ವಿಡಿಯೋ ಸ್ಟೋರಿ | ಶಂಕಿತ ಚಿಕೂನ್ ಗುನ್ಯಾದಿಂದಾಗಿ ಊರಿಗೆ ಊರೇ ಕಂಗಾಲು

ಶಂಕಿತ ಚಿಕೂನ್ ಗುನ್ಯಾಕ್ಕೆ ಗದಗ ಜಿಲ್ಲೆಯ ಈ ಗ್ರಾಮ ಬೆಚ್ಚಿಬಿದ್ದಿದೆ. ಕಳೆದೊಂದು ವಾರದಿಂದ ವಿಪರೀತ ಜ್ವರದಿಂದ ಬಳಲುತ್ತಿರೋ ಗ್ರಾಮಸ್ಥರು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಸ್ವಚ್ಛತೆಯ ಕೊರತೆ ಹಾಗೂ ಪಂಚಾಯತಿಯ ನಿರ್ಲಕ್ಷವೇ ತಮ್ಮ ಈ ಸ್ಥಿತಿಗೆ ಕಾರಣ ಅನ್ನೋದು ಗ್ರಾಮಸ್ಥರ ಅಳಲು

ಜ್ವರದ ಕಾಯಿಲೆಯಿಂದ ಆಸ್ಪತ್ರೆಯಲ್ಲಿ ಜನರ ನರಳಾಟವಾದರೆ, ಬಡಜನರೊಂದಿಗೆ ಗ್ರಾಮ ಪಂಚಾಯತಿ ಚೆಲ್ಲಾಟ ಆಡುತ್ತಿದೆ. ಇದರಿಂದಾಗಿ ಚಿಕಿತ್ಸೆ ಕೊರತೆಯಿಂದ ಕಾಯಿಲೆಗೊಳಗಾದವರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ವೀರಾಪೂರ್ ಗ್ರಾಮದ ದುಸ್ಥಿತಿ.

ಶಂಕಿತ ಚಿಕೂನ್ ಗುನ್ಯಾಕ್ಕೆ ಇಡೀ ಗ್ರಾಮ ಬೆಚ್ಚಿಬಿದ್ದಿದೆ. ಕಳೆದೊಂದು ವಾರದಿಂದ ವಿಪರೀತ ಜ್ವರದಿಂದ ಬಳಲುತ್ತಿರುವ ಗ್ರಾಮಸ್ಥರು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆಯ ಕೊರತೆ ಹಾಗೂ ಪಂಚಾಯತಿಯ ನಿರ್ಲಕ್ಷವೇ ತಮ್ಮ ಈ ಸ್ಥಿತಿಗೆ ಕಾರಣ ಅನ್ನೋದು ಗ್ರಾಮಸ್ಥರ ಆಕ್ರೋಶ.

ಗ್ರಾಮದ ಅಭಿವೃದ್ಧಿ ಬಗ್ಗೆ ಗ್ರಾಮ ಪಂಚಾಯತಿ ಕಣ್ತೆರೆದು ನೋಡಬೇಕಿತ್ತು. ಆದರೆ, ಗ್ರಾಮ ಪಂಚಾಯತಿ ನಿರ್ಲಕ್ಷದಿಂದ ಇಡೀ ಊರು ಗಬ್ಬೆದ್ದು ನಾರುವಂತಾಗಿದೆ. ಪರಿಣಾಮವಾಗಿ, ಈಗ ಶಂಕಿತ ಚಿಕೂನ್ ಗುನ್ಯಾ ಸಮಸ್ಯೆಯಿಂದ ಜನ ನರಕಯಾತನೆ ಅನುಭವಿಸುವಂತಾಗಿದೆ. ವಾರದ ಅವಧಿಯಲ್ಲಿ 30ಕ್ಕೂ ಹೆಚ್ಚು ಜನರು ತೀವ್ರ ಜ್ವರಕ್ಕೆ ತುತ್ತಾಗಿದ್ದಾರೆ.

ಸದ್ಯ 30 ಕ್ಕೂ ಹೆಚ್ಚು ಜನ ಗಜೇಂದ್ರಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾರದಿಂದ ಅನಾರೋಗ್ಯ ಸಮಸ್ಯೆ ತೀವ್ರವಾಗಿದ್ದರೂ ಆರೋಗ್ಯ ಇಲಾಖೆ ಕ್ಯಾರೇ ಎನ್ನುತ್ತಿಲ್ಲ. ಚಿಕಿತ್ಸೆ ಬೇಕೆಂದರೆ ಗಜೇಂದ್ರಗಡ ಆಸ್ಪತ್ರೆಗೆ ಹೋಗಬೇಕಾಗಿದೆ. ಕಾಯಿಲೆಗೆ ತುತ್ತಾದ ಗ್ರಾಮಸ್ಥರು ಗಜೇಂದ್ರಗಡದವರೆಗೆ ಹೋಗುವುದು ಕೂಡ ಕಷ್ಟಕರವಾಗಿದೆ. ಹೀಗಾಗಿ ವೀರಾಪೂರ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಬೇಕು ಅನ್ನೋದು ಸ್ಥಳೀಯರ ಆಗ್ರಹ.

ರಾಂಪೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ವೀರಾಪೂರ್ ಗ್ರಾಮದಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ನಿಂತಿದೆ. ಇದರಿಂದ ಇಡೀ ಗ್ರಾಮ ಸೊಳ್ಳೆಗಳ ಆವಾಸಸ್ಥಾನವಾಗಿದೆ‌. ಇನ್ನು, ಕುಡಿಯೋ ನೀರು ಪೂರೈಕೆಗೆ ಒಂದು ಬೊರ್‌ವೆಲ್ ಕೂಡ ಇದೆ. ಆದರೆ ಅದು ನೆಲಸಮಕ್ಕೆ ಇರುವುದರಿಂದ ಕೊಳಚೆನೀರು ಬೋರ್‌ವೆಲ್ ಒಳಗಿಳಿಯುವಂಥ ಸ್ಥಿತಿ ಇದೆ. ಈ ಕಾರಣಕ್ಕೇ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎನ್ನಲಾಗಿದೆ. ಆದರೆ, ಗ್ರಾಮ ಪಂಚಾಯತಿಯವರು ಮಾತ್ರ, ತಮ್ಮ ಪಾಲಿನ ಕೆಲಸವನ್ನು‌ ಪ್ರಾಮಾಣಿಕವಾಗಿ ಮಾಡಿರುವುದಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟವರು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ವಿಡಿಯೋ ಸ್ಟೋರಿ | ಎರಡು ನದಿ ಹರಿಯುವ ರಾಯಚೂರು ಮರಳು ಮಾಫಿಯಾ ಸ್ವರ್ಗ
ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣ; ಭೂಸ್ವಾಧೀನ ಸಂಬಂಧ ಧರಣಿಗೆ ರೈತರ ತಯಾರಿ
ಕಿರಿದಾದ ರಸ್ತೆಗಳಲ್ಲಿ ಕಿಕ್ಕಿರಿದ ವಾಹನಗಳು; ಕೊಡಗಿನಲ್ಲಿ ಈಗ ಹೊಸ ತಲೆನೋವು
Editor’s Pick More