಣು; ನೂರಕ್ಕೂ ಹೆಚ್ಚು ಸರಕುಗಳ ತೆರಿಗೆ ತಗ್ಗಿಸಿದ ಕೇಂದ್ರ

“ತೆರಿಗೆ ಇಲಾಖೆ ಜಾರಿಗೆ ತಂದಿರುವ ಹೊಸ ನಿಯಮಗಳು, ಮಾಹಿತಿ ನೀಡಿಕೆ, ಆಡಳಿತ ಸುಧಾರಣೆ ಮತ್ತು ತ್ವರಿತ ಕಾನೂನು ಜಾರಿಯಿಂದಾಗಿ ಆದಾಯ ಘೋಷಣೆ ಮಾಡಿಕೊಂಡು ತೆರಿಗೆ ಪಾವತಿಸುತ್ತಿರುವರ ಸಂಖ್ಯೆ ಹೆಚ್ಚಾಗಿದೆ,” ಎಂದು ಸಿಬಿಡಿಟಿ ಅಧ್ಯಕ್ಷ ಸುಶಿಲ್ ಚಂದ್ರ ಹೇಳಿದ್ದಾರೆ. “ತೆರಿಗೆ ಇಲಾಖೆಯು ದಾಳಿ ನಡೆಸದೆ, ವೈಯಕ್ತಿಕವಾಗಿ ತೊಂದರೆ ನೀಡದೆ, ತಂತ್ರಜ್ಞಾನ ಬಳಸಿ ತೆರಿಗೆಗಳ್ಳತನವನ್ನು ತ್ವರಿತವಾಗಿ ಪತ್ತೆಹಚ್ಚಲು ಹಲವು ಕ್ರಮಗಳನ್ನು ಜಾರಿಗೆ ತಂದಿದೆ. ಇದರಿಂದಾಗಿ ತೆರಿಗೆ ಆಳ ಮತ್ತು ವ್ಯಾಪ್ತಿ ವಿಸ್ತಾರಗೊಂಡಿದೆ,” ಎಂದೂ ಅವರು ಹೇಳಿದ್ದಾರೆ.

ತೆರಿಗೆ ಇಲಾಖೆ ಈ ಕ್ರಮಗಳಿಂದಾಗಿ ತೆರಿಗೆ ವಿವರ ಸಲ್ಲಿಸುತ್ತಿರುವವರ ಸಂಖ್ಯೆಯೂ ಕಳೆದ ನಾಲ್ಕು ವರ್ಷಗಳಲ್ಲಿ ಶೇ.80ರಷ್ಟು ಹೆಚ್ಚಳವಾಗಿದೆ. 2013-14ರಲ್ಲಿ 3.79 ಕೋಟಿ ಮಂದಿ ತೆರಿಗೆ ವಿವರ ಸಲ್ಲಿಸಿದ್ದರು. 2017-18ರಲ್ಲಿ ತೆರಿಗೆ ವಿವರ ಸಲ್ಲಿಸಿದವರ ಸಂಖ್ಯೆ 6.85 ಕೋಟಿಗೆ ಏರಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More