ಜನ, ಜನಾರ್ದನ ದರ್ಶನ; ಹೈದರಾಬಾದ್ ಕರ್ನಾಟಕದಲ್ಲಿ ಗಮನ ಸೆಳೆದ ರಾಹುಲ್ ಹವಾ

ಹೈದರಾಬಾದ್ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಮೇನಿಯಾ ಮುಂದುವರಿದಿದೆ. ಕುಕನೂರಿನಿಂದ ಯಲಬರ್ಗಾಕ್ಕೆ ಆಗಮಿಸಿದ ಜನಾಶೀರ್ವಾದ ಯಾತ್ರೆ ಜನಮನ ಸೆಳೆಯಿತು. ಕುಷ್ಟಗಿಯ ರೋಡ್ ಶೋ ಹಾಗೂ ಸಾರ್ವಜನಿಕ ಸಮಾರಂಭಕ್ಕೂ ಅದ್ಧೂರಿ ಜನಸ್ಪಂದನೆ ದೊರಕಿದೆ

ಕಾಂಗ್ರೆಸ್ ಜನಾಶೀರ್ವಾದ ಯಾತ್ರೆ ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ ಶನಿವಾರ ಮಧ್ಯಾಹ್ನ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಿಂದ ಆರಂಭಗೊಂಡ ಯಾತ್ರೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚಾಲನೆ ನೀಡಿದ್ದರು. ಹೊಸಪೇಟೆ ನಂತರ ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಸ್ಥಾನ ಹಾಗೂ ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಯಲಬುರ್ಗಾ ತಾಲೂಕಿನ ಕುಕನೂರಿನಲ್ಲಿ ವಾಸ್ತವ್ಯ ಹೂಡಿದ್ದರು.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಜನರ ಆಶೀರ್ವಾದದ ಜೊತೆ ಹುಲಿಗೆಮ್ಮನ ಕೃಪೆ ಬೇಡಿದ ರಾಹುಲ್

ಎರಡನೇ ದಿನವಾದ ಇಂದು (ಫೆ೧೧) ರಾಹುಲ್ ಮೇನಿಯಾ ಮುಂದುವರಿದಿದೆ. ಕುಕನೂರಿನಿಂದ ಯಲಬುರ್ಗಾಕ್ಕೆ ಆಗಮಿಸಿದ ಜನಾಶೀರ್ವಾದ ಯಾತ್ರೆ ಜನಮನ ಸೆಳೆಯಿತು. ನಂತರ ಕುಷ್ಟಗಿಯಲ್ಲಿ ರೋಡ್ ಶೋ ಹಾಗೂ ಸಾರ್ವಜನಿಕ ಸಮಾರಂಭಕ್ಕೆ ಅದ್ಧೂರಿ ಜನಸ್ಪಂದನೆ ದೊರಕಿದೆ. ಬಹಿರಂಗ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರ ವೈಫಲ್ಯಗಳನ್ನು ಜನರ ಮುಂದಿಟ್ಟರು. “ಬಂಡವಾಳಶಾಹಿಗಳ ಪರ ಇರುವ ಕೇಂದ್ರ ಸರ್ಕಾರ, ಬಡವರ, ರೈತರ ಹಾಗೂ ಶ್ರಮಿಕ ವರ್ಗವನ್ನು ಕಡೆಗೆಣಿಸುತ್ತಿದೆ,” ಎಂದು ವಾಗ್ದಾಳಿ ನಡೆಸಿದರು.

ಕನಕಗಿರಿಗೆ ಆಗಮಸಿದ ರಾಹುಲ್ ಗಾಂಧಿ, ಐತಿಹಾಸಿಕ ಕನಕಾಚಲಪತಿ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದರು. ಕನಕಗಿರಿಯಿಂದ ಗಂಗಾವತಿಗೆ ಯಾತ್ರೆ ನಡೆಸಿದ ಬಳಿಕ ಬಹಿರಂಗ ಸಭೆ ನಡೆಸಿದರು. ಗಂಗಾವತಿಯಿಂದ ಕಾರಟಗಿಗೆ ತೆರಳಿ, ಬಳಿಕ ಇಂದು ಸಂಜೆ ರಾಹುಲ್ ಗಾಂಧಿ ಅವರು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ರೈತರ ಜೊತೆ ಸಂವಾದ ನಡೆಸಲಿದ್ದಾರೆ. ಸಂಜೆ ರಾಯಚೂರಿಗೆ ತೆರಳಿ ವಾಸ್ತವ್ಯ ಮಾಡಲಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More