ವಿಡಿಯೋ ಸ್ಟೋರಿ | ಕೇರಳದಲ್ಲಿ ವ್ಯಾಪಕ ಮಳೆ, ಕಬಿನಿ ನದಿಪಾತ್ರದಲ್ಲಿ ಪ್ರವಾಹ

ಕೇರಳದ ವೈನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಕಬಿನಿ ಜಲಾಶಯದಿಂದ ೮೦ ಸಾವಿರ ಕ್ಯೂಸೆಕ್ಸ್‌ಗೂ ಹೆಚ್ಚು ನೀರು ಹರಿಯುತ್ತಿದೆ. ಇದರಿಂದ ಕಪಿಲೆ ಅಪಾಯ ಮಟ್ಟದಲ್ಲಿ ಪ್ರವಹಿಸುತ್ತಿದ್ದು, ನದಿಪಾತ್ರದ ಜಮೀನು, ಮನೆ ಮಠಗಳು ಜಲಾವೃತವಾಗಿವೆ

ಕೇರಳದಲ್ಲಿ ವಿಪರೀತ ಮಳೆಯಾಗಿ ವ್ಯಾಪಕ ಹಾನಿ ಸಂಭವಿಸಿದೆ. ವೈನಾಡು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಕಪಿಲಾ ನದಿ ತುಂಬಿ ಹರಿಯುತ್ತಿದ್ದು, ಎಚ್ ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ನಿರಂತರವಾಗಿ ೮೦ ಸಾವಿರ ಕ್ಯೂಸೆಕ್ಸ್‌ಗೂ ಹೆಚ್ಚು ನೀರನ್ನು ಹೊರ ಹರಿಸಲಾಗುತ್ತಿದೆ. ಇದರಿಂದ ಕಪಿಲೆ ಅಪಾಯ ಮಟ್ಟದಲ್ಲಿ ಪ್ರವಹಿಸುತ್ತಿದ್ದು, ನದಿಪಾತ್ರದ ಜಮೀನು, ಮನೆಗಳು ಜಲಾವೃತವಾಗಿವೆ. ಹಲವು ಹಳ್ಳಿಗಳಲ್ಲಿ ಜಲಭೀತಿ ಎದುರಾಗಿದೆ.

ನಂಜನಗೂಡು ಸಮೀಪದ ಮಲ್ಲನ ಮೂಲೆ ಮಠದ ಬಳಿ ಮೈಸೂರು-ಊಟಿ ಹೆದ್ದಾರಿಯ ಮೇಲೆ ನದಿ ಉಕ್ಕಿ ಹರಿಯುತ್ತಿದ್ದು, ಎರಡು ದಿನದಿಂದ ಈ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ. ಅಲ್ಲದೆ, ನಂಜನಗೂಡು ಪಟ್ಟಣದ ಕೆಲವು ಬಡಾವಣೆಗಳೂ ಜಲಾವೃತವಾಗಿವೆ. ಪುನರ್ವಸತಿ, ಗಂಜಿಕೇಂದ್ರ ಆರಂಭ ಸಹಿತ ಅನೇಕ ಮುಂಜಾಗ್ರತಾ ಕ್ರಮಗಳನ್ನು ಮೈಸೂರು ಜಿಲ್ಲಾಡಳಿತ ಕೈಗೊಂಡಿದೆ. ಶನಿವಾರ (ಆ.೧೧) ಮಧ್ಯಾಹ್ನ ‘ದಿ ಸ್ಟೇಟ್' ಕ್ಯಾಮೆರಾ ಕಣ್ಣಿಗೆ ಕಂಡ ಪ್ರವಾಹ ಚಿತ್ರಣವಿದು.

ಇದನ್ನೂ ಓದಿ : ವಿಡಿಯೋ ಸ್ಟೋರಿ | ದಾಖಲೆಯ ಭಾರಿ ಮಳೆಯ ಅಬ್ಬರಕ್ಕೆ ನಲುಗಿದ ಕೇರಳ
ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More