ಲಿಂಗಾಯತ ಧರ್ಮ | ಕಾನೂನು ಸಮರದ ಎಚ್ಚರಿಕೆ ನೀಡಿದ ವೀರಶೈವ ಮಠಾಧೀಶರು

ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ಮಠಾಧೀಶರ ವಿರುದ್ಧ ಕಾನೂನು ಸಮರ ನಡೆಸುವುದಾಗಿ ವೀರಶೈವ ಮಠಾಧೀಶರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಮಠಾಧೀಶರ ಸಭೆಯು ಮಾ.14ರ ಸಚಿವ ಸಂಪುಟ ಸಭೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಸೃಷ್ಟಿಸಿದೆ

ಬುಧವಾರ ನಡೆಯಲಿರುವ ಸಭೆಯಲ್ಲಿ ಒಂದು ವೇಳೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿದಲ್ಲಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯುವುದಾಗಿ ಮಂಗಳವಾರ ಬಾಗಲಕೋಟೆ ಜಿಲ್ಲೆಯ‌ ಶಿವಯೋಗ ಮಂದಿರದಲ್ಲಿ ವೀರಶೈವ ಮಠಾಧೀಶರ ಸಭೆ ತೀರ್ಮಾನಿಸಿದೆ.

ಜೊತೆಗೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ಮಠಾಧೀಶರ ವಿರುದ್ಧ ಕಾನೂನು ಸಮರ ನಡೆಸಲು ವೀರಶೈವ ಮಠಾಧೀಶರು ಮುಂದಾಗಿದ್ದಾರೆ. ಹೀಗಾಗಿ, ಇಂದಿನ ಮಠಾಧೀಶರ ಸಭೆ ಬುಧವಾರ (ಮಾ.14) ನಡೆಯಲಿರುವ ಸಚಿವ ಸಂಪುಟದ ಸಭೆಯ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆಗಳೆ ಹೆಚ್ಚಾದಂತೆ ಕಾಣುತ್ತಿದೆ.

ಸೋಮವಾರದಂದು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ನಿಂತ ಸ್ವಾಮೀಜಿಗಳ ಗುಂಪೊಂದು ಕೂಡಲಸಂಗಮದಲ್ಲಿ ಸಭೆ ನಡೆಸಿ, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು. ಇದರ ಬೆನ್ನಲ್ಲೇ , ಇಂದು ವೀರಶೈವ ಮಠಾಧೀಶರು ಬಾಗಲಕೋಟೆ ಜಿಲ್ಲೆಯ ಶಿವಯೋಗಿ ಮಂದಿರದಲ್ಲಿ ನಡೆಸಿದ ಸಭೆ ತೀವ್ರ ಕುತೂಹಲಕ್ಕೆ ಎಡೆಮಾಡಿದೆ.

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ಬೆಂಬಲಕ್ಕೆ ನಿಂತ ಸ್ವಾಮಿಜಿ ವಿರುದ್ಧ ವಿರಕ್ತ ಮಠಾಧೀಶರು ಕಾನೂನು ಸಮರಕ್ಕೆ ಮುಂದಾಗಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ವೀರಶೈವ ಎಂಬ ಹೆಸರನ್ನು ಬಳಸಿಕೊಂಡು ಆಸ್ತಿ ಪರಭಾರೆ ಮಾಡಿದ ಬಗ್ಗೆ ಗದುಗಿನ ತೊಂಟದ ಸಿದ್ದಲಿಂಗ ಶ್ರೀಗಳ ವಿರುದ್ಧ ಕಾನೂನು ಹೋರಾಟ ನಡೆಸುವ ಮುನ್ಸೂಚನೆ ನೀಡಿದ್ದಾರೆ. ಇತ್ತ ನಾವು ಕಾಂಗ್ರೆಸ್ ವಿರೋಧಿಯೂ ಅಲ್ಲ, ಬಿಜೆಪಿ ಅಭಿಮಾನಿಯೂ ಅಲ್ಲ ಎಂದಿರುವ ಸ್ವಾಮೀಜಿಗಳು, “ನಮ್ಮ ಸಮಾಜವನ್ನು ಒಡೆಯಲು ಮುಂದಾದಲ್ಲಿ ಸರ್ಕಾರದ ವಿರುದ್ಧ ಬೀದಿ ಹೋರಾಟದ ಸಂದೇಶ ಅನಿವಾರ್ಯ,” ಎಂದು ಗುಡುಗಿದ್ದಾರೆ. ಬೆಂಗಳೂರಿಗೆ ತೆರಳಿ ನಾಳೆಯ ಸಂಪುಟ ಸಭೆಗೆ ಮುಂಚೆ ಮುಖ್ಯಮಂತ್ರಿ ಭೇಟಿ ಮಾಡಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡದಂತೆ ಮನವಿ ಮಾಡಲು ತೀರ್ಮಾನಿಸಿದ್ದಾರೆ.

ಈ ಸಭೆಯಲ್ಲಿ ಕಾಶಿಪೀಠದ ಚಂದ್ರಶೇಖರು ಶ್ರೀ , ಸಂಗನಬಸವ ಶ್ರೀ, ಮುಂಡರಗಿ ಅನ್ನದಾನ ಮಹಾಸ್ವಾಮಿ, ಬಾಲೆಹೊಸೂರು ದಿಂಗಾಲೇಶ್ವರ ಶ್ರೀ, ಕೊಟ್ಟೂರಿನ ಸಿದ್ಧಲಿಂದ ಶಿವಾಚಾರ್ಯ, ಬಳ್ಳಾರಿಯ ಕಲ್ಯಾಣ ಶ್ರೀ, ಕಮತಗಿಯ ಹೊಳೆ ಹುಚ್ಚೇಶ್ವರ ಶ್ರೀ, ತಾಳಿಕೋಟೆಯ ಕಾಶಿನಾಥಶ್ರೀ ಸೇರಿ 25ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.

ಇದನ್ನೂ ಓದಿ : ಲಿಂಗಾಯತ ಧರ್ಮ; ಎಂ ಬಿ ಪಾಟೀಲರು ಹೇಳಿದ ಮಾ.14ರ ಸಿಹಿ ಸುದ್ದಿ ಏನಿರಬಹುದು?

ಶಿವಯೋಗ ಮಂದಿರದಲ್ಲಿ ಸಂಗನಬಸವ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಎರಡು ಪ್ರಮುಖ ನಿರ್ಣಯ ಕೈಗೊಳ್ಳಲಾಯಿತು:

  • ನಾಳೆಯ ಸಂಪುಟ ಸಭೆಯಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬಾರದು
  • ಮಾನ್ಯತೆಗೆ ಶಿಫಾರಸು ಮಾಡಿದಲ್ಲಿ ಕಾಂಗ್ರೆಸ್ ವಿರುದ್ದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು
ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More