ಮುಂಗಾರು ವಿಶೇಷ | ಮರಗಳ ನೆರಳಿನಡಿ ತರಗೆಲೆಗಳ ನಡುವೆ ಸರೀಸೃಪಗಳ ಸರಸ

ಮಳೆಗಾಲವೆಂಬುದು ಹಲವು ವಿಶೇಷಗಳ ಕಾಲ. ಇದು ಸರೀಸೃಪಗಳ ಸಂತಾನೋತ್ಪತ್ತಿಯ ಸಮಯವೂ ಹೌದು. ದಕ್ಷಿಣ ಕನ್ನಡದ ಗುರುಪುರ ಹೋಬಳಿಯ ಮಲ್ಲೂರು ಸಮೀಪದ ತೋಟವೊಂದರಲ್ಲಿ ಕಂಡ ಕೇರೆಹಾವುಗಳ ಮಿಲನದ ದೃಶ್ಯ ಮಂಗಾರಿನ ವಿಶೇಷತೆಯನ್ನು ಹೇಳುತ್ತದೆ

ಸಾಮಾನ್ಯವಾಗಿ ಕೇರೆಹಾವುಗಳ ಸಂತಾನೋತ್ಪತ್ತಿ ಅವಧಿ ಮೇನಿಂದ ಜೂನ್‌ವರೆಗೆ. ಮಿಲನಕ್ಕೆ ಮುನ್ನ ಗಂಡು ಹಾವುಗಳು ಪರಸ್ಪರ ಸೆಣೆಸಿ ಹೆಣ್ಣಿನೊಂದಿಗೆ ಮಿಲನ ಪ್ರಕ್ರಿಯೆಯಲ್ಲಿ ತೊಡಗುವುದಿದೆ. ಮಿಲನದ ೩೦-೪೦ ದಿನಗಳ ಬಳಿಕ ಹೆಣ್ಣು ೬-೨೪ ಮೊಟ್ಟೆಗಳನ್ನಿಡುತ್ತದೆ. ಶೀತ ವಲಯದಲ್ಲಿ ಹೆಣ್ಣು ಹಾವುಗಳು ಎರಡು-ಮೂರು ವರ್ಷಕ್ಕೊಮ್ಮೆ ಗರ್ಭ ಧರಿಸಿದರೆ, ಸಮಶೀತೋಷ್ಣ ವಲಯದಲ್ಲಿ ಗರ್ಭಧಾರಣೆ ಪ್ರತಿವರ್ಷ ನಡೆಯುತ್ತದೆ. ಮರಗಳ ನೆರಳಿನಡಿ, ತರಗೆಲೆಗಳ ನಡುವೆ ಮೊಟ್ಟೆಗೆ ಹಾವು ಕಾವು ನೀಡುತ್ತದೆ. ೩೭-೫೧ ದಿನದಲ್ಲಿ ಮೊಟ್ಟೆಯೊಡೆದು ಮರಿ ಹೊರಬರುತ್ತದೆ.

ಛಾಯಾಗ್ರಹಣ: ಕೆ ವೆಂಕಟೇಶ್ ನಾಯಕ್

ವಿಡಿಯೋ | ಗದಗದ ಹಿರೆವಡ್ಡಟ್ಟಿ ಸರ್ಕಾರಿ ಆಸ್ಪತ್ರೆ ಜಲಾವೃತ, ರೋಗಿಗಳ ಪರದಾಟ
ವಿಡಿಯೋ | ೯ ವರ್ಷದ ಬಳಿಕ ಜುಲೈನಲ್ಲೇ ತುಂಬಿದ ಕೆಆರ್‌ಎಸ್, ಪ್ರವಾಹ ಭೀತಿ
ವಿಡಿಯೋ | ಮುಖ್ಯಮಂತ್ರಿಗಳೇ, ಕೊಡಗನ್ನು ಮರೆತಿರಾ ಎಂದು ಪ್ರಶ್ನಿಸಿದ್ದಾನೆ 8ನೇ ಕ್ಲಾಸ್ ಬಾಲಕ
Editor’s Pick More