ಮಹಾಮಸ್ತಕಾಭಿಷೇಕ ಪ್ರವಾಸಿಗರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರ ಸಾಥ್

ಫೆ.17ರಿಂದ ಆರಂಭವಾಗಲಿರುವ ಮಹಾಮಸ್ತಕಾಭಿಷೇಕ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಲಕ್ಷಾಂತರ ಭಕ್ತರು, ಜೈನ ಮುನಿಗಳು, ಪ್ರವಾಸಿಗರು ಶ್ರವಣಬೆಳಗೊಳದತ್ತ ಮುಖ ಮಾಡಿರುವುದರಿಂದ ಎಲ್ಲಿ ನೋಡಿದರಲ್ಲಿ ಬರೀ ಜನಸಾಗರ. ಈ ಹಬ್ಬಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ ಲಭ್ಯವಾಗಲಿದೆ

ಐತಿಹಾಸಿಕ ಮಹಾಮಸ್ತಕಾಭಿಷೇಕ ಫೆ.17ರಂದು ಉದ್ಘಾಟನೆಗೊಳ್ಳಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳ ಲಕ್ಷಾಂತರ ಭಕ್ತರು, ಜೈನ ಮುನಿಗಳು, ಆಧ್ಯಾತ್ಮಿಕ ಸಂತರು, ಪ್ರವಾಸಿಗರು ಶ್ರವಣಬೆಳಗೊಳದತ್ತ ಮುಖ ಮಾಡಿರುವುದರಿಂದ ಎಲ್ಲಿ ನೋಡಿದರಲ್ಲಿ ಬರೀ ಜನಸಾಗರವೇ ಕಂಡುಬರುತ್ತಿದ್ದು, ಶ್ರವಣಬೆಳಗೊಳ ಎಂಬ ಪುಟ್ಟ ಊರು ಜನರಿಂದ ಗಿಜಿಗುಟ್ಟುತ್ತಿದೆ. ಒಂದು ರೀತಿಯಲ್ಲಿ ಹೇಳುವುದಾದರೆ, ವಿಂದ್ಯಗಿರಿ ಬೆಟ್ಟದ ಕೆಳಭಾಗದಲ್ಲಿ ಹಲವು ಸಂಸ್ಕೃತಿ, ಭಾಷೆ, ರಾಜ್ಯ, ದೇಶಗಳ ಜನತೆಯ ಮಹಾಸಂಗಮವಾಗಿದ್ದು, ಒಂದು ಚಿಕ್ಕ ವಿಶ್ವವೇ ನಿರ್ಮಾಣವಾಗಿದೆ ಎನ್ನಬಹುದೇನೋ.

ದಡ ಸೇರುವ ಕಡಲಿನ ಅಲೆಗಳಂತೆ ಬರುವ ಈ ಜನಸಮುದಾಯವನ್ನು ನಿಯಂತ್ರಿಸೋದು ಪೊಲೀಸರಿಗೆ ಮತ್ತು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವೇ ಸರಿ. ಈ ಬಾರಿ ಮಸ್ತಕಾಭಿಷೇಕ ವೀಕ್ಷಣೆಗೆ 30ರಿಂದ 40 ಲಕ್ಷ ಮಂದಿ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇರುವುದರಿಂದ, ಜಿಲ್ಲಾಡಳಿತ ಹಾಗೂ ಮಠದ ವತಿಯಿಂದ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆಯಾದರೂ, ಆತಿಥ್ಯ ನೀಡಲು ಎಷ್ಟು ಮಂದಿ ಇದ್ದರೂ ಕಮ್ಮಿ ಎಂಬಂತಾಗಿದೆ. ಹೀಗಾಗಿ, ಜಿಲ್ಲಾಡಳಿತ ಹಾಗೂ ಸ್ವಯಂಸೇಕವರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಕೂಡ ಸಾಥ್ ನೀಡಿದೆ.

ಪ್ರವಾಸಿಗರಿಗೆ ನೀರಿನ ವ್ಯವಸ್ಥೆ, ಶೌಚಾಲಯದ ಸ್ಪಚ್ಛತೆ, ಸ್ಪಚ್ಛ ಭಾರತ ಸೇರಿದಂತೆ 12 ಅಂಶಗಳ ಜವಾಬ್ದಾರಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ನಿರ್ವಹಿಸಲಿದ್ದು, ಐದು ಬ್ಯಾಚ್ ಸೇವೆ ನೀಡಲಿದೆ. ವಿಶೇಷವೆಂದರೆ, ಮಸ್ತಕಾಭಿಷೇಕವನ್ನು ವೀಕ್ಷಿಸಲು ದೇಶವಿದೇಶಗಳಿಂದ ಪ್ರವಾಸಿಗರು ಬರುವ ಹಿನ್ನೆಲೆಯಲ್ಲಿ ಭಾಷೆಯ ಸಮಸ್ಯೆ ಕಾಡಬಾರದು ಎಂಬ ಕಾರಣಕ್ಕಾಗಿ ಈ ಭಾರಿ ದೇಶಾದ್ಯಂತ 5 ಬ್ಯಾಚ್‌ಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಸಹಾಯಕ್ಕೆ ನಿಂತಿದ್ದಾರೆ.
ಪಿಜಿಆರ್ ಸಿಂಧ್ಯಾ, ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ

ಈಗಾಗಲೇ ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇಕರು ಕಾರ್ಯೋನ್ಮುಖರಾಗಿದ್ದು, ಮಸ್ತಕಾಭಿಷೇಕ ಮುಗಿಯುವವರೆಗೂ ಇವರು ಪ್ರವಾಸಿಗರಿಗೆ ಆತಿಥ್ಯ ನೀಡಲಿದ್ದಾರೆ. ಒಟ್ಟು 33 ಜಿಲ್ಲೆಗಳಿಂದ ಮೂರೂವರೆ ಸಾವಿರಕ್ಕಿಂತಲೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ವೈರಾಗ್ಯಮೂರ್ತಿಯ ನಾಡಿನಲ್ಲಿ ಸೇವೆ ಸಲ್ಲಿಸಲಿದ್ದು, ಒಂದೊಂದು ಬ್ಯಾಚ್‌ನಲ್ಲಿ 500 ಮಂದಿಯಂತೆ 5 ದಿನಗಳ ಕಾಲ ಇವರು ಸೇವೆ ಸಲ್ಲಿಸಲಿದ್ದಾರೆ.

ಅನುಭವ ಮಂಟಪಕ್ಕೆ ಅನುದಾನ ಘೋಷಿಸದ ಸರ್ಕಾರದ ಮೇಲೆ ಅಸಮಾಧಾನ
ರಾಜ್ಯ ಬಜೆಟ್‌ನಲ್ಲಿ ತೊಗರಿ ಉದ್ಯಮಕ್ಕೆ ಸಿಗದ ಆದ್ಯತೆ; ಹೈ- ಕ ಭಾಗದ ಜನರಲ್ಲಿ ನಿರಾಸೆ
ಕುತೂಹಲ ಮೂಡಿಸಿದ ಬಸನಗೌಡ ಪಾಟೀಲ್ ಯತ್ನಾಳರ ಬಿಜೆಪಿ ಮರು ಸೇರ್ಪಡೆ
Editor’s Pick More