ವಿಡಿಯೋ ಸ್ಟೋರಿ | ಶೂನ್ಯ ಬಂಡವಾಳ ಕೃಷಿಯಲ್ಲಿ ಬೀದರ್ ರೈತನ ಯಶೋಗಾಥೆ

ಜಾಫರ್ ಅವರದು ಶೂನ್ಯ ಬಂಡವಾಳದ ಸಹಜ ಕೃಷಿ. ಅಂದರೆ, ಉಳುಮೆ ಮಾಡಲು ಮತ್ತು ಫಸಲು ತೆಗೆಯಲು ತಗಲುವ ಖರ್ಚು ಶೂನ್ಯ. ಈ ವಿಧಾನದಲ್ಲಿ ಸ್ವತಃ ಪ್ರಾಕೃತಿಕವಾಗಿ ಕೀಟನಾಶಕ ಮತ್ತು ಗೊಬ್ಬರಗಳನ್ನು ತೋಟದಲ್ಲಿಯೇ ಸೃಷ್ಟಿಸಿ ಆರೋಗ್ಯಕರ ಬೆಳೆಯನ್ನು ತೆಗೆಯಬಹುದಾಗಿದೆ

ಬೀದರ್ ಜಿಲ್ಲೆಯನ್ನು ಸತತವಾಗಿ ಕಾಡಿದ ಬರದ ಬೇಗೆಯಲ್ಲಿಯೂ ಉತ್ತಮ ಬೆಳೆ ತೆಗೆದವರು ಚಿಟ್ಟ ಗ್ರಾಮದ ಮಹಮ್ಮದ್ ಜಾಫರ್. ತಮ್ಮ ಎರಡು ಹೆಕ್ಟೇರ್ ಜಮೀನಿನಲ್ಲಿ ಅವರು ಪಪ್ಪಾಯಿ, ಮಾವು, ಬಾಳೆ, ಸೀತಾಫಲ, ತರಕಾರಿಗಳು ಸೇರಿದಂತೆ ಹಲವು ರೀತಿಯ ಮಿಶ್ರ ತಳಿಗಳನ್ನು ಬೆಳೆಸಿ ಯಶಸ್ವಿ ರೈತ ಎನಿಸಿಕೊಂಡಿದ್ದಾರೆ. ಒಂದೇ ಬಾರಿ ಹತ್ತು ವಿಧದ ಬೆಳೆಗಳನ್ನು ಹಾಕಿ, ವರ್ಷವಿಡೀ ಒಂದಲ್ಲ ಒಂದು ಬೆಳೆ ಫಸಲು ಕೊಡುವಂತೆ ಮಾಡಿಕೊಂಡು ಲಕ್ಷಾಂತರ ಆದಾಯ ಪಡೆಯುತ್ತಿದ್ದಾರೆ ಈ ರೈತ.

ಜಾಫರ್ ಅವರದು ಶೂನ್ಯ ಬಂಡವಾಳದ ಸಹಜ ಕೃಷಿ. ಅಂದರೆ, ಉಳುಮೆ ಮಾಡಲು ಮತ್ತು ಫಸಲು ತೆಗೆಯಲು ತಗಲುವ ಖರ್ಚು ಶೂನ್ಯ. ಈ ವಿಧಾನದಲ್ಲಿ ರೈತರು ಗೊಬ್ಬರಗಳು ಮತ್ತು ಕೀಟನಾಶಕಗಳನ್ನು ಹೊರಗಿನಿಂದ ಖರೀದಿಸುವ ಅಗತ್ಯವಿರುವುದಿಲ್ಲ. ಕೀಟನಾಶಕ ಮತ್ತು ಗೊಬ್ಬರಗಳನ್ನು ತೋಟದಲ್ಲಿಯೇ ಪ್ರಾಕೃತಿಕವಾಗಿ ಸೃಷ್ಟಿಸಲಾಗುತ್ತದೆ. ಈ ಮಾದರಿಯಲ್ಲಿ ಆರೋಗ್ಯಕರ ಬೆಳೆಯನ್ನೂ ತೆಗೆಯಬಹುದಾಗಿದೆ.

ಹೀಗೆ ವಿವಿಧ ಬೆಳೆಗಳನ್ನು ಬೆಳೆಯುವ ನಿಟ್ಟಿನಲ್ಲಿ ಹತ್ತಾರು ಸಂಶೋಧನೆಗಳನ್ನೂ ಮಹಮ್ಮದ್ ಜಾಫರ್ ಮಾಡಿದ್ದಾರೆ. ತಮ್ಮ ಜಮೀನಿನಲ್ಲಿರುವ ಬಾವಿಯಲ್ಲಿ ಮೀನುಗಳನ್ನು ಸಾಕುವ ವಿಚಾರವಾಗಿ ಹೊಸ ಅನ್ವೇಷಣೆಗಳನ್ನೂ ಪ್ರಯತ್ನಿಸಿದ್ದಾರೆ. ಮೀನುಗಳಿಗೆ ಬೆಳಕಿನ ಮೂಲಕ ಕೀಟಗಳನ್ನು ಆಹಾರವಾಗಿ ನೀಡುವಂತಹ ಹೊಸ ಪ್ರಯತ್ನವನ್ನು ಯಶಸ್ವಿಯಾಗಿ ಅಳವಡಿಸಿಕೊಂಡಿದ್ದಾರೆ. ಬೆಟ್ಟದಲ್ಲಿ ಕೃಷಿ ಹೊಂಡಗಳನ್ನು ಸ್ವತಃ ತೋಡಿದ್ದಾರೆ. ಈ ಹೊಂಡಗಳಲ್ಲಿ ತಮ್ಮ ಬೆಳೆಗಳಿಗೆ ಗೊಬ್ಬರಯುಕ್ತ ನೀರನ್ನು ಹರಿಸುತ್ತಿದ್ದಾರೆ.

ಇದನ್ನೂ ಓದಿ : ಗೋವಾದಲ್ಲಿ ಸದ್ದು ಮಾಡಿದ ರಾಜಕಾರಣಿಗಳ ಕೃಷಿ ಸವಾಲ್; ಜಮೀನಿಗಿಳಿದ ಜನನಾಯಕರು

ಕೃಷಿಯಲ್ಲಿ ಮೊಹಮ್ಮದ್ ಜಾಫರ್ ಅವರು ಮಾಡಿರುವ ಹೊಸ ಪ್ರಯತ್ನಗಳಿಗೆ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯಗಳೂ ಪ್ರೋತ್ಸಾಹಿಸಿ, ಹಲವು ಪ್ರಶಸ್ತಿ ನೀಡಿ ಗೌರವಿಸಿವೆ. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜಾಫರ್ ಅವರ ತೋಟಕ್ಕೆ ಭೇಟಿ ನೀಡಿ ಅಧ್ಯಯನ ಮಾಡುವುದು ಸಾಮಾನ್ಯ ವಿಚಾರವಾಗಿದೆ. ಜಾಫರ್ ಅವರು ಕೃಷಿಯಲ್ಲಿ ಮಾಡಿರುವ ಪ್ರಯೋಗಗಳು ವಿದ್ಯಾರ್ಥಿಗಳ ಓದಿಗೆ ಆಹಾರವಾಗಿ ಬದಲಾಗಿದೆ. ಕಡಿಮೆ ನೀರು ಬಳಸಿ ಹೆಚ್ಚಿನ ಇಳುವರಿ ಪಡೆದಿರುವುದು ಜಾಫರ್ ಅವರ ಸಾಧನೆ.

ಜಾಫರ್ ತಮ್ಮ ಹೊಸ ಪ್ರಯತ್ನಗಳಿಗೆ ಸಲಹೆ, ಸೂಚನೆಗಳನ್ನು ಸದಾ ಕೃಷಿ ಇಲಾಖೆಯಿಂದ ಪಡೆದುಕೊಳ್ಳುತ್ತಾರೆ. ಬದಲಾಗುತ್ತಿರುವ ದೇಶದ ಹವಾಮಾನ ಸ್ಥಿತಿಯಲ್ಲಿ ಮಿಶ್ರಕೃಷಿ ಮಾಡಿದಲ್ಲಿ ಮಾತ್ರವೇ ರೈತರು ಲಾಭದಾಯಕ ಬೆಳೆ ತೆಗೆಯಬಹುದು ಎನ್ನುವುದು ಜಾಫರ್ ಸ್ಪಷ್ಟ ನುಡಿ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More