ವಿಡಿಯೋ ಸ್ಟೋರಿ | ಗ್ರಾಮಸ್ಥರು ತೋಡಿದ ಲಂಚದ ಖೆಡ್ಡಾಕ್ಕೆ ಬಿದ್ದ ಪಿಡಿಓ!

ಸರ್ಕಾರದಿಂದ ಉಚಿತವಾಗಿ ಪಹಣಿ ನೀಡುವ ಕಾನೂನಿದ್ದರೂ ಪಿಡಿಓ ಅಕ್ಕಮಹಾದೇವಿ ಹಣಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದಾರೆ. ಗ್ರಾಮದ ಗಿರೀಶ್ ಎನ್ನುವವರಿಗೆ ಹಣದ ಬೇಡಿಕೆ ಇಟ್ಟು ಪ್ರತಿ ಪಹಣಿಗೆ 2000ದಂತೆ, ಎರಡು ಪಹಣಿಗೆ 4,000 ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರ ವಿಡಿಯೋ ದೂರುದಾರರ ಬಳಿ ಇದೆ!

ಫಲಾನುಭವಿಯಿಂದ ಲಂಚ ಸ್ವೀಕರಿಸಿದ ತಪ್ಪಿಗೆ ಪಿಡಿಓ ತಲೆದಂಡವಾದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೊರ್ಲಹಳ್ಳಿಯಲ್ಲಿ ನಡೆದಿದೆ. ಕೆಲವು ತಿಂಗಳಿಂದ ಇಲ್ಲಿನ ಪಿಡಿಓ ಅಕ್ಕಮಹಾದೇವಿ ಅವರ ಲಂಚಾವತಾರ ವೀಪರೀತವಾಗಿತ್ತು. ಹೀಗಾಗಿ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಮೇಲಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಅವರು ಲಂಚ ಪಡೆಯುವುದನ್ನು ಚಿತ್ರಿಕರಿಸುವ ಮೂಲಕ ಅವರಿಗೆ ಬುದ್ದಿ ಕಲಿಸಲು ನಾವೇ ಮುಂದಾದೆವು ಎನ್ನುವುದು ಗ್ರಾಮಸ್ಥರ ಅಭಿಪ್ರಾಯ. ಇನ್ನು ಲಂಚ ಸ್ವೀಕರಿಸಿದ ತಪ್ಪಿಗೆ ಪಿಡಿಓ ಅಕ್ಕಮಹಾದೇವಿ ಇಂದು ಅಮಾನತಾಗಿದ್ದಾರೆ. ಈ ಮೂಲಕ ಲಂಚಬಾಕ ಅಧಿಕಾರಿಗಳಿಗೆ ಕೊರ್ಲಹಳ್ಳಿ‌ ಗ್ರಾಮಸ್ಥರು ಬುದ್ದಿ ಕಲಿಸುವ‌ ಮೂಲಕ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದಂತಾಗಿದೆ.

ಸರ್ಕಾರದಿಂದ ಉಚಿತವಾಗಿ ಪಹಣಿ ನೀಡುವ ಕಾನೂನಿದ್ದರೂ ಪಿಡಿಓ ಅಕ್ಕಮಹಾದೇವಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಗ್ರಾಮದ ಗಿರೀಶ್ ಎನ್ನುವವರಿಗೆ ಹಣದ ಬೇಡಿಕೆ ಇಟ್ಟು ಪ್ರತಿ ಪಹಣಿಗೆ 2000 ರುನಂತೆ, ಎರಡು ಪಹಣಿಗೆ 4,000 ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಇದೇ ಸಮಯ ಸದುಪಯೋಗ ಪಡೆಸಿಕೊಂಡ ಗಿರೀಶ್ ಹಾಗೂ ಆತನ ಸ್ನೇಹಿತರು ಪಕ್ಕಾ ಪ್ಲಾನ್ ಮಾಡಿ ಹಣ‍ ನೀಡಿದ್ದು ಹಾಗೂ ಪಿಡಿಓ ಸಂಭಾಷಣೆ ಸಮೇತ ವಿಡಿಯೋ ಚಿತ್ರಿಕರಿಸಿ ವೈರಲ್ ಮಾಡಿದ್ದಾರೆ.

ಪಿಡಿಓ ಅಕ್ಕಮಹಾದೇವಿಯ ಲಂಚಾವತಾರ ಹಾಗೂ ಉಪಟಳ ಬಗ್ಗೆ ಗ್ರಾಮಸ್ಥರು ಹಿರಿಯ ಅಧಿಕಾರಿಗಳ ಗಮನಕ್ಕೂ ಈ ಹಿಂದೆಯೇ ತಂದಿದ್ದಾರೆ. ಆದ್ರೆ ಪಿಡಿಓ ಮೇಲೆ ಯಾವುದೇ ಕ್ರಮಕ್ಕೂ ಅಧಿಕಾರಿಗಳು ಮುಂದಾಗಿರಲಿಲ್ಲ. ಹೀಗಾಗಿ ಪಿಡಿಓಗೆ ಪಾಠ ಕಲಿಸಲು ಗ್ರಾಮಸ್ಥರೇ ಮುಂದಾಗುವ ಮೂಲಕ ಭ್ರಷ್ಟ ಅಧಿಕಾರಿಗೆ ಬುದ್ದಿ ಕಲಿಸಿದ್ದು ವಿಶೇಷವಾಗಿದೆ. ದಾಖಲೆ ಸಮೇತ ಹಿಡಿದು ಕೊಟ್ಟ ಮೇಲಾದರೂ ಪಿಡಿಓ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ? ಎನ್ನುವ ನಿರೀಕ್ಷೆ ಗ್ರಾಮಸ್ಥರದ್ದಾಗಿತ್ತು.

ಜೊತೆಗೆ ಇವರ ಭ್ರಷ್ಟಾಚಾರದ ಬಗ್ಗೆ ತಾಲೂಕು ಪಂಚಾಯತಿ ಇಓ ಗಮನಕ್ಕೆ ತಂದಾಗಲೂ ಯಾವುದೇ ರೀತಿಯ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಇವರ ಭ್ರ‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ಷ್ಟಾಚಾರಕ್ಕೆ ಅಧಿಕಾರಿಗಳು ಸಾಥ್ ನೀಡುತ್ತಿರಬಹುದೆಂಬ ಸಂಶಯ ಎದುರಾಗಿತ್ತು. ಹೀಗಾಗಿ ಇಂಥ ಅಧಿಕಾರಿಗಳ ಮೇಲೆ ಹಾಗೂ ಅವರನ್ನು ನಿಯಂತ್ರಿಸುವಲ್ಲಿ ವಿಫಲರಾದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಗ್ರಾಮಸ್ಥರದ್ದಾಗಿತ್ತು.

ಗದಗ ಜಿಪಂ ಸಿಇಓ ಮಂಜುನಾಥ್ ಚೌವ್ಹಾಣ ಪಿಡಿಓ ಅಕ್ಕಮಹಾದೇವಿ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ ಈ ಬಗ್ಗೆ ತನಿಖಾ ವರದಿ ತರಿಸಿಕೊಂಡು ಅದರಲ್ಲಿ ತಾಲೂಕು ಪಂಚಾಯತಿ ಇಓ ಪಾತ್ರ ಕಂ‍‍‍ಡುಬಂದಲ್ಲಿ ಅವರ ಮೇಲೂ ಕ್ರಮ ಕೈಗೊಳ್ಳುವುದಾಗಿ ಸಿಇಓ ಮಂಜುನಾಥ್ ತಿಳಿಸಿದ್ದಾರೆ.

ಈ ಘಟನೆಯಿಂದ ಕೊರ್ಲಹಳ್ಳಿ ಗ್ರಾಮಸ್ಥರ ಈ ಪ್ರಯತ್ನ ಉಳಿದ ಅಧಿಕಾರಿಗಳಿಗೊಂದು ಎಚ್ಚರಿಕೆ ಗಂಟೆಯಾದಂತಾಗಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More