ಕೊಡಗು ಜಲಪ್ರಳಯ | ಈ ಅವಿಭಕ್ತ ಕುಟುಂಬಕ್ಕೆ ಈಗ ನೆಂಟರ ಮನೆಯೇ ಗತಿ

ಈಗ ಕೇವಲ ಅವಶೇಷವಾಗಿ ಉಳಿದಿರುವ ಈ ಮನೆಯಲ್ಲಿ ಸುಮಾರು ೧೦ ಮಂದಿ ವಾಸವಿದ್ದರು. ಈ ಅವಿಭಕ್ತ ಕುಟುಂಬ ವಾಸವಿದ್ದ ಮನೆ ಮೇಲೆ ಗುಡ್ಡ ಕುಸಿದ ಪರಿಣಾಮ ಅವರು ಬಂಧುಗಳ ಮನೆಗಳನ್ನು ಆಶ್ರಯಿಸಬೇಕಾಗಿ ಬಂದಿದೆ. ಇದು ಮಡಿಕೇರಿಯ ಮಂಗಳದೇವಿ ನಗರದ ಗೋಪಾಲ್ ಅವರ ಕತೆ

ಮಡಿಕೇರಿಯ ಮಂಗಳದೇವಿ ನಗರದ ಈ ಮನೆ ಈಗ ಅವಶೇಷಗಳ ಗೂಡು. ಆದರೆ ವಾರದ ಹಿಂದೆ ಈ ಮನೆಯಲ್ಲಿ ಅವಿಭಕ್ತ ಕುಟುಂಬವೊಂದು ನೆಲೆಸಿತ್ತು. ಗೋಪಾಲ್ ಅವರು ಈ ಮನೆಯ ಮಾಲೀಕರು. ಇದೀಗ ಈ ಕುಟುಂಬ ಬಂಧುಗಳ ಮನೆಗಳನ್ನು ಆಶ್ರಯಿಸಬೇಕಾಗಿದೆ. ಮಳೆಯ ಆರ್ಭಟ ಹೆಚ್ಚಾಗಿ ಗುಡ್ಡಗಳು ಜರಿಯುವ ಸಂಭವ ಕಾಣಿಸುತ್ತಲೇ ಗೋಪಾಲ್ ಮತ್ತು ಕುಟುಂಬಸ್ಥರು ಮನೆ ಖಾಲಿ ಮಾಡಿದ್ದರು.

“ಮುನ್ನೆಚ್ಚರಿಯಿಂದ ಮನೆ ಖಾಲಿ ಮಾಡಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಮನೆಯಲ್ಲಿದ್ದ ಪೀಠೋಪಕರಣ, ಚಿನ್ನಾಭರಣ, ಹಣ ಎಲ್ಲವು ಮಣ್ಣುಪಾಲಾಗಿದೆ,” ಎಂದು ಗೋಪಾಲ್‌ ಅವರ ಮಗ ಅನಂತ್‌ಕುಮಾರ್ ಅಳಲು ತೋಡಿಕೊಂಡರು.

ಇದನ್ನೂ ಓದಿ : ಕೊಡಗು ಪ್ರವಾಹ | ಸೋಷಿಯಲ್‌ ಮೀಡಿಯಾ ಇಲ್ಲದೆಹೋಗಿದ್ದರೆ ಪರಿಸ್ಥಿತಿ ಊಹಿಸಲಸಾಧ್ಯ

ಪಕ್ಕದಲ್ಲಿದ್ದ ಬಾಸ್ಕರ್ ಪಿಳ್ಳೆ ಅವರ ಮನೆ ಮೇಲ್ಬಾಗ ಮಣ್ಣಿನಿಂದ ಆವೃತವಾಗಿದ್ದು, ಕುಸಿಯುವ ಹಂತದಲ್ಲಿದೆ. ಇದೇ ನಗರದ ನಿವಾಸಿಗಳಾದ ಸುಂದರ್, ಕೆ ಕೆ ಬೋಪಯ್ಯ, ಟಿ ರಾಜು, ಕೃಷ್ಣ, ಸಂಜಯ್ ಕುಮಾರ್, ಕಲೀಲ್, ರಮೇಶ್, ಸುನಿತಾ, ಐದಾ, ಸುನಿಲ್ ಕುಮಾರ್, ಕಮಲಚಂದ್ರರವರ ಮನೆಗಳೂ ಕುಸಿಯುವ ಹಂತದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವರು ಬಂಧುಗಳ ಮನೆಗಳಿಗೆ ತೆರಳಿದರೆ, ಕೆಲವರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಅವಿವಾಹಿತ ಯುವತಿಯರಿಗೆ ಬಂಧಿಖಾನೆಗಳಾಗಿರುವ ಹಾಸನ ಗಾರ್ಮೆಂಟ್ ಹಾಸ್ಟೆಲ್‌ಗಳು
ಹೆಗ್ಡೆ ಬಿಜೆಪಿ ತೊರೆವ ವದಂತಿ; ಉಡುಪಿ- ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಂಚಲನ
ವಿಡಿಯೋ ಸ್ಟೋರಿ | ಮುಂಗಾರು ಮುಗಿಯುವ ಮುನ್ನವೇ ಸೊರಗಿದ ಜೋಗ ಜಲಪಾತ!
Editor’s Pick More