ವಿಡಿಯೋ ಸ್ಟೋರಿ | ಬೆಳೆಗಳ ವಿವರ ಪಡೆಯಲು ಡ್ರೋಣ್ ಸಮೀಕ್ಷೆಗೆ ಮುಂದಾದ ಸರ್ಕಾರ

ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಕೃಷಿ ಕ್ಷೇತ್ರದಲ್ಲಿ ಮಾನವರಹಿತ ವೈಮಾನಿಕ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಡ್ರೋಣ್ ತಂತ್ರಜ್ಞಾನ ಬಳಸುತ್ತಿದೆ. ಪ್ರಾಯೋಗಿಕ ಸಮೀಕ್ಷೆಗಾಗಿ ಹಾವೇರಿ ತಾಲೂಕನ್ನು ಆಯ್ದುಕೊಂಡಿದ್ದು, ಈ ವೈಮಾನಿಕ ಸಮೀಕ್ಷೆಗೆ ಆ.೨ರಂದು ಚಾಲನೆ ಸಿಕ್ಕಿದೆ

ಯಾವ ಕ್ಷೇತ್ರದಲ್ಲಿ ಯಾವ ಬೆಳೆ ಇದೆ? ಎಷ್ಟು ಪ್ರಮಾಣದಲ್ಲಿದೆ? ಅವುಗಳ ಆರೋಗ್ಯ ಹೇಗಿದೆ? ಹೀಗೆ, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಕಲೆಹಾಕಲು ಸರ್ಕಾರ, ಅತ್ಯಾಧುನಿಕ ತಂತ್ರಜ್ಞಾನದ ಡ್ರೋಣ್ ಬಳಸಿ ಸಮೀಕ್ಷೆ ಮಾಡಲು ನಿರ್ಧರಿಸಿದೆ.

ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಕೃಷಿ ಕ್ಷೇತ್ರದಲ್ಲಿ ಮಾನವರಹಿತ ವೈಮಾನಿಕ ಸಮೀಕ್ಷೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಡ್ರೋಣ್ ತಂತ್ರಜ್ಞಾನ ಬಳಸುತ್ತಿದೆ. ಪ್ರಾಯೋಗಿಕ ಸಮೀಕ್ಷೆಗಾಗಿ ಹಾವೇರಿ ತಾಲೂಕನ್ನು ಆಯ್ದುಕೊಂಡಿದ್ದು, ಈ ವೈಮಾನಿಕ ಸಮೀಕ್ಷೆಗೆ ಆ.೨ರಂದು ಚಾಲನೆ ಸಿಕ್ಕಿದೆ. ಜಿಲ್ಲಾಧಿಕಾರಿ ಎಂ ವಿ ವೆಂಕಟೇಶ ಚಾಲನೆ ನೀಡಿದ್ದಾರೆ.

ಹಾವೇರಿ ತಾಲೂಕಿನ ಕಸಬಾ ಹೋಬಳಿಯಲ್ಲಿನ ೨೦೦ ಚದರ ಕಿಮೀ ಪ್ರದೇಶದಲ್ಲಿನ ಬೆಳೆಗಳ ವಿಧ, ಅವುಗಳ ಪ್ರದೇಶ ವಿಸ್ತೀರ್ಣ, ಬೆಳೆ ಆರೋಗ್ಯ ಹಾಗೂ ಇಳುವರಿಯ ಪ್ರಾಥಮಿಕ ವರದಿ ಬಗ್ಗೆ ಮೂರು ತಿಂಗಳ ಕಾಲ ಮುಂಗಾರು ಋತುವಿನಲ್ಲಿ ಡ್ರೋಣ್ ಕಾರ್ಯಾಚರಣೆ ಮೂಲಕ ಸಮೀಕ್ಷೆ ನಡೆಯಲಿದೆ. ಆರಂಭದಿಂದ ಬೆಳೆ ಕಟಾವಿನ ತನಕ ಮೂರು ಹಂತದಲ್ಲಿ ಸಮೀಕ್ಷೆ ನಡೆಯಲಿದೆ.

ಜಿಲ್ಲೆಯಲ್ಲಿ ಬೆಳೆಗಳ ಬಗ್ಗೆ ಅಸ್ಪಷ್ಟ ಮಾಹಿತಿ, ಅಂಕಿ-ಅಂಶಗಳ ಕೊರತೆ, ಬೆಳೆವಿಮೆ ವಿತರಣೆಯಲ್ಲಿನ ಗೊಂದಲ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸರ್ಕಾರ ಕೃಷಿಗೆ ಸಂಬಂಧಿಸಿ ಪ್ರಾಯೋಗಿಕ ವೈಮಾನಿಕ ಮಾನವರಹಿತ ಸಮೀಕ್ಷೆಗೆ ಹಾವೇರಿ ತಾಲೂಕನ್ನು ಆಯ್ದುಕೊಂಡಿದೆ. ವೈಮಾನಿಕ ಸಮೀಕ್ಷೆಯಲ್ಲಿ ತ್ರಿಡಿ ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಬೆಳೆಗಳ ಸ್ಥಿತಿಗತಿ, ನೆರೆ, ಬರ, ಕೀಟಬಾಧೆ ಇನ್ನಿತರ ಸಮಗ್ರ ಮಾಹಿತಿ ದಾಖಲು ಮಾಡಿಕೊಳ್ಳಲಾಗುತ್ತದೆ. ಬೆಳೆ ನಷ್ಟ ಪರಿಹಾರ, ಬೆಳೆವಿಮೆ ಮತ್ತಿತರ ಸೌಲಭ್ಯ ನೀಡಲು ಇದರಿಂದ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮಾನವರಹಿತ ವೈಮಾನಿಕ ವ್ಯವಸ್ಥೆ ಅಥವಾ ಡ್ರೋಣ್ ತಂತ್ರಜ್ಞಾನ ಹೆಚ್ಚು ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ, ಕೆ ಕಸ್ತೂರಿರಂಗನ್ ಅಧ್ಯಕ್ಷತೆಯಲ್ಲಿ ಸ್ಥಾಪಿಸಿರುವ ಕರ್ನಾಟಕ ಜ್ಞಾನ ಆಯೋಗದ ಶಿಫಾರಸಿನ ಅನ್ವಯ ಈ ಯೋಜನೆ ಅನುಷ್ಠಾನಗೊಳಿಸುತ್ತಿದೆ.

ಈ ಹೊಸ ಯೋಜನೆಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯು ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಕೈಗೊಂಡಿದೆ. ಯೋಜನೆಯನ್ನು ದೆಹಲಿಯ ದೋಣ್‌ ಕಂಪನಿ ಆಮ್ನಿಪ್ರೆಸೆಂಟ್ ರೊಬೋಟ್ ಟೆಕ್ನಾಲಜಿಸ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

ಇದನ್ನೂ ಓದಿ : ಫೋಟೋ ಸ್ಟೋರಿ | ಬಂಜರು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ರೈತ ಗುರುನಾಥ

ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಕೃಷಿ ಅಧಿಕಾರಿಗಳು ಬೆಳೆ ದಾಖಲೀಕರಣ ಹಾಗೂ ಸಮೀಕ್ಷೆ ನಡೆಸುವ ಪದ್ಧತಿ ಆರಂಭದಲ್ಲಿ ಜಾರಿಯಲ್ಲಿತ್ತು. ಕಳೆದ ಸಾಲಿನಲ್ಲಿ ಮೊಬೈಲ್ ಆಪ್ ಮೂಲಕ ಬೆಳೆಗಳ ದಾಖಲೀಕರಣಗೊಳಿಸಿ ಸಮೀಕ್ಷೆ ನಡೆಸುವ ಕಾರ್ಯ ಕೈಗೊಳ್ಳಲಾಗಿತ್ತು. ಇದೀಗ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ಬೆಳೆ ಸಮೀಕ್ಷೆ ನಡೆಸುವ ನಿಟ್ಟಿನಲ್ಲಿ ಜಿಲ್ಲೆಯ ಕಸಬಾ ಹೋಬಳಿಯನ್ನು ಆಯ್ಕೆ ಮಾಡಲಾಗಿದೆ. ಡ್ರೋಣ್ ಕ್ಯಾಮೆರಾ ಬಳಸಿ ಹಾವೇರಿ ಜಿಲ್ಲೆಯ ಕಸಬಾ ಹೋಬಳಿಯಲ್ಲಿ ಸುಮಾರು ೨೦೦ ಚದರ ಕಿಮೀ ಪ್ರದೇಶದಲ್ಲಿ ಬೆಳೆಗಳ ವಿಧ, ಅವುಗಳ ಪ್ರದೇಶದ ವಿಸ್ತೀರ್ಣ, ಬೆಳೆಗಳ ಆರೋಗ್ಯ, ಇಳುವರಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಖಲು ಮಾಡಲಾಗುತ್ತದೆ. ಮೂರು ಹಂತಗಳಲ್ಲಿ ನಡೆಯುವ ಈ ದಾಖಲೀಕರಣವನ್ನು ಡ್ರೋಣ್ ಕ್ಯಾಮೆರಾ ಸಂಗ್ರಹಿಸಿ ಇದಕ್ಕಾಗಿ ರೂಪಿಸಲಾದ ಸಾಫ್ಟವೇರ್‌ಗೆ ವರ್ಗಾಯಿಸುತ್ತಿದೆ. ಭೂ ದಾಖಲೆ ಇಲಾಖೆಯ ನಕ್ಷೆ ಮತ್ತು ಸರ್ವೆ ನಂಬರ್ ಜೋಡಿಸಿ ಸಮೀಕ್ಷೆಯನ್ನು ಅತ್ಯಂತ ವೈಜ್ಞಾನಿಕವಾಗಿ ದಾಖಲೀಕರಣ ಮಾಡಲಾಗುತ್ತಿದೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More