ಊರು ಕೇರಿ | ಬಳಗಾನೂರಿನ ಜಾತ್ರೆಯಲ್ಲಿ ಜಾನುವಾರು ಸಂತೆಯೇ ದೊಡ್ಡ ಆಕರ್ಷಣೆ

ಗದಗ ಜಿಲ್ಲೆಯ ಬಳಗಾನೂರಿನ ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ, ಅನ್ನದಾತನ ಜೀವನಾಡಿ ಎತ್ತುಗಳ ಸಂತೆ. ಇಲ್ಲಿ ಎತ್ತುಗಳು ನಿಮ್ಮೆಲ್ಲ ಊಹೆ ಮೀರಿಸುವಷ್ಟು ದೊಡ್ಡ ಬೆಲೆಗೆ ಮಾರಾಟವಾಗುತ್ತವೆ. ಅದರಲ್ಲೂ, ಅಪರೂಪದ ಸೀಮೆ ತಳಿ ಎತ್ತುಗಳು ಈ ಜಾತ್ರೆಯ ವಿಶೇಷತೆಗಳಲ್ಲಿ ಒಂದು

ಉತ್ತರ ಕರ್ನಾಟಕದಾದ್ಯಂತ ಈಗ ಜಾತ್ರೆಗಳ ಸಂಭ್ರಮ. ಗ್ರಾಮೀಣ ಭಾಗದಲ್ಲಿ ನಡೆಯೋ ಜಾತ್ರೆಗಳ ಖದರೇ ಬೇರೆ. ಈ ಜಾತ್ರೆಗಳಲ್ಲಿ ಒಂದು ಜನಪದ ಲೋಕವೇ ಅನಾವರಣಗೊಳ್ಳುತ್ತದೆ. ಶೃಂಗಾರಗೊಂಡ ರಥಕ್ಕೆ ತಳಿರು ತೋರಣ ಕಟ್ಟಿ ಹಿರಿಯರು ವಿಜೃಂಭಿಸಿದರೆ, ಮಕ್ಕಳಿಗೆ ಜಾತ್ರೆ ಅಂದರೆ ಅದೊಂದು ಕಿನ್ನರ ಉತ್ಸವ. ಜಾತ್ರೆಗೆ ಆಗಮಿಸೋ ಯುವಕರದ್ದೇ ಬೇರೆ ಲೋಕ.

ಜಾತ್ರೆಯ ಸಂದರ್ಭದಲ್ಲಿ ರೊಟ್ಟಿ ಊಟ, ಬಂಧುಗಳ ಸಂಗಮ ಎಲ್ಲವನ್ನೂ ನೋಡುವುದೇ ಒಂದು ಸೊಬಗು. ಗದಗ ಜಿಲ್ಲೆಯ ಬಳಗಾನೂರಿನಲ್ಲಿ ಪ್ರತಿ ವರ್ಷವೂ ನಡೆಯೋ ಈ ಜಾತ್ರೆ ಗ್ರಾಮೀಣ ಸೊಗಡಿನ ರಾಯಭಾರಿ. ಅದರಲ್ಲೂ, ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ ಜಾನುವಾರು ಸಂತೆ; ಅನ್ನದಾತನ ಜೀವನಾಡಿ ಎತ್ತುಗಳ ಸಂತೆ. ಇಲ್ಲಿ ಎತ್ತುಗಳು ಊಹೆಗೂ ನಿಲುಕದಷ್ಟು ಬೆಲೆಗೆ ಮಾರಾಟವಾಗುತ್ತವೆ. ಅದರಲ್ಲೂ, ಅಪರೂಪದ ಸೀಮೆ ತಳಿ ಎತ್ತುಗಳು ಈ ಜಾತ್ರೆಯ ವಿಶೇಷತೆಗಳಲ್ಲೊಂದು. ಇದೇ ಕಾರಣದಿಂದ ಬರಪೀಡಿತ ಪ್ರದೇಶವಾಗಿದ್ದರೂ ಸೀಮೆ ಎತ್ತುಗಳಿಗೆ ಬಹಳಷ್ಟು ಬೇಡಿಕೆ.

ಇದನ್ನೂ ಓದಿ : ಚಿಕ್ಕಲ್ಲೂರು ಜಾತ್ರೆ ಪಂಕ್ತಿ ಸೇವೆ ಪರಂಪರೆ ಉಳಿವಿಗೆ ಇರುವ ಒಳದಾರಿಗಳೇನು?

ಈ ಬಳಗಾನೂರಿನ ಚಿಕ್ಕೆನಕೊಪ್ಪದ ಜಾತ್ರೆಗೆ ಸುತ್ತಮುತ್ತಲಿನ ಹಲವು ಹಳ್ಳಿಗಳ ಜನರು ಬಂದು ಸೇರುತ್ತಾರೆ. ಜಾತ್ರೆ ಅಂಗವಾಗಿ ಸಾಮೂಹಿಕ ವಿವಾಹಗಳು ಸಹ ನಡೆಯುತ್ತವೆ.

ಜಾತ್ರೆಗೆ ಕಿಲಾರಿ, ಜವಾರಿ, ಸೀಮೆ ಹೀಗೆ ಹಲವಾರು ತಳಿಗಳ ಎತ್ತುಗಳ ಮಾರಾಟವಾಗುತ್ತವೆ. ಅಲ್ಲಿ 80ಕ್ಕೂ ಹೆಚ್ಚು ತಳಿಗಳು ಜಾತ್ರೆಗೆ ಬಂದಿರುತ್ತವೆ ಎನ್ನುತ್ತಾರೆ ರೈತರು. ಬಿಸಿಲು ನಾಡಿನಲ್ಲಿ ನಡೆಯುವ ಜಾನುವಾರಗಳ ಜಾತ್ರೆ ರೈತಸ್ನೇಹಿ. ಮುಂಬರುವ ಮುಂಗಾರಿನ ಸಮಯಕ್ಕಾಗುವಾಗ ಎತ್ತು ಖರೀದಿಸಿ ಬಿತ್ತನೆ ಸಿದ್ಧತೆ ಮಾಡಿಕೊಳ್ಳಲು ಇಂಥ ಜಾತ್ರೆಗಳು ಸಹಕಾರಿ. ಅಲ್ಲದೆ, ಜಾತ್ರೆ ಮೇಲಿನ ಭಕ್ತಿ ಹಾಗೂ ನಂಬಿಕೆಯಿಂದಲೂ ಎತ್ತುಗಳ ಜಾತ್ರೆಯಲ್ಲಿ ಜನರು ಮುಗಿಬಿದ್ದು ಜಾನುವಾರು ಖರೀದಿಸುತ್ತಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More