ಊರುಕೇರಿ | ಅಂಬೇಡ್ಕರ್ ಪುರಾಣ ಬರೆದು ಹಳ್ಳಿಹಳ್ಳಿಗೂ ಪಸರಿಸುತ್ತಿರುವ ರಾಮಣ್ಣ

ರಾಮಣ್ಣ ಅವರು ಅಂಬೇಡ್ಕರ್ ಬಗ್ಗೆ ಕೇಳಿ ತಿಳಿದುಕೊಂಡದ್ದನ್ನು ಕಲ್ಪನೆ ಬೆರೆಸಿ ಹೆಣೆದಿದ್ದಾರೆ. ಅವರ ಕಲ್ಪನೆಗೆ ಅಕ್ಷರ ರೂಪ ಕೊಟ್ಟವರು ಆಪ್ತ ಶಂಕರ್ ಅಂಗಡಿ. ರಾಮಣ್ಣ ಅವರು ಕಲ್ಪನೆಯೊಂದಿಗೆ ಹೇಳಿದ ನುಡಿಗಳನ್ನು ಶಬ್ಧ ರೂಪಕ್ಕಿಳಿಸಿ ಅದಕ್ಕೊಂದು ರೂಪ ಕೊಡಲಾಗಿದೆ

ಇಂದು ಅಂಬೇಡ್ಕರ್ ಅವರ ಸಿದ್ಧಾಂತ ಅದೆಷ್ಟೋ ಜನರಿಗೆ ಸೀಮಿತ ಉದ್ದೇಶಕ್ಕಷ್ಟೇ ನೆನಪಾಗುತ್ತದೆ. ಆದರೆ 67 ವರ್ಷದ ಈ ಚಿರಯುವಕ ಇದಕ್ಕೆ ಅಪವಾದ. ವಿಶೇಷ ಕಾರಣಕ್ಕೆ ಹೀಗೆ ಜನಪ್ರಿಯ ಆದವರು, ಗದಗನ ಶರಣ ಬಸವೇಶ್ವರ ನಗರದ ನಿವಾಸಿ ರಾಮಣ್ಣ ಬ್ಯಾಟಿ. ಇವರನ್ನು ಎಲ್ಲರೂ ‘ಅಂಬೇಡ್ಕರ್ ಅಜ್ಜ’ ಎಂದೇ ಕರೆಯುತ್ತಾರೆ.

ರಾಮಣ್ಣ ಬ್ಯಾಟಿ ಒಬ್ಬ ನಿರಕ್ಷರಿ. ಆದರೆ, ಓದು, ಬರಹ ಅರಿಯದ ವ್ಯಕ್ತಿಯಿಂದಲೂ ಅದ್ಭುತ ಸಾಹಿತ್ಯ ಸೃಷ್ಟಿಯಾಗಬಲ್ಲದು ಎನ್ನುವುದಕ್ಕೆ ಉತ್ತಮ ಉದಾಹರಣೆ. ತಮ್ಮ 16ನೇ ವಯಸ್ಸಿನಲ್ಲಿ ಅಂಬೇಡ್ಕರ್ ತತ್ವಾದರ್ಶಗಳಿಂದ ಪ್ರಭಾವಿತರಾದ ರಾಮಣ್ಣ, ಅಂಬೇಡ್ಕರ್ ಅವರ ಕುರಿತು ಪುರಾಣ ಬರೆಸಲು ಆರಂಭಿಸಿದರು. ರಾಮಣ್ಣನವರ ಬಾಯಿಂದ ಹೊರಬಿದ್ದ ಶಬ್ದಗಳನ್ನೇ ಪೋಣಿಸಿದಾಗ ಅದೊಂದು ಅದ್ಭುತ ಕೃತಿಯಾಯಿತು. ರಾಮಣ್ಣ ಅವರು ಅಂಬೇಡ್ಕರ್ ಬಗ್ಗೆ ಕೇಳಿ ತಿಳಿದುಕೊಂಡದ್ದನ್ನು ತಮ್ಮದೇ ಆದ ಕಲ್ಪನೆ ಬೆರೆಸಿ ತೆರೆದಿಟ್ಟಿದ್ದಾರೆ. ರಾಮಣ್ಣ ಅವರ ಕಲ್ಪನೆಗೆ ಅಕ್ಷರ ರೂಪ ಕೊಟ್ಟವರು ಅಪರ ಆಪ್ತ ಶಂಕರ್ ಅಂಗಡಿ. ರಾಮಣ್ಣ ಅವರು ಕಲ್ಪನೆಯೊಂದಿಗೆ ಹೇಳಿದ ನುಡಿಗಳನ್ನು ಅಕ್ಷರ ರೂಪಕ್ಕಿಳಿಸಿದ್ದು ಶಂಕರ್ ಎಂಬುವವರು. ಹೀಗಾಗಿ ರಾಮಣ್ಣ ಅವರ ಈ ನುಡಿಸೇವೆಯಲ್ಲಿ ಶಂಕರ್ ಅವರ ಪಾತ್ರ ಕೂಡ ಮಹತ್ವದ್ದು.

“ಇಂದು ಓದು ಬಲ್ಲವರು ಮಾತ್ರ ಅಂಬೇಡ್ಕರ್ ಬಗ್ಗೆ ತಿಳಿದುಕೊಳ್ಳುತ್ತಾರೆ. ಹೀಗಾಗಿ, ಜನಸಾಮಾನ್ಯರಿಗೂ ಅಂಬೇಡ್ಕರ್ ಅವರ ಆದರ್ಶ ಪರಿಚಯಿಸಬೇಕು. ಈ ಮೂಲಕ ಹಳ್ಳಿಗಳಲ್ಲಿನ ಅನಕ್ಷರಸ್ಥರು ಅಂಬೇಡ್ಕರ್ ಅವರನ್ನು ತಿಳಿಯಲು ಸಹಾಯವಾಗಬೇಕು,” ಎನ್ನುವ ಬಯಕೆ ರಾಮಣ್ಣ ಅವರದ್ದು. ಈ ಉದ್ದೇಶದಿಂದ ರಾಮಣ್ಣ ‘ಅಂಬೇಡ್ಕರ್ ಪುರಾಣ’ ಎನ್ನುವ ಗ್ರಂಥ ರಚಿಸಿ, ಹಳ್ಳಿಹಳ್ಳಿಗೆ ಹೋಗಿ ಅಂಬೇಡ್ಕರ್ ಬಗ್ಗೆ ಪ್ರವಚನ ನೀಡಿದ್ದಾರೆ. ಅವರಿಗೆ ಅಂಬೇಡ್ಕರ್ ಕೂಡ ಒಬ್ಬ ದೇವಮಾನವ. ಈಗಾಗಲೇ ಕೇವಲ ಗದಗ ಜಿಲ್ಲೆಯಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳ ಹಳ್ಳಿ, ಹಳ್ಳಿ ಅಲೆದು ಅಂಬೇಡ್ಕರ್ ಕುರಿತು ಪ್ರವಚನ ನೀಡುವ ಮೂಲಕ ಸಂತೃಪ್ತಿ ಕಾಣುತ್ತಿದ್ದಾರೆ. ಕೇವಲ ಪುರಾಣ ಗ್ರಂಥ ಅಷ್ಟೆ ಅಲ್ಲದೆ, ಅಂಬೇಡ್ಕರ್ ಕುರಿತಾಗಿ ಆರು ಕೃತಿ ಬರೆದಿದ್ದಾರೆ. ಈ ಮೂಲಕ ಅನುದಿನ, ಅನುಕ್ಷಣವೂ ಅಂಬೇಡ್ಕರ್ ಸ್ಮರಣೆಯಲ್ಲಿದ್ದಾರೆ ರಾಮಣ್ಣ.

ಇದನ್ನೂ ಓದಿ : ಸಾಮಾಜಿಕ ಸಮಾನತೆಯ ಹರಿಕಾರ ಅಂಬೇಡ್ಕರ್ 

ರಾಮಣ್ಣ ಅವರದ್ದು ತೀರಾ ಕಡುಬಡತನದ ಕುಟುಂಬ. ಹಾಗಾಗಿ ಪುಸ್ತಕ ಪ್ರಕಟಣೆಗೆ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಇವರ ಕಾಳಜಿಯನ್ನರಿತ ಗದುಗಿನ ತೋಂಟದಾರ್ಯ ಮಠ ಪುಸ್ತಕ ಪ್ರಕಟಣೆಗೆ ಸಹಾಯ ನೀಡಿದೆ. ಜೊತೆಗೆ ಶ್ರೀಮಠದಿಂದ ಪ್ರತಿವರ್ಷ ರಾಮಣ್ಣ ಅವರ ಮನೆಗೆ ದವಸ ಧಾನ್ಯ ಪೂರೈಸಲಾಗುತ್ತಿದೆ. ರಾಮಣ್ಣ ಅವರ ಕಾಳಜಿ ಹಾಗೂ ಸಾಹಿತ್ಯ ಕೃಷಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಅವಕಾಶ ಕೂಡ ಇವರಿಗೆ ಲಭಿಸಿತ್ತು. ಸದ್ಯ, ಈ ಅಪರೂಪದ ಅಂಬೇಡ್ಕರ್ ಪ್ರೇಮಿಯ ಕುಟುಂಬಕ್ಕೆ ಆರ್ಥಿಕ ನೆರವಿನ ಅವಶ್ಯಕತೆ ಇದೆ. ಜೊತೆಗೆ ರಾಮಣ್ಣ, ಅಂಬೇಡ್ಕರ್ ಅವರನ್ನು ಇನ್ನಷ್ಟು ಹಳ್ಳಿಗೆ ಕೊಂಡೊಯ್ಯಲೂ ಸಹಾಯವಾಗಲಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More